Hunza Tribe People: 120 ವರ್ಷಗಳವರೆಗೆ ಯಂಗ್ ಆಗಿ ಕಾಣುವ ಈ ಜನರು ಸದಾ ಖುಷಿ ಮತ್ತು ಆರೋಗ್ಯವಂತರಾಗಿರುತ್ತಾರೆ
ಹಲವು ರೀತಿಯ ಜನರು ಈ ಸಮುದಾಯದ ಜನರ ಜೊತೆಗೆ ತಮ್ಮ ಕಾಲ ಕಳೆದಿದ್ದಾರೆ. ಹಾಗೂ ಇವರ ತಿಳುವಳಿಕೆಯನ್ನೂ ಕೂಡ ಮೆಚ್ಚಿಕೊಂಡಿದ್ದಾರೆ.
ಇವರ ದೀರ್ಘಾಯುಷ್ಯದ ಕಾರಣ ಆರೋಗ್ಯಪೂರ್ಣ ಜೀವನಶೈಲಿ. ಈ ಜನರು ತಾವೇ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಹುಂಜಾ ಸಮುದಾಯಕ್ಕೆ ಸೇರಿಸುವ ಈ ಜನರು ಖುಬಾನಿ ಹಾಗೂ ಬಿಸಿಲಿನಲ್ಲಿ ಒಣಗಿಸಿದ ವಾಲ್ ನಟ್ ತುಂಬಾ ಸೇವಿಸುತ್ತಾರೆ. ದವಸ ಧಾನ್ಯಗಳಲ್ಲಿ ಇವರು ಜೋಳ, ಸಜ್ಜೆ ಹಾಗೂ ಕುಟ್ಟು ಧಾನ್ಯ ಸೇವಿಸುತ್ತಾರೆ. ಇವರಿ ದಿನದಲ್ಲಿ ಕೇವಲ ಎರಡು ಬಾರಿಗೆ ಊಟ ಮಾಡುತ್ತಾರೆ.
ಈ ಜನರು ಗ್ಲೇಸಿಯರ್ ನಿಂದ ಬಂದ ನೀರನ್ನು ಕುಡಿಯುತ್ತಾರೆ ಹಾಗೂ ಅದರಿಂದಲೇ ಸ್ನಾನ ಮಾಡುತ್ತಾರೆ ಎಂದು ವಿಜ್ಞಾನಿಯೊಬ್ಬರು ಹೇಳುತ್ತಾರೆ.
ಈ ಕುರಿತು ಹೇಳುವ ವಿಜ್ಞಾನಿ ಡಾ. ರಾಬರ್ಟ್ ಮೈಕ್ಯಾರಿಸನ್ ತಾವು ಹಲವು ವರ್ಷಗಳ ಕಾಲ ಇವರೊಂದಿಗೆ ವಾಸಿಸಿರುವುದಾಗಿ ಹೇಳುತ್ತಾರೆ. ಈ ಸಮುದಾಯದ ಜನರು ಯಾವುದೇ ರೀತಿಯ ಕಾಯಿಲೆಗಳಿಂದ ಬಳಳುವುದಿಲ್ಲ ಎನ್ನುತ್ತಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನನ ಗುಡ್ಡಗಾಡು ಪ್ರದೇಶಗಳ ಮಧ್ಯೆ ಇರುವ ಒಂದು ಗ್ರಾಮದಲ್ಲಿ ಹುಂಜಾ ಸಮುದಾಯದ ಈ ಜನರು ವಾಸಿಸುತ್ತಾರೆ. ಇವರ ಸರಾಸರಿ ವಯಸ್ಸು 110 ರಿಂದ 120 ವರ್ಷಗಳು. ಕೆಲವರು 150 ವರ್ಷಗಳ ಕಾಲ ಬದುಕಿದ್ದಾರೆ. ಇಲ್ಲಿ ವಾಸಿಸುವ ಜನರು ತಮ್ಮ 70ನೆ ವಯಸ್ಸಿನಲ್ಲಿಯೂ ಕೂಡ 20 ರ ಹರೆಯದ ಯುವಕ-ಯುವತಿಯರಂತೆ ಕಾಣಿಸುತ್ತಾರೆ. ಅಷ್ಟೇ ಅಲ್ಲ ಇಲ್ಲಿನ 90 ವರ್ಷದ ಪುರುಷರು ಕೂಡ ತಂದೆಯಾಗುವ ಸಾಮರ್ಥ್ಯ ಹೊಂದಿರುತ್ತಾರೆ. ಈ ಜನರ ಈ ಸಾಮರ್ಥ್ಯ ವೈದ್ಯರಿಗೂ ಕೂಡ ಒಂದು ಯಕ್ಷಪ್ರಶ್ನೆಯೇ ಆಗಿದೆ.