ʼಒಂದು ವೇಳೆ ನಾನು ʼಅದನ್ನುʼ ಮಾಡಿದ್ದರೇ ಐಶ್ವರ್ಯ ಇಂದು ನನ್ನವಳಾಗಿರುತ್ತಿದ್ದಳುʼ ಮಾಜಿ ಗೆಳತಿ ಬಗ್ಗೆ ಸಲ್ಮಾನ್ ಖಾನ್ ಶಾಕಿಂಗ್‌ ಕಾಮೆಂಟ್!!

Fri, 30 Aug 2024-1:27 pm,

ಎಲ್ಲರಿಗೂ ತಿಳಿದಿರುವಂತೆ, ಸಲ್ಮಾನ್ ಮತ್ತು ಐಶ್ವರ್ಯಾ ನಡುವಿನ ಸಂಬಂಧವು 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಮೂಲಕ ಅರಳಿತು..   

ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಜಯ್ ದೇವಗನ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಟ್ರೈಆಂಗಲ್ ಲವ್‌ಸ್ಟೋರಿ ಅಭಿಮಾನಿಗಳ ಹೃದಯವನ್ನೇ ಆಳಿತು. ಬಾಕ್ಸ್ ಆಫೀಸ್ ನಲ್ಲೂ ಹಿಟ್‌ ಆಗಿತ್ತು..  

ಸಂದರ್ಶನವೊಂದರಲ್ಲಿ ಸ್ವತಃ ಸಲ್ಮಾನ್ ಖಾನ್ ಈ ಬಗ್ಗೆ  ಮಾತನಾಡಿ ʼಈ ಚಿತ್ರದ ಸ್ಕ್ರಿಪ್ಟ್ ನಾನೇ ಬರೆದಿದ್ದರೆ ಐಶ್ವರ್ಯಾ ನನ್ನವಳಾಗುತ್ತಿದ್ದಳುʼ ಎಂದು ಭಾಯಿಜಾನ್ ಹೇಳಿದ್ದರು.    

‘ಹಮ್ ದಿಲ್ ದೇ ಚುಕೇ ಸನಂ’ ಸಿನಿಮಾ ಅಭಿಮಾನಿಗಳ ಮನದಲ್ಲಿ ಆಳಿತು. ಇಂದಿಗೂ ಅಭಿಮಾನಿಗಳು ಅಷ್ಟೇ ಆಸಕ್ತಿಯಿಂದ ಸಿನಿಮಾದ ಹಾಡುಗಳನ್ನು ಕೇಳುತ್ತಾರೆ.   

ಇದಲ್ಲದೆ, ಚಿತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಿನಿಮಾದಿಂದಾಗಿ ಐಶ್ವರ್ಯಾ-ಸಲ್ಮಾನ್ ಸಂಬಂಧದ ಬಗ್ಗೆಯೂ ಚರ್ಚೆಯಾಗಿದೆ.  

ಇನ್ನು ಸದ್ಯ ಐಶ್ವರ್ಯ ಹಾಗೂ ಬಚ್ಚನ್‌ ಕುಟುಂಬದಲ್ಲಿ ಕಲಹಗಳಿವೆ ಎನ್ನುವ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಇದಕ್ಕೆ ಪುಷ್ಟೀ ನೀಡುವಂತೆ ನಟಿ ಒಬ್ಬರಾಗಿಯೇ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದ್ದಾರೆ..   

ಆದರೆ ಇತ್ತೀಚೆಗೆ ನಟ ಅಭಿಷೇಕ್‌ ಮಿಡಿಯಾ ಮುಂದೆ ರಿಂಗ್‌ ತೋರಿಸಿ ನಾನು ವಿವಾಹಿತನಾಗಿಯೇ ಇದ್ದೇನೆ ಎಂದಿದ್ದರು.. ಅಂದಿನಿಂದ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಹೇಳಲಾಗುತ್ತಿದೆ..    

ZEENEWS TRENDING STORIES

By continuing to use the site, you agree to the use of cookies. You can find out more by Tapping this link