ಕೇವಲ 18 ನಿಮಿಷಗಳಲ್ಲಿ ಚಾರ್ಜ್ ಆಗುವ ಈ ಎಲೆಕ್ಟ್ರಿಕ್ ಕಾರುಗಳು 500ಕಿ.ಮೀ.ವರೆಗೆ ಚಲಿಸಬಲ್ಲವು
ನವದೆಹಲಿ: ಈ ಸಮಯದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರು ಖರೀದಿಗೆ ಕೇಂದ್ರ ಸರ್ಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಆದಾಗ್ಯೂ ಈ ವಾಹನಗಳನ್ನು ಚಾರ್ಜ್ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಇದೆ. ಹಾಗಾಗಿಯೇ ಜನರು ಇನ್ನೂ ಪೆಟ್ರೋಲ್-ಡೀಸೆಲ್ ಅಥವಾ ಸಿಎನ್‌ಜಿ ವಾಹನಗಳನ್ನು ಖರೀದಿಸಲು ಒಲವು ತೋರುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಸಹ ರಸ್ತೆಯಲ್ಲಿ ಕಾಣಿಸಿಕೊಳ್ಳಲಿವೆ. ದೇಶಾದ್ಯಂತ 59 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಇ-ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಈಗ ನಿಮ್ಮ ಎಲೆಕ್ಟ್ರಿಕ್ ಕಾರ್ ಅನ್ನು ನಿಮಿಷಗಳಲ್ಲಿ ಚಾರ್ಜ್ ಮಾಡಲಾಗುತ್ತದೆ. ಅದೂ ಕೇವಲ 18 ನಿಮಿಷಗಳಲ್ಲಿ ನಿಮ್ಮ ಕಾರ್ ಪೂರ್ಣವಾಗಿ ಚಾರ್ಜ್ ಆಗಲಿದೆ ಮತ್ತು ಒಂದು ಬಾರಿ ಚಾರ್ಜಿಂಗ್‌ನಲ್ಲಿ ನೀವು 500 ಕಿಲೋಮೀಟರ್‌ವರೆಗೆ ಪ್ರಯಾಣಿಸಬಹುದು.
ಎಲೆಕ್ಟ್ರಿಕ್ ವಿಭಾಗವನ್ನು ಉತ್ತೇಜಿಸಲು ಹ್ಯುಂಡೈ ಮೋಟಾರ್ ಗ್ರೂಪ್ ಶೀಘ್ರದಲ್ಲೇ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ (EV Platform) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇ-ಜಿಎಂಪಿ ಇವಿ ಪ್ಲಾಟ್‌ಫಾರ್ಮ್ ಎಂಬ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ ನಿಮ್ಮ ವಾಹನವನ್ನು ಕೇವಲ 18 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಇ-ಜಿಎಂಪಿ ಪ್ಲಾಟ್‌ಫಾರ್ಮ್ ಅನ್ನು ಹ್ಯುಂಡೈ ಮತ್ತು ಕೆಐಎ ಮೋಟಾರ್‌ಗಳು (KIA motors) ವಿನ್ಯಾಸಗೊಳಿಸಿವೆ.
ಮುಂದಿನ ವರ್ಷ 2021 ರಲ್ಲಿ ಹ್ಯುಂಡೈ ಮೋಟಾರ್ ಗ್ರೂಪ್ ತನ್ನ ಮೊದಲ ಕಾರನ್ನು ಈ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಿದೆ. ಇ-ಜಿಎಂಪಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿರುವ ಮೊದಲ ಕಾರಿಗೆ ಹ್ಯುಂಡೈ ಅಯೋನಿಕ್ 5 (Hyundai Ioniq 5) ಎಂದು ಹೆಸರಿಸಲಾಗುತ್ತಿದೆ. ಅಯೋನಿಕ್ ಹ್ಯುಂಡೈನ ಉಪ-ಬ್ರಾಂಡ್ ಆಗಿದೆ.