ಸರ್ಕಾರಿ ನೌಕರರ ವೇತನ ನೀತಿಯಲ್ಲಿ ಬದಲಾವಣೆ ! ಮೂಲ ವೇತನ 34,560ಕ್ಕೆ ಏರಿಕೆ

Fri, 01 Nov 2024-9:53 am,

ನೀವು ಕೇಂದ್ರ ಸರ್ಕಾರಿ ಉದ್ಯೋಗಿಯೇ? ನಿಮ್ಮ ಮನೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಇದ್ದಾರೆಯೇ? ಹಾಗಾದರೆ ಈ ಸುದ್ದಿ ನಿಮಗಾಗಿ. ಬಹು ಸಮಯದಿಂದ 8ನೇ ವೇತನ ಆಯೋಗ ರಚನೆಗಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆಕೊನೆಗೂಸಿಹಿ ಸುದ್ದಿ ಸಿಕ್ಕಿದೆ.

ಕೇಂದ್ರ ನೌಕರರ ಕೆಲಸದ ಪರಿಸ್ಥಿತಿಗಳ ಕುರಿತು ಚರ್ಚಿಸಲು ರಚಿಸಲಾದ ಜೆಸಿಎಂ ಸಭೆಯನ್ನು ಇದೇ ತಿಂಗಳು ನಡೆಸಲು ನಿರ್ಧರಿಸಲಾಗಿದೆ.ಈ ಸಭೆಯಲ್ಲಿ 8ನೇ ವೇತನ ಆಯೋಗ ರಚನೆ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.  

ಈ ಸಭೆಯಲ್ಲಿ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಕುರಿತು ಚರ್ಚೆಯಾಗಲಿದೆ.  ಅಂದರೆ ಹೊಸ ವೇತನ ರಚನೆಯಾಗುವ ಕಾಲ ಹತ್ತಿರವಾಗಿದೆ. 

8ನೇ ವೇತನ ಆಯೋಗವನ್ನು ಶೀಘ್ರವಾಗಿ ರಚಿಸುವಂತೆ ಕೋರಿ ನೌಕರರ ಸಂಘಟನೆಗಳು ಈಗಾಗಲೇ ಸರಕಾರಕ್ಕೆ ಎರಡು ಜ್ಞಾಪಕ ಪತ್ರಗಳನ್ನು ಸಲ್ಲಿಸಿವೆ ಎಂದು ಶಿವಗೋಪಾಲ್ ಮಿಶ್ರಾ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ. 

ವೇತನ ಆಯೋಗದ ಮುಖ್ಯ ಕಾರ್ಯವೆಂದರೆ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಸಂಬಳ, ಪಿಂಚಣಿ ಪಾವತಿಗಳು ಮತ್ತು ಇತರ ಪ್ರಯೋಜನಗಳಲ್ಲಿ ಬದಲಾವಣೆಗಳನ್ನು ಪರಿಶೀಲಿಸುವುದು, ಸುಧಾರಿಸುವುದು ಮತ್ತು ಶಿಫಾರಸು ಮಾಡುವುದು.   

ಪ್ರಸ್ತುತ ಉದ್ಯೋಗಿಗಳ ಮೂಲ ವೇತನವನ್ನು ನಿರ್ಧರಿಸುವ ಫಿಟ್‌ಮೆಂಟ್ ಅಂಶವು 2.57 ಆಗಿದೆ. ಇದನ್ನು 3.68 ಕ್ಕೆ ಬದಲಾಯಿಸಬೇಕು ಎನ್ನುವ ಬೇಡಿಕೆ ಹೆಚ್ಚಿದೆ.ಆದರೆ, ಸರ್ಕಾರ ಇದನ್ನು 1.92ಕ್ಕೆ ಬದಲಾಯಿಸಲಿದೆ ಎನ್ನಲಾಗಿದೆ.

8ನೇ ವೇತನ ಆಯೋಗದ ಶಿಫಾರಸುಗಳಲ್ಲಿ ಫಿಟ್‌ಮೆಂಟ್ ಅಂಶವನ್ನು 1.92 ಕ್ಕೆ ನಿಗದಿಪಡಿಸಿದರೆ, ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವು 18,000 ರೂ.ನಿಂದ ಸುಮಾರು 34,560 ರೂ.ಗೆ ಹೆಚ್ಚಾಗಬಹುದು ಅಂದರೆ ವೇತನವು 92% ರಷ್ಟು ಹೆಚ್ಚಾಗುತ್ತದೆ.   

ಕೇಂದ್ರ ಸರ್ಕಾರಿ ನೌಕರರು ಮಾತ್ರವಲ್ಲದೆ ಪಿಂಚಣಿದಾರರ ಪಿಂಚಣಿಯಲ್ಲಿ ಉತ್ತಮ ಏರಿಕೆಯಾಗಲಿದೆ. ನಿವೃತ್ತರಿಗೆ ಕನಿಷ್ಠ ಪಿಂಚಣಿ ಪ್ರಸ್ತುತ 9,000 ರೂ. 17,280ಕ್ಕೆ ಏರಬಹುದು. ಹಣದುಬ್ಬರ, ವೆಚ್ಚ ಮತ್ತು ಇತರ ಆರ್ಥಿಕ ಅಂಶಗಳಿಂದ ಪ್ರಭಾವಿತವಾಗಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇದು ದೊಡ್ಡ ಪರಿಹಾರವನ್ನು ನೀಡುತ್ತದೆ.  

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link