Hunter 350 Photos: ಮನಸೂರೆಗೊಳಿಸಲಿದೆ Royal Enfield ನ ಹೊಸ ಬೈಕ್, ಲುಕ್ ಮತ್ತು ವಿನ್ಯಾಸ ಬಹಿರಂಗಗೊಳಿಸುವ 5 ಚಿತ್ರಗಳು ಇಲ್ಲಿವೆ
1. ರಾಯಲ್ ಎನ್‌ಫೀಲ್ಡ್ ಹಂಟರ್ 350 ಎರಡು ರೂಪಾಂತರಗಳಲ್ಲಿ ಅಂದರೆ, ಮೆಟ್ರೋ ಮತ್ತು ರೆಟ್ರೋದಲ್ಲಿ ಮಾರಾಟವಾಗಲಿದೆ. ರೆಟ್ರೊ ಮಾದರಿಯು ಸಿಂಗಲ್-ಟೋನ್ ಪೇಂಟ್ ಸ್ಕೀಮ್ ಅನ್ನು ಹೊಂದಿದ್ದರೆ, ಮೆಟ್ರೋ ಮಾದರಿ ಡ್ಯುಯಲ್-ಟೋನ್ ಫಿನಿಶಿಂಗ್ ಹೊಂದಿದೆ.
2. ರಾಯಲ್ ಎನ್‌ಫೀಲ್ಡ್ ಹಂಟರ್ 350 ನಲ್ಲಿ ಬ್ರೇಕಿಂಗ್‌ಗಾಗಿ ಎರಡು ಗಾಲಿಗಳಲ್ಲಿ ಡಿಸ್ಕ್ ಸಿಸ್ಟಂ ನೀಡಲಾಗಿದೆ. ಶಾಕ್ ಅಬ್ಸಾರ್ಬರ್‌ಗಳಿಗಾಗಿ, ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಆರು-ಹಂತದ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಸ್ಪ್ರಿಂಗ್ ಅನ್ನು ಹೊಂದಿದೆ.
3. ಮೋಟಾರ್‌ಸೈಕಲ್ ಸ್ವಲ್ಪ ಭಾಗದಲ್ಲಿ ಡಿಜಿಟಲ್ ಆಗಿರುವ ವೃತ್ತಾಕಾರದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದರಲ್ಲಿ ಟ್ರಿಪ್ಪರ್ ನ್ಯಾವಿಗೇಶನ್ ಕೂಡ ಇದ್ದು, ಅದು ಬ್ಲೂಟೂತ್ ಸಂಪರ್ಕದ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ನೀಡುತ್ತದೆ.
4. ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 349cc ಸಿಂಗಲ್-ಸಿಲಿಂಡರ್, ಎರಡು-ವಾಲ್ವ್, SOHC, ಏರ್/ಆಯಿಲ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 4,000 rpm ನಲ್ಲಿ 27Nm ಟಾರ್ಕ್ ಮತ್ತು 6,100 rpm ನಲ್ಲಿ 20.2bhp ಶಕ್ತಿಯನ್ನು ಉತ್ಪಾದಿಸುತ್ತದೆ.
5. ಬೈಕ್‌ನ ಗರಿಷ್ಠ ವೇಗ ಗಂಟೆಗೆ 114 ಕಿ.ಮೀ. ಆಗಿದೆ ಹಂಟರ್ 350 ಇತ್ತೀಚೆಗೆ ಬಿಡುಗಡೆಯಾದ TVS ರೋನಿನ್ ಮತ್ತು ಹೋಂಡಾ CB 350 RS ಮತ್ತು ಜಾವಾ 42 ಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯಲಿದೆ.