ಉದ್ಯೋಗ ಮಾಡುತ್ತಲೇ UPSC ಪರೀಕ್ಷೆಯಲ್ಲಿ 57 ರ‍್ಯಾಂಕ್ ಪಡೆದ ಸಾಧಕಿ..

Sun, 12 Sep 2021-6:39 pm,

ಯಾಶ್ನಿ ನಾಗರಾಜನ್ ಅವರು ಅರುಣಾಚಲ ಪ್ರದೇಶದ ನಹರ್ಲಗುನ್(Naharlagun)ನ ಕೇಂದ್ರೀಯ ವಿದ್ಯಾಲಯದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರೈಸಿದರು. ಇದಾದ ಬಳಿಕ 2014 ರಲ್ಲಿ ಯೂಪಿಯಾ(Yupia)ದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಿಂದ EEEನಲ್ಲಿ ಬಿ.ಟೆಕ್ ಮುಗಿಸಿದರು.

ಯಾಶ್ನಿ ನಾಗರಾಜನ್ ಅವರ ತಂದೆ ತಂಗವೇಲ್ ನಾಗರಾಜನ್ ನಿವೃತ್ತ ರಾಜ್ಯ ಪಿಡಬ್ಲ್ಯೂಡಿ ಇಂಜಿನಿಯರ್. ಅವರ ತಾಯಿ ಗೌಹಾಟಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಇಟಾನಗರ ಶಾಖೆಯ ನಿವೃತ್ತ ಅಧೀಕ್ಷಕರಾಗಿದ್ದಾರೆ.

ಪ್ರತಿದಿನ ಯಾಶ್ನಿ ತನ್ನ ಅಧ್ಯಯನಕ್ಕಾಗಿ 4 ರಿಂದ 5 ಗಂಟೆಗಳ ಸಮಯವನ್ನು ಮೀಸಲಿಡುತ್ತಿದ್ದರು. ಇದು ಮಾತ್ರವಲ್ಲ ವಾರಾಂತ್ಯದಲ್ಲಿ ಅವರು ಇಡೀ ದಿನ ಅಧ್ಯಯನ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಅಧ್ಯಯನ ಮಾಡುವುದರಿಂದ ನಿಮ್ಮ ಪರೀಕ್ಷಾ ಸಿದ್ಧತೆ ಮತ್ತಷ್ಟು ಉತ್ತಮಗೊಳ್ಳುತ್ತದೆ ಅಂತಾ ಅವರು ಹೇಳುತ್ತಾರೆ. ಸರಿಯಾದ ಸಮಯ ನಿರ್ವಹಣೆ, 4 ರಿಂದ 5 ಗಂಟೆಗಳ ಅಧ್ಯಯನ ನಿಮಗೆ ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದ್ದಾರೆ.

ಯಾಶ್ನಿ ನಾಗರಾಜನ್ ಪ್ರಕಾರ, ಅವರು ಇತರರ ಸಲಹೆ ಮೇರೆಗೆ ಭೂಗೋಳಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿದರು. ಬೇರೆಯವರ ಸಲಹೆ ಮೇರೆಗೆ ತೆಗೆದುಕೊಂಡ ಈ ವಿಷಯ ಅವರ ಆರಂಭಿಕ ಪ್ರಯತ್ನಗಳಲ್ಲಿ ಯಶಸ್ಸು ಸಿಗುವಂತೆ ಮಾಡಲಿಲ್ಲ. ನಂತರ ಅವರು ತಮ್ಮ ವಿಷಯವನ್ನು ಬದಲಾಯಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ‘ನಿಮಗಿಷ್ಟವಾದ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಅವರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸಲಹೆ ನೀಡಿದ್ದಾರೆ.   

ಯಾಶ್ನಿಯವರ ಪ್ರಕಾರ, ಪ್ರಬಂಧ ಮತ್ತು ನೀತಿಶಾಸ್ತ್ರ(Ethics) ನೀವು ಅತಿ ಹೆಚ್ಚು ಅಂಕಗಳನ್ನು ಗಳಿಸಬಹುದಾದ ಪತ್ರಿಕೆಗಳಾಗಿವೆ. ಆದ್ದರಿಂದ ಈ ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದು ಬಹಳ ಮುಖ್ಯ. ಪೂರ್ಣ ಸಮಯದ ಉದ್ಯೋಗದಲ್ಲಿರುವಾಗ ಯುಪಿಎಸ್‌ಸಿಗೆ ತಯಾರಿ ಮಾಡುವುದು ಕಷ್ಟ ಎಂದು ಅವರು ಹೇಳುತ್ತಾರೆ. ಆದರೆ ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ನೀವು ಈಗಾಗಲೇ ಕೆಲಸ ಹೊಂದಿರುವಾಗ ಯುಪಿಎಸ್‌ಸಿಯಲ್ಲಿ ಅನುತ್ತೀರ್ಣರಾದರೂ ಕೂಡ ನೀವು ಒತ್ತಡ ಅನುಭವಿಸುವುದಿಲ್ಲವೆಂದು ಅವರು ಹೇಳುತ್ತಾರೆ. ನಿಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಕಠಿಣ ಪರಿಶ್ರಮ ಮತ್ತು ಉತ್ತಮ ಸಮಯ ನಿರ್ವಹಣೆಯೊಂದಿಗೆ ನೀವು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬಹುದು ಎಂದು ಸಲಹೆ ನೀಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link