4.5 ಕೋಟಿ ರೂ. ಮೌಲ್ಯದ ನೋಟುಗಳು ಮತ್ತು ಚಿನ್ನದಿಂದ ಅಲಂಕೃತಗೊಂಡ ದೇವಿ ವಿಗ್ರಹ

Thu, 18 Oct 2018-9:29 am,

ಇದು ನಿಜಕ್ಕೂ ನೋಡುವುದಕ್ಕೆ ಒಂದು ಅದ್ಭುತ ದೃಶ್ಯವಾಗಿದೆ! 140 ವರ್ಷ ಪುರಾನವಾದ  ವಿಷ್ಣಖಪಟ್ಟಣಂ (ವೈಜಾಗ್) ದೇವಸ್ಥಾನದ ಶ್ರೀ ಕನ್ಯಾಕಾ ಪರಮೇಶ್ವರಿ ದೇವಿಯ ವಿಗ್ರಹವನ್ನು 4.5 ಕೋಟಿ ಮೌಲ್ಯದ ಚಿನ್ನದ ಆಭರಣ ಮತ್ತು ನೋಟುಗಳಿಂದ ಅಲಂಕರಿಸಲಾಗಿದೆ. ಸುಮಾರು 200 ಭಕ್ತರು ಇದಕ್ಕೆ ಸಹಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ದೇವಾಲಯವು ಸ್ಥಳೀಯ ಉದ್ಯಮಿಗಳ ಒಂದು ಗುಂಪಿನಿಂದ ನಿರ್ವಹಿಸಲ್ಪದುತ್ತದೆ. ಅವರು ನವರಾತ್ರಿ ಪ್ರಾರಂಭವಾಗುವ ಮೊದಲು ನೋಟುಗಳ ಸಂಗ್ರಹಣೆ ಪ್ರಾರಂಭಿಸಿದರು.

ನವರಾತ್ರಿ ಉತ್ಸವದ ಅಂಗವಾಗಿ ದೇವಿಯನ್ನು ನೋಟುಗಳು ಮತ್ತು ಚಿನ್ನದಿಂದ ಅಲಂಕರಿಸಲಾಯಿತು. ನಂತರ ಆ ನೋಟುಗಳನ್ನು ಕೊಡುಗೆ ನೀಡಿದವರಿಗೆ ಹಿಂದಿರುಗಿಸಲಾಗಿದೆ.

ಇದು ದೇವಾಲಯದ ಪ್ರಾಧಿಕಾರವು ನಡೆಸಿದ ವಾರ್ಷಿಕ ಆಚರಣೆಯಾಗಿದೆ.

ಈ ವರ್ಷ 4 ಕೋಟಿ ರೂ. ಮೊತ್ತದ ನೋಟುಗಳನ್ನು ಅಂದಾಜಿಸಲಾಗಿತ್ತು. ನವರಾತ್ರಿಯ ಈ ಶುಭಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಿಯ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ.

ಲಕ್ಷ್ಮಿ ದೇವಿಯ ಧನಲಕ್ಷ್ಮಿ ಅವತಾರ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link