Hyundai ಲಾಂಚ್ ಮಾಡಲಿದೆ ಹೊಸ i20 N Line, ಕೇವಲ 25,000 ರೂ.ಗಳಿಗೆ ಬುಕ್ ಮಾಡಬಹುದು ಕಾರು

Wed, 25 Aug 2021-8:43 pm,

ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಐ 20 ಎನ್ ಲೈನ್ ಕಾರನ್ನು ಅನಾವರಣಗೊಳಿಸುವ ಮೂಲಕ,  ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲವೇ ವಾರಗಳಲ್ಲಿ ಈ ಕಾರಿನ ಮಾರಾಟ ಆರಂಭವಾಗಬಹುದು ಎನ್ನಲಾಗಿದೆ.    

ಈ ಕಾರಿನ ಬುಕಿಂಗ್ ಅನ್ನು ಕಂಪನಿಯು ಆರಂಭಿಸಿದೆ. ನೀವು ಹುಂಡೈ i20 N ಲೈನ್ ಅನ್ನು ರೂ. 25,000 ಕ್ಕೆ ಬುಕ್ ಮಾಡಬಹುದು.  

ಸ್ಟ್ಯಾಂಡರ್ಡ್  i 20ಯಿಂದ N Line ಅನ್ನು ಪ್ರತ್ಯೇಕಿಸಲು ವಿವಿಧ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. Hyundai i20 N Line ಮೋಟಾರ್ ಸ್ಪೋರ್ಟ್, ಅತ್ಯುತ್ತಮ ಕಾರ್ ಆಗಿದೆ.  1.0 Turbo GDI Engine ಅನ್ನು ನೀಡಲಾಗಿದೆ.    

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಫೀಚರ್ ಲೋಡ್ ಆಗಿರುವ ಕಾರ್ ಆಗಿರುತ್ತದೆ. Hyundai i20 N Line 58 ಕನೆಕ್ಟೆಡ್ ಫೀಚರ್ ಅನ್ನು ಹೊಂದಿದೆ. ಈ ಕಾರಿಗೆ ಸ್ಪೋರ್ಟಿ ಲುಕ್ ನೀಡಲಾಗಿದೆ. ಇದು ವಿಶೇಷ 3 ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದೆ. 

ಈ ಕಾರಿನ ಬೆಲೆ ಎಷ್ಟು ಇರಲಿದೆ ಎನ್ನುವುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಇದರ ಬೆಲೆ i20 ಟರ್ಬೊಕ್ಕಿಂತ ಹೆಚ್ಚಾಗಿರಲಿದೆ ಎನ್ನಲಾಗಿದೆ. ಅಲ್ಕಾಜಾರ್ ಮಾರಾಟವಾಗುವ ದೇಶದ 97 ನಗರಗಳಲ್ಲಿ 188 ಸಿಗ್ನೇಚರ್ ಮಳಿಗೆಗಳಲ್ಲಿ ಮಾತ್ರ ಹುಂಡೈ ಐ 20 ಎನ್ ಲೈನ್ ಲಭ್ಯವಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link