ಕನ್ನಡತಿ ಅಲ್ಲ ಈಕೆ ಮರಾಠಿ ಹುಡುಗಿ..ಚಿತ್ರರಂಗದ ಫೇಮಸ್‌ ವ್ಯಕ್ತಿಯನ್ನು ಅಂತರ್ಜಾತಿ ಮದುವೆಯಾದ ನಟಿ! ಇದು ಬಿಗ್‌ಬಾಸ್‌ ಸ್ಪರ್ಧಿ ಗೌತಮಿ ಜಾದವ್‌ ಅವರ ರಿಯಲ್‌ ಲೈಫ್‌ ಸ್ಟೋರಿ

Thu, 03 Oct 2024-8:51 am,

Gauthami Jadav: ಬಿಗ್‌ಬಾಸ್‌ ಸೀಸನ್‌ 11ಗೆ ಮಾಸ್‌ ಆಗಿ ಎಂಟ್ರಿ ಕೊಟ್ಟಿರುವ ನಟಿ ಗೌತಮಿ ಜಾದವ್‌ ʻಸತ್ಯʼ ಧಾರವಾಹಿಯಿಂದಲೇ ಖ್ಯಾತಿ ಪಡೆದವರು. ತಾವು ಈ ಧಾರವಾಹಿಯಲ್ಲಿ ಮಾಡಿದ ಕೇವಲ ಒಂದೆ ಒಂದು ಸಣ್ಣ ಪಾತ್ರದಿಂದಲೇ ನಟಿ ʻಸತ್ಯʼ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.   

ಹಚ್ಚ ಕನ್ನಡತಿಯಂತೆ ಕಾಣುವ ಈಕೆ ಮೂಲತಃ ಮರಾಠಿ ಬೆಡಗಿ, ಹುಟ್ಟಿದಾಗಿನಿಂದಲೂ ಬೆಂಗಳೂರಿನಲ್ಲೆ ಬೆಳದ ಈಕೆ ಕನ್ನಡ ಬಹಳ ಸರಳವಾಗಿ ಮಾತನಾಡುತ್ತಾರೆ.   

ನಟಿ ಗೌತಮಿ ಜಾದವ್‌ ಅವರಿಗೆ ಮದುವೆಯಾಗಿದೆ, ಇವರ ಪತಿ ಕನ್ನಡ ಫಿಲಿಂ ಇಂಡಸ್ಟ್ರಿಯಲ್ಲಿ ಛಾಯಾಗ್ರಾಹಕನಾಗಿ ಕಾಣಿಸಿಕೊಂಡಿದ್ದಾರೆ. ಆತನ ಹೆಸರು ಅಭಿಷೇಕ್‌ ಕಾಸರಗೋಡು.   

ನಟಿ ಗೌತಮಿ ಜಾದವ್‌ ಅವರ ಪತಿ ಅಭಿಷೇಕ್‌ ಕಾಸರಗೋಡು, ಅವರು ಖ್ಯಾತ ಸಿನಿ ಪತ್ರಕರ್ತ ಗಣೇಶ್‌ ಕಾಸರಗೋಡು ಅವರ ಪುತ್ರ.   

ಇವರಿಬ್ಬರ ಲವ್‌ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಮೆ ಏನಿಲ್ಲ ನಟಿ ಗ್Vತಮಿ ʻಕಿನಾರೆʼ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೇ ಚಿತ್ರಕ್ಕೆ ಅವರ ಪತಿ ಅಭಿಷೇಕ್‌ ಕ್ಯಾಮರಾಮೆನ್‌ ಆಗಿ ಕೆಲಸ ಮಾಡಿದ್ದರು. ಇದೇ ಚಿತ್ರಕ್ಕೆ ಶೂಟಿಂಗ್‌ ಮಾಡುವಾಗ, ಈ ಇಬ್ಬರಿಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಾಗಿತ್ತು.   

ತಮ್ಮ ಮದುವೆ ಸ್ಟೋರಿ ಬಗ್ಗೆ ಮಾತನಾಡಿದ್ದ ಗೌತಮಿ ಜಾದವ್‌ ʻನಮ್ಮಿಬ್ಬರದ್ದು ಅಂತರ್ಜಾತಿ ವಿವಾಹ, ನಮ್ಮ ಕಡೆಯ ಸಂಪ್ರದಾಯ ಆಚರಣೆಗಳು ಬೇರೆ ಅವರ ಕಡೆಯ ಸಂಪ್ರದಾಯ ಬೇರೆʼ ಇದರಿಂದ ಯಾರ ಮನಸ್ಸಿಗೂ ಸಹ ಬೇಜಾರಾಗಬಾರದು ಎಂಬ ಕಾರಣಕ್ಕೆ ನಾವಿಬ್ಬರು ದೇವಸ್ಥಾನದಲ್ಲಿ ಮದುವೆಯಾದೆವು, ರಿಸೆಪ್ಷನ್‌ಗೆ ಸೆಲೆಬ್ರಿಟಿಗಳನ್ನು ಕರೆದಿದ್ದೆವುʼ ಎಂದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link