ಪಿಂಚಣಿಗೆ ಹೊಸ ಮಾರ್ಗಸೂಚಿ ಜಾರಿಗೆ ತಂದ ಸರ್ಕಾರ !ಪೆನ್ಶನ್ ಹೆಚ್ಚಳ ಮಾಡಿ ಸರ್ಕಾರ ಆದೇಶ
ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ಅಧಿಸೂಚನೆಯನ್ನು ಹೊರಡಿಸಿದ್ದು, ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಪಿಂಚಣಿಗೆ ಸಂಬಂಧಿಸಿದಂತೆ ಹೊಸ ಮಾರ್ಗ ಸೂಚಿಗಳನ್ನು ಹೊರಡಿಸಿದೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಹೆಚ್ಚುವರಿ ಗ್ರಾಚ್ಯುಟಿಯೊಂದಿಗೆ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಕಟಿಸಿದೆ.
ವಯಸ್ಸಿಗೆ ಅನುಗುಣವಾಗಿ ಪಿಂಚಣಿಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎನ್ನುವುದನ್ನು ನಿರ್ಧರಿಸಲಾಗುವುದು. ವಯಸ್ಸಿನ ಆಧಾರದ ಮೇಲೆ ಹಿರಿಯ ನಾಗರಿಕರಿಗೆ ಪಿಂಚಣಿ ಹೆಚ್ಚಳ, ಗ್ರಾಚ್ಯುಟಿ ಭತ್ಯೆ ಲಭ್ಯವಿರುತ್ತದೆ.
80 ರಿಂದ 85 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯಲ್ಲಿ 20% ಹೆಚ್ಚಳವನ್ನು ಪಡೆಯುತ್ತಾರೆ. 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯಲ್ಲಿ ಶೇಕಡಾ 30 ರಷ್ಟು ಹೆಚ್ಚಳವನ್ನು ಪಡೆಯುತ್ತಾರೆ.
90 ರಿಂದ 95 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯಲ್ಲಿ 40% ಹೆಚ್ಚಳವಾಗಲಿದೆ. 95 ರಿಂದ 100 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಮೂಲ ಪಿಂಚಣಿಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವಿದೆ.
100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯಲ್ಲಿ 100 ಪ್ರತಿಶತ ಹೆಚ್ಚಳವನ್ನು ಪಡೆಯುತ್ತಾರೆ. ಇದು ಗರಿಷ್ಠ ಹೆಚ್ಚಳವಾಗಿರಲಿದೆ.
ನಿಗಡಿ ಪಡಿಸಿದ ವಯಸ್ಸಿಗೆ ಪಿಂಚಣಿದಾರರು ತಲುಪುತ್ತಿದ್ದ ಹಾಗೆಯೇ ಈ ಹೆಚ್ಚುವರಿ ಪಿಂಚಣಿ ಜಾರಿಗೆ ಬರುತ್ತದೆ. ಇದರರ್ಥ ಹೆಚ್ಚುವರಿ ಪಿಂಚಣಿ ಪಿಂಚಣಿದಾರರು ದೀರ್ಘಕಾಲ ಕಾಯಬೇಕಾಗಿಲ್ಲ.
ಈ ಹೊಸ ಮಾರ್ಗಸೂಚಿಗಳನ್ನು ಪಿಂಚಣಿ ವಿತರಣೆಯಲ್ಲಿ ತೊಡಗಿರುವ ಎಲ್ಲಾ ಬ್ಯಾಂಕುಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ. ಈ ಮೂಲಕ ಪಿಂಚಣಿದಾರರು ಯಾವುದೇ ತೊಂದರೆಗಳಿಲ್ಲದೆ ಅವರ ಸವಲತ್ತುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.
ಸೂಚನೆ :ಈ ಸಂದೇಶವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಸಂಬಂಧಿತ ಅಧಿಕೃತ ಸೈಟ್‌ಗಳಿಗೆ ಭೇಟಿ ನೀಡಲು ಶಿಫಾರಸು ಮಾಡಲಾಗಿದೆ.