ಈ ರಾಶಿಯವರ ಜೀವನದಲ್ಲಿ ಹಣದ ಸುರಿ ಮಳೆ, ಸರ್ವ ಕಾರ್ಯದಲ್ಲಿಯೂ ಯಶಸ್ಸು !ಜೀವನದ ಅತಿ ಅದೃಷ್ಟದ ಸಮಯ ಇದು
ಗುರು ಗ್ರಹದ ನಡೆಯಲ್ಲಿ ಆಗುವ ಸಣ್ಣ ಬದಲಾವಣೆ ಕೂಡಾ ನಮ್ಮ ಜೀವನದ ಮೇಲ ದೊಡ್ಡ ಪರಿಣಾಮ ಬೀರುತ್ತದೆ. ಇದೀಗ ಗುರು ತನ್ನ ನಕ್ಷತ್ರವನ್ನು ಬದಲಿಸಲಿದ್ದಾನೆ.
ಗುರು ಗ್ರಹ ಇನ್ನು ಹತ್ತು ದಿನಗಳಲ್ಲಿ ಅಂದರೆ ನವೆಂಬರ್ 28 ರಂದು,ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಗುರುವಿನ ನಕ್ಷತ್ರ ಬದಲಾವಣೆಯೊಂದಿಗೆ ಮೂರು ರಾಶಿಯವರ ಭಾಗ್ಯದ ಬಾಗಿಲು ಕೂಡಾ ತೆರೆದುಕೊಳ್ಳುವುದು.
ಮೇಷ ರಾಶಿ : ಹಣ ಸಂಪಾದನೆಯಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ.ಗುರುವಿನ ಕೃಪೆಯಿಂದ ಆರೋಗ್ಯ ಚೆನ್ನಾಗಿರುತ್ತದೆ. ಮೇಲಧಿಕಾರಿಯೊಂದಿಗೆ ಜಗಳವಾಗಬಹುದು. ಆದ್ರೆ ಅಲ್ಲಿಯೂ ನಿಮ್ಮ ಮಾತೇ ನಡೆಯುತ್ತದೆ. ಮನಸ್ಸಿನ ಶಾಂತಿ ಹೆಚ್ಚಾಗುವುದು.
ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಲಾಭವಾಗುವುದು. ಉದ್ಯೋಗಸ್ಥರು ತಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವರು. ವ್ಯಾಪಾರಿಗಳು ಗಣನೀಯ ಆರ್ಥಿಕ ಲಾಭವನ್ನು ಪಡೆಯಬಹುದು. ಮನೆಯ ವಾತಾವರಣವು ಅನುಕೂಲಕರವಾಗಿರುತ್ತದೆ.
ಕುಂಭ ರಾಶಿ :ಗುರು ಗ್ರಹದ ವಿಶೇಷ ಕೃಪೆಯಿಂದಾಗಿ ಕುಂಭ ರಾಶಿಯವರ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರ ವಿಸ್ತರಣೆಗಾಗಿ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ.ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.