Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. ಆಭರಣ ಪ್ರಿಯರಿಗೆ ಶಾಕ್! 10 ಗ್ರಾಂ 22k ಬಂಗಾರದ ಬೆಲೆ ಎಷ್ಟು?
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಲೋಹಗಳ ಬೆಲೆ ಭಾರೀ ಇಳಿಕೆಯಾಗಲಿದೆ ಎಂದುಕೊಂಡಿದ್ದ ಆಭರಣ ಪ್ರಿಯರಿಗೆ ಮತ್ತೊಮ್ಮೆ ಶಾಕ್ ಸಿಕ್ಕಿದೆ ಎನ್ನಬಹುದು. ಸದ್ಯ ಚಿನ್ನದ ಬೆಲೆ 78 ಸಾವಿರದ ಸಮೀಪದಲ್ಲಿದೆ.
ಮದುವೆಯ ಸೀಸನ್ ಶುರುವಾದ ಕಾರಣ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಬಂಗಾರದ ಬೆಲೆ ೇರಿಕೆ ಆಗುತ್ತಿದೆ.
ಭಾರತದಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.71,300 ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 77,770 ರೂ. ಆಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು.
ಡೊನಾಲ್ಡ್ ಟ್ರಂಪ್ ಆಡಳಿತವು ಈಗಾಗಲೇ ಅಮೆರಿಕದಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋ ಕರೆನ್ಸಿಗಳನ್ನು ಉತ್ತೇಜಿಸುವುದಾಗಿ ಹೇಳಿದೆ.
ಜುಲೈ ತಿಂಗಳಿನಲ್ಲಿ 67,000 ರೂಪಾಯಿ ಇದ್ದ ಚಿನ್ನದ ಬೆಲೆ ನವೆಂಬರ್ ತಿಂಗಳ ವೇಳೆಗೆ 84,000 ಕ್ಕೆ ತಲುಪಿತ್ತು. ಅಂದರೆ ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆ 17 ಸಾವಿರ ರೂಪಾಯಿವರೆಗೆ ಏರಿಕೆಯಾಗಿದೆ.