ಭಾರತದ ಆ ಕ್ರಿಕೆಟಿಗನಿಗಾಗಿ ಕಾವ್ಯ ಮಾರನ್ ಮತ್ತು ಪ್ರೀತಿ ಜಿಂಟಾ ನಡುವೆ ಫೈಟ್!? ಚೆಲುವೆಯರ ಮನಗೆದ್ದ ಆತ ಬೇರಾರು ಅಲ್ಲ…

Fri, 12 Jul 2024-8:41 pm,

ಐಪಿಎಲ್ 2025ರ ಆಟಗಾರರ ಹರಾಜು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮತ್ತೊಮ್ಮೆ ಎಲ್ಲಾ ಆಟಗಾರರ ಹರಾಜು ನಡೆಯಲಿದ್ದು, ಈ ಹರಾಜಿನಲ್ಲಿ ಕಾವ್ಯಾ ಮಾರನ್ ಮತ್ತು ಪ್ರೀತಿ ಜಿಂಟಾ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಐಪಿಎಲ್‌’ನಲ್ಲಿ ಸನ್‌’ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮತ್ತು ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಜಿಂಟಾ ಒಬ್ಬ ಆಟಗಾರನಿಗಾಗಿ ಬೆಟ್ಟಿಂಗ್ ಮಾಡುವ ಸಾಧ್ಯತೆ ಇದೆ. ಆದರೆ ಆ ಆಟಗಾರ ಹರಾಜಿನಲ್ಲಿ ಭಾಗಿಯಾಗಬೇಕು. ಅಂದಹಾಗೆ ಆತ ಬೇರಾರು ಅಲ್ಲ, ಯುಎಸ್ಎ ಕ್ರಿಕೆಟಿಗ ಸೌರಭ್ ನೇತ್ರವಾಲ್ಕರ್.

ಸೌರಭ್ ನೇತ್ರವಾಲ್ಕರ್ ಭಾರತೀಯ ಮೂಲದ ಆಟಗಾರ. ಕ್ರಿಕೆಟಿಗರಲ್ಲದೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ಅಮೆರಿಕದ ಕ್ರಿಕೆಟ್‌’ನಲ್ಲಿ ನಿರಂತರವಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಈತ 2024 ರ ಟಿ 20 ವಿಶ್ವಕಪ್‌’ನಲ್ಲಿ  ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು.

2024ರ T20 ವಿಶ್ವಕಪ್‌’ನಲ್ಲಿ USA ಅನ್ನು ಗುಂಪು ಹಂತದಿಂದ ಸೂಪರ್-8 ಹಂತಕ್ಕೆ ಕೊಂಡೊಯ್ಯುವಲ್ಲಿ ಸೌರಭ್ ನೇತ್ರವಾಲ್ಕರ್ ಪ್ರಮುಖ ಪಾತ್ರ ವಹಿಸಿದ್ದರು.

ಈ ICC ಟೂರ್ನಿಯಲ್ಲಿ USA ತಂಡದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. T20 ವಿಶ್ವಕಪ್ 2024 ರಲ್ಲಿ 6 ಪಂದ್ಯಗಳನ್ನು ಆಡಿದ್ದು 6.63 ರ ಎಕಾನಮಿ ಮತ್ತು 20.83ರ ಸರಾಸರಿಯೊಂದಿಗೆ 6 ವಿಕೆಟ್ ಪಡೆದಿದ್ದರು.

ಇನ್ನು ಐಪಿಎಲ್ 2025ರ ಹರಾಜಿನಲ್ಲಿ ಸೌರಭ್ ಬಂದರೆ, ಕಾವ್ಯಾ ಮಾರನ್ ಮತ್ತು ಪ್ರೀತಿ ಜಿಂಟಾ ಮೊದಲು ಕಣಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link