ಯಶ್‌ ʻಟಾಕ್ಸಿಕ್‌ʼ ಸಿನಿಮಾಗೆ ಬಾಲಿವುಡ್‌ ಕ್ವೀನ್‌ ಎಂಟ್ರಿ, ಮುಂಬೈನಿಂದ ಸಿದಾ ಬಂದೇ ಬಿಟ್ರು ʻಬದ್ಲಾಪುರ್‌ʼ ಬೆಡಗಿ..!

Thu, 27 Jun 2024-3:08 pm,

ಅನೌಂನ್ಸ್‌ಮೆಂಟ್‌ ಆದಾಗಿನಿಂದಲೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಟಾಕ್ಸಿಕ್‌, ಗೀತು ಮೋಹನ್‌ದಾಸ್‌ ನಿರ್ಮಣದ ಈ ಸಿನಿಮಾ ಹೈ ಬಜೆಟ್‌ ಸಿನಿಮಾ.  

ಇದೇ ಮೊದಲ ಭಾರಿಗೆ ಗೀತು ಮೋಹನ್‌ದಾಸ್‌ ಕನ್ನಡದ ಸಿನಿಮಾ ಒಂದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಗೀತು ಮೋಹನ್‌ದಾಸ್‌ ತಮ್ಮ ಮೊದಲ ಚಿತ್ರಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.  

ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಾಕಿ ಬಾಯ್‌ಗೆ ಜೋಡಿ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿವೆ. ಯಶ್‌ಗೆ ನಾಯಕಿ ಕಿಯಾರ ಅಡ್ವಾನಿ ಆಗಲಿದ್ದಾರೆ ಎನ್ನುವ ಗುಸು ಗುಸು ಕೂಡ ಕೇಳಿ ಬರ್ತಾ ಇದೆ.   

ಈ ಮುಂಚೆ ಚಿತ್ರದಲ್ಲಿ ಯಶ್‌ ಅಕ್ಕನ ಪಾತ್ರಕ್ಕೆ ಭಾರಿ ಡಿಮ್ಯಾಂಡ್‌ ಕ್ರಿಯೇಟ್‌ ಆಗಿತ್ತು. ಕರೀನಾ ಕಪೂರ್‌ ಹೆಸರು ಕೂಡ ಲಿಸ್ಟ್‌ನಲ್ಲಿ ಕೇಳಿ ಬಂದತ್ತು. ಆದರೆ ಕರೀನಾ ಕಪೂರ್‌ ಚಿತ್ರಕ್ಕೆ ನೋ ಎಂದಿದ್ದರು.   

ಕರೀನಾ ಕಪೂರ್‌ ಚಿತ್ರದಿಂದ ಔಟ್‌ ಆಗುತ್ತಿದ್ದಂತೆ ಚಿತ್ರತಂಡ ಐಶ್ವರ್ಯ ರೈಗೆ ಗಾಳ ಹಾಕಿದ್ದರು. ಆದರೆ ಅವರು ಕೂಡ ಸಿನಿಮಾಗೆ ನೋ ಎಂದಿದ್ದರು ಎಂಬ ಸುದ್ದಿ ಕೂಡ ಕೇಳಿಬಂತು.  

ನಂತರ ಲೇಡಿ ಸೂಪರ್‌ ಸ್ಟಾರ್‌ ಹೆಸರು ಕೂಡ ನಡುವಲ್ಲಿ ಕೇಳಿ ಬಂದಿತ್ತು. ಸಿನಿಮಾ ತಂಡ ಇದನ್ನು ಕನ್‌ಫರ್ಮ್‌ ಮಾಡದೆ ಇದ್ದರೂ ಕೂಡ. ಮಾರ್ಕೆಟ್‌ನಲ್ಲಿ ಇವರ ಹೆಸರು ಇನ್ನೂ ಚಾಲ್ತಿಯಲ್ಲಿದೆ.  

ಈ ನಡುವೆ ಮತ್ತೊಬ್ಬ ಬಾಲಿವುಡ್‌ ನಟಿ ಹೆಸರು ಕೇಳಿ ಬರುತ್ತಿದೆ. ಬದ್ಲಾಪುರ್‌ ಸಿನಿಮಾದ ನಾಯಕಿ ಹುಮಾ ಖುರೇಶಿ ಟಾಕ್ಸಿಕ್‌ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಫುಲ್‌ ವೈರಲ್‌ ಆಗುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು, ನಂತರವಷ್ಟೇ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link