ವರ್ಷದಲ್ಲಿ ಕೇವಲ 90 ದಿನವಷ್ಟೇ ಸಿಗುವ ಹಣ್ಣು: ಒಮ್ಮೆ ತಿಂದರೆ ಸೊಂಟದ ಕೊಬ್ಬು ನಿಮಿಷಗಳಲ್ಲಿ ಕರಗುತ್ತದೆ! ಮಧುಮೇಹಿಗಳಿಗೂ ಇದು ಸಂಜೀವಿನಿ
ತಾಳೆ ಹಣ್ಣು ಬಹಳಷ್ಟು ಆರೋಗ್ಯ ಪ್ರಯೋಜನವನ್ನು ಹೊಂದಿರುತ್ತದೆ. ಇದನ್ನು ಪೋಷಕಾಂಶಗಳ ಗಣಿ ಎಂದೂ ಸಹ ಕರೆಯಲಾಗುತ್ತದೆ. ಇದು ಬೇಸಿಗೆಯಲ್ಲಷ್ಟೇ ಲಭ್ಯವಾಗುವ ಮತ್ತು ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಭುಗಳಲ್ಲಿ ಒಂದು.
ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುವ ಫೈಬರ್ ಕೂಡ ಇದರಲ್ಲಿ ಅಡಕವಾಗಿದೆ.
ಕಡಿಮೆ ಸಿಹಿ ಅಂಶವನ್ನು ತಾಳೆ ಹಣ್ಣು ಹೊಂದಿರುವ ಕಾರಣ ಮಧುಮೇಹಿಗಳು ಸಹ ಇದನ್ನು ತಿನ್ನಬಹುದು ಎಂದು ವೈದ್ಯರು ಹೇಳುತ್ತಾರೆ.
ಹಳ್ಳಿಗಳಲ್ಲಿ ಹಾವುಗಳ ವಿಷ ತೆಗೆಯಲು ಈ ತಾಳೆಹಣ್ಣಿನ ಮರ ಎಲೆಗಳ ಜೊತೆಗೆ ತಾಳೆ ತೊಗಟೆಯನ್ನೂ ಅಮೃತದಂತೆ ಬಳಕೆ ಮಾಡುತ್ತಾರೆ. ಪೂರ್ವಜರು ಯಾವುದೇ ಕೀಟನಾಶಕ ಬಳಸದೆ ಈ ಹಣ್ಣನ್ನು ತಿನ್ನುತ್ತಿದ್ದ ಕಾರಣಕ್ಕೆ ನೂರು ವರ್ಷಕ್ಕೂ ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತಿದ್ದರು.
ಹಳ್ಳಿಗರಿಗೆ ಸಿಗುವ ಅಮೃತದಂತಿರುವ ತಾಳೆ ಹಣ್ಣು ಇತ್ತೀಚೆಗೆ ದಿನಗಳಲ್ಲಿ ಹೆದ್ದಾರಿ ಬದಿಯಲ್ಲಿ ಮಾರಾಟವಾಗುತ್ತಿರುವುದನ್ನು ಕಾಣಬಹುದು. ವರ್ಷಕ್ಕೊಮ್ಮೆ ಸಿಗುವ ಈ ತಾಳೆ ಹಣ್ಣು ತಿಂದರೆ ಆರೋಗ್ಯಕ್ಕೆ ಹಲವಾರು ಲಾಭಗಳಿವೆ
ವಾರಕ್ಕೊಮ್ಮೆ ಅಥವಾ ವಾರಕ್ಕೆ ಮೂರು ತಾಳೆ ಹಣ್ಣು ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುತ್ತವೆ. ಜೊತೆಗೆ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಹಳಷ್ಟು ಸಹಕಾರಿ. ತೂಕ ಇಳಿಕೆಗೆ ಪ್ರಯತ್ನಿಸುವವರು ಇದನ್ನು ಸೇವಿಸಿದರೆ ಒಳ್ಳೆಯದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.