18 ವರ್ಷ ಈ ರಾಶಿಯವರಿಗೆ ರಾಜ ವೈಭೋಗ !ಸರ್ಕಾರಿ ಉದ್ಯೋಗ ಭಾಗ್ಯ, ಮಣ್ಣು ಕೂಡಾ ಹೊನ್ನಾಗುವ ಕಾಲ ! ಸಂಪತ್ತಿನ ಉಕ್ಕಿ ಬರುವ ಸಮಯ
ರಾಹು ಎಂದ ಕೂಡಲೇ ಒಂದು ರೀತಿಯ ಭಯವೇ ಎಲ್ಲರನ್ನೂ ಕಾಡುವುದು. ಆತ ಕಷ್ಟ ಮಾತ್ರ ನೀಡುವವನು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಅದು ಹಾಗಲ್ಲ.
ಎಲ್ಲಾ ದೆಸೆಗಳಂತೆ ರಾಹು ಮಹಾ ದೆಸೆ ಕೂಡಾ 18 ವರ್ಷಗಳವರೆಗೆ ಇರುತ್ತದೆ. ಈ ಮಹಾ ದೆಸೆಯ 18 ವರ್ಷಗಳ ಅವಧಿಯಲ್ಲಿ ಪ್ರಪಂಚದ ಪ್ರತಿಯೊಂದು ಸುಖ, ಸಂಪತ್ತು, ಉನ್ನತ ಸ್ಥಾನ ಮತ್ತು ಕೀರ್ತಿಗೆ ರಾಹು ಕಾರಣನಾಗುತ್ತಾನೆ.
ಮೇಷ ರಾಶಿ : ಇವರ ಜೀವನದಲ್ಲಿ ಕಷ್ಟ ಎನ್ನುವುದು ಕಡಿಮೆ. ಯಾಕೆಂದರೆ ರಾಹುವಿನ ಕೃಪಾ ದೃಷ್ಟಿ ಇವರ ಮೇಲೆ ಇರುತ್ತದೆ. ಇವರದ್ದು ಅತ್ಯಂತ ಸುಖಮಯ ಜೀವನ.
ವೃಷಭ ರಾಶಿ : ಜೀವನದ ಮೊದಲ ಹಂತದಲ್ಲಿ ಕಷ್ಟ ಅನುಭವಿಸಿದರೂ ನಂತರ ನಿಮ್ಮದು ರಾಜ ವೈಭೋಗ. ಜೀವನದ ಸಮಸ್ಯೆಗಳೆಲ್ಲಾ ನೀಗುವುದು. ಬರೀ ಸುಖ ಸಮೃದ್ದಿಯ ಜೀವನ ನಿಮ್ಮದಾಗುವುದು.
ಕಟಕ ರಾಶಿ :ನಿಮ್ಮ ಜೀವನದಲ್ಲಿ ಕಷ್ಟ ಎನ್ನುವುದು ಬಹಳ ಕಡಿಮೆ. ಒಂದು ವೇಳೆ ಸಣ್ಣ ಪುಟ್ಟ ಸಮಸ್ಯೆ ಎದುರಾದರೂ ಪರಿಹಾರವೂ ಜೊತೆಯಲ್ಲಿಯೇ ಇರುತ್ತದೆ. ಅಂದುಕೊಂಡ ಕೆಲಸ ಸಾಧಿಸಿ ಬಿಡುವಿರಿ.
ತುಲಾ ರಾಶಿ : ಎಲ್ಲಾ ವಿಷಯಗಳಲ್ಲಿಯೂ ನಿಮ್ಮದು ಮೇಲುಗೈ. ನಿಮ್ಮ ಮನದ ಇಚ್ಛೆ ಈಡೇರುವುದು. ಸಾಧಿಸಬೇಕು ಅಂದುಕೊಂಡ ಕೆಲಸ ಸಾಧಿಸಿಯೇ ಸಾಧಿಸುತ್ತೀರಿ. ಶತ್ರುಗಳು ನಿಮ್ಮ ಮುಂದೆ ಗೆಲ್ಲುವುದು ವಿರಳ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.