Corona ರೀತಿಯೇ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುತ್ತಾ Bird Flu?

Wed, 21 Jul 2021-7:58 pm,

1. ಹೆದರುವ ಅವಶ್ಯಕತೆ ಇಲ್ಲ - ಈ ಕುರಿತು ಮಾತನಾಡಿರುವ ಡಾ. ಗುಲೇರಿಯಾ H5N1 ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ತೀರಾ ವಿರಳ ಎಂದಿದ್ದಾರೆ. ಈ ಕುರಿತು ಭಯಪಡುವ ಅವಶ್ಯಕತೆ ಇಲ್ಲ. ಆದರೆ,  H5N1 ಸೋಂಕಿತ (H5N1 Virus) ವ್ಯಕ್ತಿಯ ಸಂಪರ್ಕಕ್ಕೆ ಬರುವುದರಿಂದ ತಪ್ಪಿಸಬೇಕು ಮತ್ತು ವೈರಸ್ ಕಾರಣ ಮಗು ಮೃತಪಟ್ಟ ಕ್ಷೇತ್ರದಿಂದ ಸ್ಯಾಂಪಲ್ ಸಂಗ್ರಹಿಸುವ ಅವಶ್ಯಕತೆ ಇದೆ. ಇದಲ್ಲದೆ ಕೋಳಿಗಳ ಸಾವಿನ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದಿದ್ದಾರೆ.

2. ಪೌಲ್ಟ್ರಿ ಫಾರ್ಮ್ ಹತ್ತಿರ ಕೆಲಸ ಮಾಡುವವರು ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ - ಇತ್ತೀಚೆಗಳಷ್ಟೇ ದೆಹಲಿಯ AIIMS ನಲ್ಲಿ ಹರ್ಯಾಣದ 12 ವರ್ಷದ ಬಾಲಕನೊಬ್ಬ H5N1 ಸೋಂಕಿಗೆ ಬಲಿಯಾಗಿದ್ದಾನೆ. ಈ ಕುರಿತು ಮಾತನಾಡಿರುವ ಡಾ. ಗುಲೇರಿಯಾ, ಪಕ್ಷಿಗಳಿಂದ ಮಾನವರಿಗೆ ಸೋಂಕು ಹರಡುವುದು ತುಂಬಾ ವಿರಳ ಹಾಗೂ H5N1ನ ಮಾನವರಿಂದ ಮಾನವನಿಗೆ ಹರಡುವ ಸೋಂಕಿನ ಪ್ರಕರಣ ಇದುವರೆಗೆ ಸಾಬೀತಾಗಿಲ್ಲ. ಹೇಗಾಗಿ ಹೆದರುವ ಅವಶ್ಯಕತೆ ಇಲ್ಲ. ಆದರೆ, ಪೌಲ್ಟ್ರಿ ಫಾರ್ಮ್ ಹತ್ತಿರ ಕೆಲಸ ಮಾಡುವ ಜನರು ನಿಶ್ಚಿತವಾಗಿ ಎಚ್ಚರಿಕೆವಹಿಸುವ ಅವಶ್ಯಕತೆ ಇದೆ ಹಾಗೂ ತಮ್ಮ ಅಕ್ಕಪಕ್ಕದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು' ಎಂದಿದ್ದಾರೆ.

3. ಮಾನವರಿಂದ ಮಾನವರಿಗೆ ಎವಿಯನ್ ಇನ್ಫ್ಲುಯೆಂಜಾ ಹರಡುವುದಿಲ್ಲ - ಈ ಕುರಿತು ಮಾತನಾಡಿರುವ ಮತ್ತು AIIMSನ ವೈದ್ಯಕೀಯ ವಿಘಾಗದಲ್ಲಿ ಕಾರ್ಯನಿರ್ವಹಿಸುವ ಡಾ. ನೀರಜ್ ನಿಶ್ಚಲ್, 'ಎವಿಯನ್ ಇನ್ಫ್ಲುಯೆಂಜಾ ಪ್ರಮುಖವಾಗಿ ಪಕ್ಷಿಗಳಲ್ಲಿನ ಕಾಯಿಎಲ್ಯಾಗಿದೆ ಹಾಗೂ ಮಾನವರಿಂದ ಮಾನವರಿಗೆ ಈ ಸೋಂಕು ಹರಡುವ ಯಾವುದೇ ಪ್ರಮಾಣಗಳು ದೊರೆತಿಲ್ಲ. ಆದರೆ, ಸೋಂಕಿಗೆ ಗುರಿಯಾಗಿರುವ ಕೆಲ ಸಣ್ಣ-ಪುಟ್ಟ ಕ್ಷೇತ್ರಗಳು ಪತ್ತೆಯಾಗಿದ್ದು, ಈ ಕ್ಷೇತ್ರಗಳಲ್ಲಿ ವಿರಳ ಸ್ಥಿತಿಯಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ಆದರೆ, ಮಾನವರಿನ ಮಾನವರಿಗೆ ಸೋಂಕು ಹರಡುವ ಯಾವುದೇ ಪ್ರಮಾಣ ದೊರೆತಿಲ್ಲ' ಎಂದು ಹೇಳಿದ್ದಾರೆ.

4. ರೋಗಗ್ರಸ್ತ ಕೋಳಿಗಳಿಂದ ಎಚ್ಚರಿಕೆವಹಿಸಿ - ಈ ಕುರಿತು ನಡೆಸಲಾಗಿರುವ ಸಿರೋ ಸರ್ವೆಯಲ್ಲಿ ಲಕ್ಷಣಗಳಿಲ್ಲದ ಪ್ರಕರಣಗಳ ಯಾವುದೇ ಪ್ರಮಾಣಗಳು ದೊರೆತಿಲ್ಲ ಹಾಗೂ ಉಪಚಾರದ ವೇಳೆ ಆರೋಗ್ಯ ರಕ್ಷಕರಲ್ಲಿಯೂ ಕೂಡ ಸೋಂಕಿನ ಯಾವುದೇ ಪ್ರಮಾಣಗಳು ದೊರೆತಿಲ್ಲ. ಒಂದು ವೇಳೆ ಯಾರಾದರು ಸರಿಯಾಗಿ ಬೇಯಿಸಲಾಗಿರುವ ಪೌಲ್ಟ್ರಿ ಉತ್ಪನ್ನಗಳ ಸೇವಿಸುತ್ತಿದ್ದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಆದರೆ ಇದುವರೆಗೆ ಉತ್ತಮವಾಗಿ ಬೇಯಿಸಲಾಗಿರುವ ಆಹಾರದಿಂದಲೂ ಕೂಡ ಇದು ಜನರಲ್ಲಿ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ಆಹಾರವನ್ನು ಸರಿಯಾಗಿ ಬೇಯಿಸಿದ ಬಳಿಕ ವೈರಸ್ ನಷ್ಟವಾಗುತ್ತದೆ. ಸೊಂಕಿತರ ಅದರಲ್ಲೂ ವಿಶೇಷವಾಗಿ ರೋಗಗ್ರಸ್ತ ಕೋಳಿಗಳ ಸಂಪರ್ಕಕ್ಕೆ ಬರುವುದರಿಂದ ದೂರ ಉಳಿಯಬೇಕು ಎಂದು ಡಾ. ನಿಶ್ಚಲ್ ಹೇಳಿದ್ದಾರೆ.

5. ಬರ್ಡ್ ಫ್ಲೂನಿಂದ ಮಗುವಿನ ಸಾವಿನ ಬಳಿಕ ಆತಂಕ ಸೃಷ್ಟಿಯಾಗಿದೆ - AIIMS ಮೂಲಗಳು ನೀಡಿರುವ ಮಾಹಿತಿ ಪ್ರಕಾರ, 12 ವರ್ಷದ ಬಾಲಕನನ್ನು ಜುಲೈ 2 ರಂದು ನ್ಯುಮೋನಿಯಾ ಮತ್ತು ಲ್ಯುಕೇಮಿಯಾ ಕಾರಣ ಏಮ್ಸ್ ಗೆ ದಾಖಲಿಸಲಾಗಿತ್ತು. ಜುಲೈ 12 ರಂದು ಆ ಮಗು ಕೊನೆಯುಸಿರೆಳೆದಿದೆ. ಚಿಕಿತ್ಸೆಯ ಸಮಯದಲ್ಲಿ, ಕೋವಿಡ್ -19 ಮತ್ತು ಇನ್ಫ್ಲುಯೆಂಜಾ ಪರೀಕ್ಷೆ ನಡೆಸಲಾಗಿದೆ. 'ಹುಡುಗನ ಕೋವಿಡ್ -19  (Covid-19)ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿಲ್ಲ. ಆದರೆ, ಬಾಲಕನಲ್ಲಿ ಇನ್ಫ್ಲುಯೆಂಜಾ  ಸೋಂಕು ದೃಢಪಟ್ಟಿದೆ. ಮಾದರಿಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆಗೆ ಕಳುಹಿಸಲಾಗಿದೆ, ಅಲ್ಲಿ H5N1 ಅಂದರೆ, ಏವಿಯನ್ ಇನ್ಫ್ಲುಯೆಂಜಾ ಇರುವುದು ದೃಢಪಟ್ಟಿದೆ ಎಂದು ಡಾ. ನಿಶ್ಚಲ್ ಹೇಳಿದ್ದಾರೆ.

6. ದೆಹಲಿ AIIMS ವೈದ್ಯರಿಗೆ ನಿರ್ದೇಶನಗಳನ್ನು ನೀಡಲಾಗಿದೆ - ಏತನ್ಮಧ್ಯೆ ಸೋಂಕಿತ ಮಗುವಿನ ಸಂಪರ್ಕಕ್ಕೆ ಬಂದ ಎಲ್ಲಾ ಸಿಬ್ಬಂದಿಗಳಿಗೆ ಫ್ಲೂನ ಯಾವುದೇ ಲಕ್ಷಣಗಳ ಮೇಲೆ ಗಮನಕೆಂದ್ರೀಕರಿಸಲು ಹಾಗೂ ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಲು ಹೇಳಲಾಗಿದೆ. ಜನವರಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಚತ್ತೀಸ್ಗಡಗಳಂತಹ ಕೆಲ ರಾಜ್ಯಗಳು ಸೋಂಕು ಹರಡಿದ ಬಳಿಕ ಕೋಳಿಗಳ ಮಾರಣಹೋಮ ನಡೆಸಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ.

7. ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ WHO ಹೇಳಿದ್ದೇನು? - ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ, ಜನರಲ್ಲಿ H5N1 ಸೋಂಕಿನ ಬಹುತೇಕ ಪ್ರಕರಣಗಳು ಸೋಂಕಿತ ಮೃತ ಹಾಗೂ ಜೀವಂತ ಪಕ್ಷಿಗಳು ಅಥವಾ H5N1ನ ಪ್ರಭಾವಕ್ಕೆ ಒಳಗಾದ ವಾತಾವರಣದ ನಿಕಟ ಸಂಪರ್ಕಕ್ಕೆ ಸಂಬಂಧಿಸಿವೆ ಎಂದಿದೆ. ಪ್ರಸ್ತುತ ಇರುವ ಮಹಾಮಾರಿ ವಿಜ್ಞಾನದ ಮಾಹಿತಿ ಗಳ ಪ್ರಕಾರ ಈ ವೈರಸ್ ಮನುಷ್ಯರನ್ನು ಸೋಂಕಿತರನ್ನಾಗಿಸುವ ಸಾಧ್ಯತೆ ತೀರಾ ವಿರಳ ಎನ್ನಲಾಗಿದೆ.  ಅಷ್ಟೇ ಅಲ್ಲ ಇದು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುವ ಸಾಧ್ಯತೆ ಕೂಡ ಕಡಿಮೆ. ಆದರೆ, ಈ ವೈರಸ್ ನ ಸೋಂಕಿಗೆ ಒಳಗಾದವರಲ್ಲಿ ಸಾವಿನ ಪ್ರಮಾಣ ಶೇ.60ರಷ್ಟಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link