ಈ ಪ್ರಯೋಜನಗಳಿಗಾಗಿ ಪತ್ನಿ ಸದಾ ಪತಿಯ ಎಡಭಾಗದಲ್ಲಿಯೇ ಮಲಗಬೇಕಂತೆ !
ಮಲಗುವಾಗ ಯಾವ ಮಗ್ಗಲಿನಲ್ಲಿ ಮಲಗಬೇಕು ಎನ್ನುವುದು ಪ್ರತಿಯೊಬ್ಬರ ಆದ್ಯತೆಯನ್ನು ಅವಲಂಬಿಸಿರುತ್ತದೆ. ಕೆಲವರು ಬಲ ಬದಿಗೆ ತಿರುಗಿ ಮಲಗಲು ಇಷ್ಟ ಪಟ್ಟರೆ, ಇನ್ನು ಕೆಲವರು ಎಡಭಾಗಕ್ಕೆ ಮಲಗಿದರೆ ಚೆನ್ನ ಎನ್ನುತ್ತಾರೆ. ಆದರೆ ಹೆಂಡತಿ ಎಡಭಾಗದಲ್ಲಿ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ.
ಆಯುರ್ವೇದದಲ್ಲಿ ಮಹಿಳೆಯರು ಪುರುಷರ ಎಡಭಾಗದಲ್ಲಿ ಮಲಗಬೇಕು ಎಂದು ಹೇಳಲಾಗಿದೆ. ಈ ಬದಿಯಲ್ಲಿ ಮಲಗುವುದು ತುಂಬಾ ಪ್ರಯೋಜನಕಾರಿ. ಇದು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರ ಆರೋಗ್ಯದ ಮೇಲೆ ಕೂಡಾ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಭಂಗಿಯಲ್ಲಿ ಮಲಗುವುದರಿಂದ ಮಹಿಳೆಯ ದೇಹದ ಎಲ್ಲಾ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಮಹಿಳೆಯರಿಗೆ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ಎಡಭಾಗಕ್ಕೆ ತಿರುಗಿ ರ ಮಲಗಬೇಕು. ಈ ಬದಿಯಲ್ಲಿ ಮಲಗುವುದರಿಂದ, ಮೂಗಿನ ಮಾರ್ಗವು ಹೆಚ್ಚು ತೆರೆದಿರುತ್ತದೆ. ಇದರಿಂದ ಗೊರಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಸಂಗಾತಿಗೆ ತೊಂದರೆಯಾಗುವುದಿಲ್ಲ.
ಎಡಭಾಗದಲ್ಲಿ ಮಲಗುವ ಮಹಿಳೆಯರ ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುತ್ತದೆ. ಈ ಭಾಗದಲ್ಲಿ ಮಲಗುವುದರಿಂದ ದೇಹದಲ್ಲಿನ ತ್ಯಾಜ್ಯ ವಸ್ತುಗಳು ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಬಹಳ ಆರಾಮವಾಗಿ ಚಲಿಸುತ್ತವೆ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಹೃದಯದ ಆರೋಗ್ಯಕ್ಕಾಗಿ, ಮಹಿಳೆಯರು ಎಡಭಾಗದಲ್ಲಿ ಮಲಗಬೇಕು ಎಂದು ಹೇಳಲಾಗುತ್ತದೆ. ಈ ಭಂಗಿಯಲ್ಲಿ ಮಲಗುವುದರಿಂದ ಹೃದಯದ ಮೇಲೆ ಒತ್ತಡ ಬೀಳುವುದಿಲ್ಲ. ಇದರಿಂದ ಮಹಿಳೆಯರ ಹೃದಯ ಸರಾಗವಾಗಿ ಕೆಲಸ ಮಾಡುತ್ತದೆ. ಮಹಿಳೆಯರು ಬಲಭಾಗದಲ್ಲಿ ಮಲಗಿದರೆ ಅದರ ಋಣಾತ್ಮಕ ಪರಿಣಾಮಗಳು ಅವರ ಹೃದಯದ ಮೇಲೆ ಕಂಡುಬರುತ್ತವೆ.
ನಿಮ್ಮ ಹೆಂಡತಿ ಅಥವಾ ಇತರ ಯಾವುದೇ ಮಹಿಳೆ ಬೆನ್ನು ನೋವಿನಿಂದ ಬಳಲುತ್ತಿದ್ದರೆ, ಅವರು ಎಡಭಾಗದಲ್ಲಿಯೇ ಮಲಗಬೇಕು. ಇದು ಬೆನ್ನುನೋವಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಶಾಶ್ವತವಾಗಿ ಬೆನ್ನುನೋವಿನಿಂದ ಮುಕ್ತರಾಗಲೂಬಹುದು.
ಗರ್ಭಿಣಿಯರು ಯಾವಾಗಲೂ ಎಡಭಾಗಕ್ಕೆ ತಿರುಗಿಯೇ ಮಲಗಬೇಕು. ಈ ದಿಕ್ಕಿನಲ್ಲಿ ಮಲಗುವುದರಿಂದ ಅವರ ಗರ್ಭಾಶಯ ಮತ್ತು ಭ್ರೂಣದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಅಸಿಡಿಟಿ ಮತ್ತು ಎದೆಯುರಿಯಿಂದ ಬಳಲುತ್ತಿರುವ ಮಹಿಳೆಯರು ಯಾವಾಗಲೂ ಎಡಕ್ಕೆ ತಿರುಗಿ ಮಲಗಬೇಕು. ಈ ಬದಿಯಲ್ಲಿ ಮಲಗುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದಕ್ಕೆ ಜವಾಬ್ದಾರನಾಗಿರುವುದಿಲ್ಲ.)