ಕೊನೆಯಾಯಿತು ಸರ್ಕಾರಿ ನೌಕರರ ನಿರೀಕ್ಷೆ! ಭಾರೀ ಹೆಚ್ಚಳದೊಂದಿಗೆ ಖಾತೆ ಸೇರುವುದು ವೇತನ ! ಎಷ್ಟಾಗಲಿದೆ ಹೆಚ್ಚಳ ಇಲ್ಲಿದೆ ಲೆಕ್ಕಾಚಾರ

Tue, 30 Jul 2024-9:28 am,

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗಷ್ಟೇ ಈ ಹಣಕಾಸು ವರ್ಷದ ಬಜೆಟ್ ಮಂಡಿಸಿದರು.8ನೇ ವೇತನ ಆಯೋಗ ರಚನೆಯ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದರು.ಆದರೆ,ಅವರು ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.ಕೇಂದ್ರ ಸರ್ಕಾರಿ ನೌಕರರಿಗೆ ಇದರಿಂದ ತೀವ್ರ ನಿರಾಸೆ ಉಂಟಾಗಿರುವುದು ಸುಳ್ಳಲ್ಲ. 

ಆದರೆ,ಇದರ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಬಂದಿದೆ.ತುಟ್ಟಿಭತ್ಯೆ ಏರಿಕೆ ಕುರಿತಂತೆ ಸರ್ಕಾರಿ ನೌಕರರಿಗೆ ಇದೀಗ ಮಾಹಿತಿ ಸಿಗಲಿದೆ.ಇದಕ್ಕಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.   

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಜುಲೈ 2024ರ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ.ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರ ಈ ಘೋಷಣೆ ಮಾಡುವ ನಿರೀಕ್ಷೆ ಇದೆ.ವೆಚ್ಚಕ್ಕೆ ಅನುಗುಣವಾಗಿ ಈ ಬಾರಿ ಕೂಡಾ ತುಟ್ಟಿಭತ್ಯೆ ಶೇ.4 ಅಥವಾ 5ರಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. 

AICPI ಸೂಚ್ಯಂಕದ ಆಧಾರದ ಮೇಲೆ ಈ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.ಮೇ 2024 ರವರೆಗಿನ AICPI ಸಂಖ್ಯೆಗಳು ಇಲ್ಲಿಯವರೆಗೆ ಲಭ್ಯವಿದೆ.ಜೂನ್ AICPI ಸೂಚ್ಯಂಕ ಸಂಖ್ಯೆಗಳು ಲಭ್ಯವಾದ ನಂತರವೇ ಜುಲೈ ತುಟ್ಟಿಭತ್ಯೆ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.

ಜುಲೈನಿಂದ ಜಾರಿಗೆ ಬರುಂತೆ ಡಿಎಯನ್ನು ಶೇ.4ರಷ್ಟು ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಒಟ್ಟು ತುಟ್ಟಿ ಭತ್ಯೆ ಶೇ.54ಕ್ಕೆ ಏರಿಕೆಯಾಗಲಿದೆ. ಈ ಹೆಚ್ಚಳ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗಲಿದೆ.  

7 ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ.ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಈ ಹೆಚ್ಚಳ ಘೋಷಣೆ ಯಾಗುತ್ತದೆ.ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸಂಖ್ಯೆಗಳ ಆಧಾರದ ಮೇಲೆ ಜನವರಿಯ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ ಮತ್ತು ಜನವರಿಯಿಂದ ಜೂನ್‌ವರೆಗಿನ AICPI ಸಂಖ್ಯೆಗಳ ಆಧಾರದ ಮೇಲೆ ಜುಲೈ ತಿಂಗಳ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ.

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದರಿಂದ ರಿಯಾಯಿತಿ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link