48 ಗಂಟೆಗಳಲ್ಲಿ ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಧನ ಸಂಪತ್ತು ! ಹೆಜ್ಜೆ ಹೆಜ್ಜೆಗೂ ಆಗುವುದು ಪ್ರಗತಿ
ಬುಧ ಮತ್ತು ಸೂರ್ಯ ಈಗಾಗಲೇ ಕನ್ಯಾರಾಶಿಯಲ್ಲಿದ್ದು, ಈ ರಾಶಿಗೆ ಬುಧನ ಪ್ರವೇಶವಾಗುವುದರಿಂದ ಸೂರ್ಯ, ಬುಧ, ಮಂಗಳ ಸಂಯೋಗದಿಂದ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ತ್ರಿಗ್ರಾಹಿ ಯೋಗದ ಶುಭ ಫಲ ಮೂರು ರಾಶಿಯವರ ಜೀವನದ ಮೇಲೆ ಅಧಿಕವಾಗಿ ಕಂಡು ಬರುತ್ತದೆ.
ಕನ್ಯಾ ರಾಶಿ : ತ್ರಿಗ್ರಾಹಿ ಯೋಗವು ಕನ್ಯಾರಾಶಿಯಲ್ಲಿಯೇ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯಕ್ತಿತ್ವ ಸುಧಾರಿಸುತ್ತದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ಯೋಗವು ಬರವಣಿಗೆ ಮತ್ತು ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.
ಧನು ರಾಶಿ: ತ್ರಿಗ್ರಾಹಿ ಯೋಗದ ಫಲವಾಗಿ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗ ಸಿಗಬಹುದು. ವ್ಯಾಪಾರ ವಿಸ್ತರಣೆಯಾಗಲಿದೆ. ನೀವು ಮಾಡಲು ಹೊರಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುವುದು.
ಮಕರ ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡ ತ್ರಿಗ್ರಾಹಿ ಯೋಗವು ಮಕರ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಲಾಭ ಹೆಚ್ಚಾಗುತ್ತದೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಬಹುದು. ವಿದೇಶಕ್ಕೆ ಹೋಗುವ ಕನಸು ಈಡೇರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.