IAS Success Story: 2ನೇ ಪ್ರಯತ್ನದಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿದ ಅನುಪಮಾ ಅಂಜಲಿ…

Fri, 10 Sep 2021-5:14 pm,

ಅನುಪಮಾ ಅಂಜಲಿಯವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಮತ್ತು ತನ್ನ 2ನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಅನುಪಮಾ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡುವಾಗ ಬೇಸರಗೊಳ್ಳುತ್ತಾರೆ. ಇದು ತುಂಬಾ ಸಾಮಾನ್ಯವಾದ ಸಮಸ್ಯೆ. ಆದ್ದರಿಂದ ಓದುವಾಗ ಆಗಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಬೇಕು. ಈ ವಿರಾಮಗಳಿಂದ ಹೊಸ ಹುರುಪು-ಹುಮ್ಮಸ್ಸು ಪುನಶ್ಚೇತನಗೊಳ್ಳುತ್ತದೆ. ಪ್ರತಿಯೊಬ್ಬರೂ ವ್ಯಾಯಾಮ ಮತ್ತು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿಮಗೆ ಫಿಟ್ ಮತ್ತು ಪಾಸಿಟಿವ್ ಆಗಿರಲು ಸಹಕಾರಿಯಾಗುತ್ತದೆ.   

ಅನುಪಮಾ ಅವರ ತಂದೆ ಐಪಿಎಸ್ ಅಧಿಕಾರಿ ಮತ್ತು ಭೋಪಾಲ್‌ನಲ್ಲಿ ನಿಯೋಜನೆಗೊಂಡಿದ್ದಾರೆ. ಅನುಪಮಾ ಅವರು ಸಮಾಜ ಸೇವಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ.

ಯುಪಿಎಸ್‌ಸಿ ಜರ್ನಿಯಲ್ಲಿ ಪ್ರತಿಯೊಬ್ಬರೂ ನಕಾರಾತ್ಮಕ ಆಲೋಚನೆಗಳನ್ನು ಕೈಬಿಡಬೇಕು. ಪರೀಕ್ಷೆಗೆ ತಯಾರಿ ನಡೆಸುವಾಗ ಬಹುತೇಕರು ಖಿನ್ನತೆಯ ಸಮಸ್ಯೆಗೆ ಸಿಲುಕುತ್ತಾರೆ.  ಆದರೆ ನಾವು ಯಾವಾಗಲೂ ಪಾಸಿಟಿವ್ ಆಗಿರಬೇಕು. ಇದರಿಂದ ನೀವು ಉತ್ತಮವಾಗಿ ಯೋಚಿಸಲು ಸಾಧ್ಯವಾಗುತ್ತದೆ. ಸದಾ ಪಾಸಿಟಿವ್ ಮೈಂಡ್ ಸೆಟ್ ಹೊಂದಿರುವವರು ಮಾತ್ರ ಯಶಸ್ಸು ಸಾಧಿಸಲು ಸಾಧ್ಯವೆಂದು ಅವರು ಹೇಳಿದ್ದಾರೆ.    

ಅನುಪಮಾ ಪ್ರಕಾರ, ಯುಪಿಎಸ್‌ಸಿಗೆ ತಯಾರಿ ಮಾಡುವಾಗ ಎಲ್ಲ ರೀತಿಯ ಗೊಂದಲಗಳಿಂದ ದೂರವಿರಬೇಕು. ಕುಟುಂಬ ಅಥವಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಬದಲು ಅಧ್ಯಯನದಲ್ಲಿ ಬ್ಯುಸಿಯಾಗಿರಬೇಕು. ಕುಟುಂಬ ಕಾರ್ಯಗಳನ್ನು ಸಹ ತಪ್ಪಿಸಬೇಕು. ಸದಾ ಪಾಸಿಟಿವ್ ಆಗಿದ್ದು ಪರೀಕ್ಷೆಗೆ ಸಿದ್ಧತೆ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸ್ಪರ್ಧಾಕಾಂಕ್ಷಿಗಳಿಗೆ ಸಲಹೆ ನೀಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link