ಸರ್ಕಾರಿ ನೌಕರರ ವೇತನದಲ್ಲಿ 18,000 ರೂ.ಹೆಚ್ಚಳ !ಸರ್ಕಾರದ ಅಧಿಕೃತ ಆದೇಶದ ಅನ್ವಯ ಸ್ಯಾಲರಿ ಹೈಕ್ ಲೆಕ್ಕಾಚಾರ ಇಲ್ಲಿದೆ
ಹಬ್ಬ ಹರಿದಿನಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಶೇ 3ರಷ್ಟು ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಈ ಹೆಚ್ಚಳ ಜುಲೈ 1, 2024 ರಿಂದಲೇ ಜಾರಿಗೆ ಬರಲಿದೆ.
ಈ ಆದೇಶದ ಅನ್ವಯ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ಡಿ ಆರ್ 53% ಕ್ಕೆ ಏರಿಕೆಯಾಗಿದೆ.ಇದರೊಂದಿಗೆ ತಿಂಗಳಿಗೆ ಪಡೆಯುವ ವೇತನದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ.
ಮಾಸಿಕ ವೇತನ 30,000 ರೂ ಆಗಿದ್ದು ಮೂಲ ವೇತನ 18,000 ರೂ.ಆಗಿದ್ದರೆ ಅವರು ಪ್ರಸ್ತುತ 9,000 ರೂ.ಗಳನ್ನು ತುಟ್ಟಿ ಭತ್ಯೆಯಾಗಿ ಪಡೆಯುತ್ತಿದ್ದಾರೆ.ಇದೀಗ ತುಟ್ಟಿಭತ್ಯೆ 53% ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಡಿಎ ಕೂಡಾ 9,540 ರೂ.ಆಗುತ್ತದೆ.
ಇನ್ನು ಮಾಸಿಕ ವೇತನ 50,000 ರೂ. ಆಗಿದ್ದರೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ತಿಂಗಳಿಗೆ 1,500 ಡಿಎ ಹೆಚ್ಚಳವಾಗಲಿದೆ.ಇದನ್ನು ವಾರ್ಷಿಕವಾಗಿ ಲೆಕ್ಕ ಹಾಕಿದರೆ 18,000 ರೂ. ಏರಿಕೆಯದ ಹಾಗೆ.
ಈ ಬಾರಿಯ ತುಟ್ಟಿಭತ್ಯೆ ಹೆಚ್ಚಳವನ್ನು ಅಕ್ಟೋಬರ್‌ನಲ್ಲಿ ಘೋಷಿಸಲಾಗಿದೆಯಾದರೂ ಈ ದರ ಜುಲೈ ತಿಂಗಳಿನಿಂದಲೇ ಅನ್ವಯವಾಗಲಿದೆ.ಇದರೊಂದಿಗೆ ಜುಲೈನಿಂದ ಸೆಪ್ಟೆಂಬರ್ ವರೆಗೆ 3 ತಿಂಗಳ ಡಿಎ ಬಾಕಿ ಕೂಡಾ ಖಾತೆ ಸೇರುತ್ತದೆ.