Identifying Isht Dev: ನಿಮ್ಮ ಇಷ್ಟದೇವರು ಯಾರು? ರಾಶಿಗೆ ಅನುಗುಣವಾಗಿ ಹೀಗೆ ಕಂಡುಹಿಡಿಯಿರಿ
ಜೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜನನ ತಿಥಿ, ನಿಮ್ಮ ಹೆಸರಿನ ಮೊದಲ ಅಕ್ಷರ ಅಥವಾ ಜನ್ಮ ಜಾತಕದ ರಾಶಿಯ ಆಧಾರದ ಮೇಲೆ ನೀವು ನಿಮ್ಮ ಇಷ್ಟದೇವನನ್ನು ಗುರುತಿಸಬಹುದು. ಅರುಣ ಸಂಹಿತೆ (ಇದನ್ನು ಕೆಂಪು ಪುಸ್ತಕ ಎಂದೂ ಕೂಡ ಕರೆಯಲಾಗುತ್ತದೆ) ಅನುಸಾರ ವ್ಯಕ್ತಿ ತನ್ನ ಪೂರ್ವಜನ್ಮದಲ್ಲಿ ಮಾಡಿದ ಕರ್ಮದ ಆಧಾರದ ಮೇಲೆ ಆತನ ಇಷ್ಟದೇವ ಯಾರು ಎಂದು ಹೇಳಲಾಗುತ್ತದೆ. ಕುಂಡಲಿ ಅಥವಾ ಜನ್ಮ ಜಾತಕದ 5 ನೇ ಭಾವ ಅಥವಾ ಸ್ಥಾನ ಇಷ್ಟ ದೇವನ ಸ್ಥಾನವಾಗಿರುತ್ತದೆ. ಈ ಸ್ಥಾನದಲ್ಲಿ ಯಾವ ರಾಶಿ ಇರುತ್ತದೆಯೋ ಆ ರಾಶಿಯ (Zodiac Sign) ಗ್ರಹದ ಅಧಿಪತಿಯೇ ಆ ವ್ಯಕ್ತಿಯ ಇಷ್ಟದೇವ. ನಿಮ್ಮ ಜಾತಕ ಎಷ್ಟೇ ದೋಷದಿಂದ ಕೂಡಿದ್ದರು, ನೀವು ನಿಮ್ಮ ಇಷ್ಟದೇವನನ್ನು ಪ್ರಸನ್ನಗೊಳಿಸಿದರೆ, ಆ ದೋಷಗಳು ನಿಮ್ಮನ್ನು ಹೆಚ್ಚು ಕಾಡುವುದಿಲ್ಲ.
ಮೇಷ ಹಾಗೂ ವೃಶ್ಚಿಕ: ಮೇಷ ಹಾಗೂ ವೃಶ್ಚಿಕ ರಾಶಿಗಳ (Rashi) ಸ್ವಾಮಿ ಗ್ರಹ ಮಂಗಳ ಗ್ರಹ. ಹೀಗಾಗಿ ಈ ಎರಡೂ ರಾಶಿಗಳಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ರಾಮ ಇಷ್ಟ ದೇವರು.
ವೃಷಭ ಹಾಗೂ ತುಲಾ: ವೃಷಭ ಹಾಗೂ ತುಲಾ ರಾಶಿಗಳ ಸ್ವಾಮಿ ಗ್ರಹ ಶುಕ್ರ ಗ್ರಹ ಆಗಿದೆ. ಹೀಗಾಗಿ ಇವರ ಇಷ್ಟ ದೇವತೆ ದೇವಿ ದುರ್ಗಾ ಆಗಿದ್ದು, ಇವರು ದೇವಿ ದುರ್ಗೆಯನ್ನು ಆರಾಧಿಸಬೇಕು.
ಮಿಥುನ ಹಾಗೂ ಕನ್ಯಾ: ಮಿಥುನ ಹಾಗೂ ಕನ್ಯಾ ರಾಶಿಗಳ ಸ್ವಾಮಿ ಗ್ರಹ ಬುಧ ಗ್ರಹ. ಇವರು ಶ್ರೀಗಣೇಶ ಹಾಗೂ ಶ್ರೀ ವಿಷ್ಣುವನ್ನು ಆರಾಧಿಸಬೇಕು.
ಕರ್ಕ: ಕರ್ಕ ರಾಶಿಯ ಸ್ವಾಮಿ ಗ್ರಹ ಚಂದ್ರ ಹಾಗೂ ದೇವಾಧಿದೇವ ಮಹಾದೇವ ಇವರ ಇಷ್ಟ ದೇವ. ಹೀಗಾಗಿ ಇವರು ಶಿವನನ್ನು ಆರಾಧಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತವೆ.
ಸಿಂಹ: ಸಿಂಹ ರಾಶಿಯ ಸ್ವಾಮಿ ಗ್ರಹ ಸೂರ್ಯ. ಇವರ ಇಷ್ಟ ದೇವ ಹನುಮ ಹಾಗೂ ಇಷ್ಟ ದೇವತೆ ಗಾಯತ್ರಿ ದೇವಿ ಆಗಿದ್ದಾರೆ.
ಧನು ಹಾಗೂ ಮೀನ: ಧನು ಹಾಗೂ ಮೀನ ರಾಶಿಯ ಜನರ ಸ್ವಾಮಿ ಗ್ರಹ ಗುರು ಗ್ರಹ. ಇವರ ಇಷ್ಟ ದೇವ ಶ್ರೀವಿಷ್ಣು ಹಾಗೂ ಇಷ್ಟ ದೇವತೆ ಶ್ರೀ ಲಕ್ಷ್ಮಿ ದೇವಿಯಾಗಿದ್ದಾರೆ.
ಮಕರ ಹಾಗೂ ಕುಂಭ: ಮಕರ ಹಾಗೂ ಕುಂಭ ರಾಶಿಯ ಜನರ ಸ್ವಾಮಿ ಗ್ರಹ ಶನಿ ಗ್ರಹ. ಹೀಗಾಗಿ ಇವರ ಇಷ್ಟ ದೇವರು ಹನುಮಂತ ಹಾಗೂ ಶಿವನಾಗಿದ್ದಾನೆ. ಇವರ ಪೂಜೆಯಿಂದ ಈ ರಾಶಿಯ ಜನರಿಗೆ ವಿಶೇಷ ಫಲ ಲಭಿಸುತ್ತದೆ.