ICC T20 World Cup 2024: Rohit Sharma ಪಡೆಯ 15 ರಣ ದಾಂಡಿಗರು, ಯಾರಲ್ಲಿ ಎಷ್ಟು ದಮ್? ಎಲ್ಲರ ಟಿ20 ದಾಖಲೆ ಇಲ್ಲಿದೆ!
1. ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಭಾರತ ಪರ 151 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಹಿಟ್‌ಮ್ಯಾನ್ 31.79 ಸರಾಸರಿಯೊಂದಿಗೆ 3974 ರನ್ ಗಳಿಸಿದ್ದಾರೆ. ರೋಹಿತ್ ಅವರ ಹೆಸರಿನಲ್ಲಿ 5 ಶತಕ ಮತ್ತು 29 ಅರ್ಧ ಶತಕಗಳಿವೆ. ಅವರ ಸ್ಟ್ರೈಕ್ ರೇಟ್ 139.97 ಆಗಿದೆ. ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು 39 ಪಂದ್ಯಗಳಲ್ಲಿ 34.39 ಸರಾಸರಿಯೊಂದಿಗೆ 963 ರನ್ ಗಳಿಸಿದ್ದಾರೆ.
2. ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಯಾವಾಗಲೂ ಅತ್ಯುತ್ತಮವಾಗಿದೆ. ಅವರು ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೊಹ್ಲಿಗೆ ಇನ್ನೂ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಲಭಿಸಿಲ್ಲ. ಕೊಹ್ಲಿ ಭಾರತ ಪರ 117 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, 51.75 ಸರಾಸರಿ ಮತ್ತು 138.15 ಸ್ಟ್ರೈಕ್ ರೇಟ್ ನೊಂದಿಗೆ ಅವರು 4037 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು 27 ಪಂದ್ಯಗಳಲ್ಲಿ 1141 ರನ್ ಗಳಿಸಿದ್ದಾರೆ. ಅವರ ಸರಾಸರಿ 81.50 ಮತ್ತು ಸ್ಟ್ರೈಕ್ ರೇಟ್ 131.30 ಆಗಿದೆ.
3. ಯಶಸ್ವಿ ಜೈಸ್ವಾಲ್: 22 ವರ್ಷದ ಯಶಸ್ವಿ ಜೈಸ್ವಾಲ್ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ. ಕಳೆದ ವರ್ಷ ಇದೇ ಮಾದರಿಯಲ್ಲಿ ಅವರು ಭಾರತಕ್ಕೆ ಪದಾರ್ಪಣೆ ಮಾಡಿದ್ದರು. ಯಶಸ್ವಿ 17 ಪಂದ್ಯಗಳಲ್ಲಿ 33.46 ಸರಾಸರಿಯಲ್ಲಿ 502 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 161.93 ಆಗಿದೆ.
4. ಸೂರ್ಯಕುಮಾರ್ ಯಾದವ್: ಟಿ20 ಕ್ರಿಕೆಟ್‌ನ ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಈ ಬಾರಿ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಭಾರತ ಪರ 60 ಟಿ20 ಪಂದ್ಯಗಳಲ್ಲಿ 45.55ರ ಸರಾಸರಿಯಲ್ಲಿ 2141 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 171.55 ಆಗಿದೆ. ಸೂರ್ಯಕುಮಾರ್ 4 ಶತಕ ಹಾಗೂ 17 ಅರ್ಧ ಶತಕ ಸಿಡಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ಎರಡು ಟಿ20 ವಿಶ್ವಕಪ್‌ಗಳಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, 56.20 ರ ಸರಾಸರಿಯಲ್ಲಿ 281 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 181.29 ಆಗಿದೆ.
5. ರಿಷಬ್ ಪಂತ್: ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ ಇದು ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ, ಡಿಸೆಂಬರ್ 2022 ರಲ್ಲಿ, ಅವರು ಭೀಕರ ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರು 15 ತಿಂಗಳ ನಂತರ ವೃತ್ತಿಪರ ಕ್ರಿಕೆಟ್‌ಗೆ ಮರಳಿದ್ದಾರೆ. ಐಪಿಎಲ್‌ನ ಆರಂಭಿಕ ಪಂದ್ಯಗಳ ನಂತರ ಅವರು ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದಾರೆ. ಪಂತ್ ಭಾರತ ಪರ 66 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, 22.43 ರ ಸರಾಸರಿಯಲ್ಲಿ ಮತ್ತು 126.37 ಸ್ಟ್ರೈಕ್ ರೇಟ್‌ನಲ್ಲಿ 987 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್‌ನ ಎರಡು ಸೀಸನ್‌ಗಳಲ್ಲಿ ಪಂತ್ ಇದುವರೆಗೆ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 21.75ರ ಸರಾಸರಿಯಲ್ಲಿ 87 ರನ್‌ಗಳು ಅವರ ಹೆಸರಿನಲ್ಲಿ ದಾಖಲಾಗಿವೆ. ಈ ಬಾರಿಯ ಟೂರ್ನಿಯಲ್ಲಿ ತಮ್ಮ ಛಾಪು ಮೂಡಿಸಲು ಪಂತ್ ಕಾತರರಾಗಿದ್ದಾರೆ.
6. ಸಂಜು ಸ್ಯಾಮ್ಸನ್: ಈ ಬಾರಿ ಹೆಚ್ಚು ಚರ್ಚೆಗೆ ಒಳಗಾದ ಆಟಗಾರ ಎಂದರೆ ಸಂಜು ಸ್ಯಾಮ್ಸನ್. ಐಪಿಎಲ್‌ನಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ಸಾಕಷ್ಟು ಪ್ರಶಂಸೆ ಪಡೆದಿದ್ದಾರೆ. ಸ್ಯಾಮ್ಸನ್ ತಂಡದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಹಿಮ್ಮೆಟ್ಟಿರುವ ಮೂಲಕ ಅವರು ಸ್ಥಾನ ಗಳಿಸಿದ್ದಾರೆ. ಸ್ಯಾಮ್ಸನ್ 25 ಟಿ20 ಪಂದ್ಯಗಳಲ್ಲಿ 374 ರನ್ ಗಳಿಸಿದ್ದಾರೆ. ಅವರ ಸರಾಸರಿ 18.70 ಮತ್ತು ಸ್ಟ್ರೈಕ್ ರೇಟ್ 133.09. ಅವರು ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ.
7. ಹಾರ್ದಿಕ್ ಪಾಂಡ್ಯ: ಕಳೆದ ವರ್ಷ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಭಾರತದ ಪರ 92 ಟಿ20 ಪಂದ್ಯಗಳಲ್ಲಿ ಹಾರ್ದಿಕ್ 1348 ರನ್ ಗಳಿಸಿದ್ದಾರೆ. ಅವರ ಸರಾಸರಿ 25.43 ಮತ್ತು ಸ್ಟ್ರೈಕ್ ರೇಟ್ 139.83 ಆಗಿದೆ. ಹಾರ್ದಿಕ್ 73 ವಿಕೆಟ್ ಕಬಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ 16 ಪಂದ್ಯಗಳಲ್ಲಿ 243 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 13 ವಿಕೆಟ್ ಕೂಡ ಇದೆ.
8. ಶಿವಂ ದುಬೆ: ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಶಿವಂ ದುಬೆ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಪರ 21 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು ತಮ್ಮ ಹೆಸರಿನಲ್ಲಿ 39.42 ಸರಾಸರಿಯಲ್ಲಿ 276 ರನ್‌ಗಳನ್ನು ಮತ್ತು 145.26 ಸ್ಟ್ರೈಕ್ ರೇಟ್‌ಗಳನ್ನು ಹೊಂದಿದ್ದಾರೆ. ಶಿವಂ ಕೂಡ 8 ವಿಕೆಟ್ ಪಡೆದಿದ್ದಾರೆ. ಅವರು ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡಲಿದ್ದಾರೆ.
9. ರವೀಂದ್ರ ಜಡೇಜಾ: ಭಾರತದ ಅತ್ಯಂತ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಂದ ತಂಡ ಈ ಬಾರಿ ಹೆಚ್ಚಿನ ನಿರೀಕ್ಷೆ ಹೊಂದಿದೆ. ಜಡೇಜಾ ಟಿ20ಯಲ್ಲಿ ದೇಶಕ್ಕಾಗಿ 66 ಪಂದ್ಯಗಳನ್ನು ಆಡಿದ್ದು, 480 ರನ್ ಗಳಿಸಿದ್ದಾರೆ. ಅವರ ಸರಾಸರಿ 22.85 ಮತ್ತು ಸ್ಟ್ರೈಕ್ ರೇಟ್ 125.32 ಆಗಿದೆ. ಜಡೇಜಾ ಅವರ ಹೆಸರಿನಲ್ಲಿ 53 ವಿಕೆಟ್ ಗಳಿವೆ. ಟಿ20 ವಿಶ್ವಕಪ್ ಕುರಿತು ಹೇಳುವುದಾದರೇ, ಅವರು 22 ಪಂದ್ಯಗಳಲ್ಲಿ 95 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 21 ವಿಕೆಟ್‌ಗಳನ್ನು ಕೂಡ ಉರುಳಿಸಿದ್ದಾರೆ.
10. ಅಕ್ಷರ್ ಪಟೇಲ್: ಅಕ್ಷರ್ ಪಟೇಲ್ 52 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು 49 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಬ್ಯಾಟಿಂಗ್ ಕುರಿತು ಹೇಳುವುದಾದರೆ, ಅಕ್ಷರ್ 19.00 ಸರಾಸರಿ ಮತ್ತು 144.40 ಸ್ಟ್ರೈಕ್ ರೇಟ್‌ನಲ್ಲಿ 361 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಗಳಿಸಿದ್ದು 7 ರನ್ ಮಾತ್ರ. ಅವರ ಖಾತೆಯಲ್ಲಿ 3 ವಿಕೆಟ್‌ಗಳಿವೆ. ಅಕ್ಷರ ಈ ಬಾರಿ ಅವಕಾಶ ಸಿಕ್ಕರೆ ಮೇಲುಗೈ ಸಾಧಿಸಲು ಬಯಸುತ್ತಾರೆ.
11. ಕುಲದೀಪ್ ಯಾದವ್: ಎಡಗೈ ಸ್ಪಿನ್ನರ್ ಕುಲದೀಪ್ ಭಾರತ ಪರ 35 ಟಿ20 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. ಅವರು ಪ್ರಸ್ತುತ ದೇಶದ ಅತ್ಯುತ್ತಮ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಕುಲದೀಪ್‌ಗೆ ಇನ್ನೂ ಟಿ20 ವಿಶ್ವಕಪ್‌ನಲ್ಲಿ ಆದಿಲ್ಲ. ಈ ಬಾರಿ ಅವರ ಫಾರ್ಮ್ ನೋಡಿದರೆ ಅವರು ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ..
12. ಯುಜುವೇಂದ್ರ ಚಾಹಲ್: ಟಿ20 ಮಾದರಿಯಲ್ಲಿ ಭಾರತ ಅನುಭವಿ ಆಟಗಾರರಲ್ಲಿ ಒಬ್ಬರಾದ ಯುಜ್ವೇಂದ್ರ ಚಹಾಲ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. 80 ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ. ಕುಲದೀಪ್ ಅವರಂತೆ ಚಾಹಲ್ ಕೂಡ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡಲಿದ್ದಾರೆ.
13. ಜಸ್ಪ್ರೀತ್ ಬುಮ್ರಾ: ಭಾರತದ ಪ್ರಮುಖ ವೇಗಿಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದುವರೆಗೆ 62 ಟಿ20 ಪಂದ್ಯಗಳಲ್ಲಿ 74 ವಿಕೆಟ್ ಪಡೆದಿದ್ದಾರೆ. ಬುಮ್ರಾ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 11 ವಿಕೆಟ್ ಪಡೆದಿದ್ದಾರೆ.
14, ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ ಪರ ಐಪಿಎಲ್‌ನಲ್ಲಿ ಆಡಿದ್ದ ಅರ್ಷದೀಪ್ ಸಿಂಗ್ ಕಳೆದ ಬಾರಿ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು. ಇದುವರೆಗೆ 44 ಟಿ20 ಪಂದ್ಯಗಳಲ್ಲಿ ಭಾರತ ಪರ 66 ವಿಕೆಟ್ ಪಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಅವರು ಸಾಕಷ್ಟು ಪ್ರಭಾವ ಬೀರಿದ್ದರು. ಅರ್ಷದೀಪ್ 6 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು.
15. ಮಹಮ್ಮದ್ ಸಿರಾಜ್: