100 ವರ್ಷಗಳ ನಂತರ ಒಂದೇ ದಿನ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ!ಗ್ರಹಣ ದಿನದಿಂದಲೇ ಈ ರಾಶಿಯವರ ಹೊಸ ಅಧ್ಯಾಯ ಶುರು !ತಂದೆ -ಮಗ ಸೇರಿ ಹರಿಸುತ್ತಾರೆ ಧನ ಸಂಪತ್ತಿನ ಹೊಳೆ
ವೈದಿಕ ಜ್ಯೋತಿಷ್ಯದ ಪ್ರಕಾರ 2025 ರಲ್ಲಿ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ ಒಟ್ಟಿಗೆ ಸಂಭವಿಸುತ್ತದೆ. ಮೊದಲನೆಯದಾಗಿ, ಮಾರ್ಚ್ 29 ರಂದು ಶನಿಯು ತನ್ನ ಸ್ವರಾಶಿ ಕುಂಭವನ್ನು ಬಿಟ್ಟು ಹೊರ ನಡೆಯುತ್ತಾನೆ. ಮೀನ ರಾಶಿಯನ್ನು ಸಂಕ್ರಮಿಸುತ್ತಾನೆ.
ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯನ ಸಂಯೋಗವೂ ಇರುತ್ತದೆ. ಇದಲ್ಲದೇ ಈ ವರ್ಷದ ಮೊದಲ ಸೂರ್ಯಗ್ರಹಣ ಕೂಡ ಮಾರ್ಚ್ 29ರಂದು ಸಂಭವಿಸುವುದು ವಿಶೇಷ. ಇದರಿಂದಾಗಿ ಕೆಲವು ರಾಶಿಯವರ ಜೀವನ ಗ್ರಹಣ ದಿನದಿಂದಲೇ ಬೆಳಗುವುದು.
ಈ ರಾಶಿಯವರಿಗೆ ಧನ ಸಂಪತ್ತು ಹರಿದು ಬರುವುದು. ಹಠಾತ್ ಸಂಪತ್ತು ಮತ್ತು ಅದೃಷ್ಟ ಹೆಚ್ಚುವುದು.
ಕುಂಭ ರಾಶಿ :ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗಿಗಳಿಗೆ ಈ ಸಮಯವು ಅತ್ಯುತ್ತಮವಾಗಿವಾಗಿರಲಿದೆ. ಮನಸ್ಸಿನ ಗೊಂದಲಗಳಿಗೆ ಪರಿಹಾರ ಸಿಗುವುದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈ ಸಮಯದಲ್ಲಿ ನಿಮ್ಮ ಮಾತು ಇತರರ ಮೇಲೆ ಪ್ರಭಾವ ಬೀರುತ್ತದೆ. ಮಾತಿನ ಮೂಲಕವೇ ನಿಮ್ಮ ಕೆಲಸ ಸಾಧಿಸಿಕೊಳ್ಳಬಹುದು.
ವೃಷಭ ರಾಶಿ : ಈ ಸಂಯೋಗವು ನಿಮ್ಮ ಜಾತಕದ ಆದಾಯ ಮತ್ತು ಲಾಭದ ಸ್ಥಾನದಲ್ಲಿ ಸಂಭವಿಸಲಿದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಮಹತ್ತರವಾಗಿ ಬೆಳವಣಿಗೆಯಾಗುವುದು.ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.
ಧನು ರಾಶಿ: ವಾಹನ ಅಥವಾ ಆಸ್ತಿ ಖರೀದಿಸಲು ಒಳ್ಳೆಯ ಸಮಯ. ಕೈಯ್ಯಲ್ಲಿ ಹಣ ಇಲ್ಲ ಎಂದಾದರೂ ಈ ಕೆಲಸಕ್ಕೆ ಮುಂದಾದರೆ ಹಣಕಾಸಿನ ವ್ಯವಸ್ಥೆ ತನ್ನಷ್ಟಕ್ಕೆ ಆಗುವುದು. ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.ಪ್ರತಿಯೊಂದು ಕೆಲಸದಲ್ಲೂ ಅಪಾರವಾದ ಯಶಸ್ಸು ಸಿಗುವುದು. ಸಾಕಷ್ಟು ಪ್ರಗತಿ ಮತ್ತು ಸಂಪತ್ತು ವೃದ್ಧಿಯ ಯೋಗವಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.