ಮುಂದಿನ 17 ವರ್ಷಗಳ ಕಾಲ ಈ ರಾಶಿಯವರಿಗೆ ಪ್ರತಿದಿನವೂ ಸುವರ್ಣಯುಗ: ಲಾಟರಿ ಹೊಡೆಯೋದು ಫಿಕ್ಸ್, ಅಖಂಡ ವರವೇ ಪ್ರಾಪ್ತಿ

Tue, 05 Sep 2023-6:15 am,

ಸೆಪ್ಟೆಂಬರ್ 15 ರಂದು ಬುಧ ಗ್ರಹವು ಸಿಂಹ ರಾಶಿಯಲ್ಲಿ ಉದಯವಾಗಲ್ಲಿದ್ದು ಎಲ್ಲಾ ರಾಶಿಗಳ ಜನರ ಜೀವನದಲ್ಲಿ ಅದರ ಪ್ರಭಾವವು ಕಂಡುಬರುತ್ತದೆ, ಆದರೆ ಈ ಅವಧಿಯಲ್ಲಿ 3 ರಾಶಿಗಳು ವಿಶೇಷ ಲಾಭಗಳನ್ನು ಪಡೆಯುತ್ತವೆ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯುತ್ತಾರೆ.

ಇನ್ನೊಂದೆಡೆ ಬುಧದ ಮಹಾದಶಾ ಪ್ರಭಾವವು 17 ವರ್ಷಗಳವರೆಗೆ ವ್ಯಕ್ತಿಯ ಜಾತಕದಲ್ಲಿ ಇರುತ್ತದೆ. ಬುಧ ಮಹಾದಶಾ ಸಮಯದಲ್ಲಿ ವ್ಯಕ್ತಿಯು ತನ್ನ ಬುದ್ಧಿವಂತಿಕೆ, ಸಂವಹನ ಶೈಲಿ, ಸೃಜನಶೀಲತೆ, ವ್ಯವಹಾರ ಮತ್ತು ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪ್ರಭಾವವನ್ನು ಹೊಂದುತ್ತಾನೆ. ವ್ಯಕ್ತಿಯ ಜಾತಕದಲ್ಲಿ ಬುಧನು ಶುಭ ಸ್ಥಾನದಲ್ಲಿದ್ದರೆ, ಆತನು 17 ವರ್ಷಗಳ ಕಾಲ ಸಮಸ್ಯೆ ಇಲ್ಲದೆ ಜೀವಿಸುತ್ತಾನೆ.

ಅಂದಹಾಗೆ ಸೆಪ್ಟೆಂಬರ್ ನಲ್ಲಿ ಬುಧ ಉದಯವಾಗುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದು.

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹ ಸೆಪ್ಟೆಂಬರ್ 15 ರಂದು ಸಿಂಹ ರಾಶಿಯಲ್ಲಿ ಉದಯಿಸುತ್ತಾನೆ. ಪರಿಣಾಮವಾಗಿ ಈ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅನಿರೀಕ್ಷಿತ ಸ್ಥಳಗಳಿಂದ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತಾರೆ. ಹಠಾತ್ ವಿತ್ತೀಯ ಲಾಭಗಳು ಕೂಡ ಇರಲಿವೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಮಿಥುನ ರಾಶಿ: ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಶುಭ ಫಲಗಳು ದೊರೆಯುತ್ತವೆ. ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಈ ಜನರಿಗೆ ಚರ ಮತ್ತು ಸ್ಥಿರ ಆಸ್ತಿಯನ್ನು ಖರೀದಿಸುವ ಯೋಗವಿದೆ. ಇದು ಭವಿಷ್ಯದಲ್ಲಿ ಅವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.

ಸಿಂಹ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧದ ಉದಯವು ಸಿಂಹ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಈ ಸಮಯದಲ್ಲಿ ತಮ್ಮ ಶ್ರಮದ ಪ್ರತಿಫಲವನ್ನು ಪಡೆಯುತ್ತಾರೆ ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ವಿತ್ತೀಯ ಲಾಭ ಇರಲಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link