ಮೊಬೈಲ್ ಕವರ್ ಬಣ್ಣ ಬದಲಾಗಿದೆಯೇ? ಅದನ್ನು ಫಳ ಫಳ ಹೊಳೆಯುವಂತೆ ಮಾಡುತ್ತೆ ಮನೆಯಲ್ಲಿರುವ ಈ ವಸ್ತುಗಳು
ಮೊಬೈಲ್ ಕವರ್ ಕೊಳೆಯಾಗಿದ್ರೆ ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಬದಲಿಗೆ, ನಿಮ್ಮ ಮನೆಯಲ್ಲಿರುವ ಮೃದುವಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಸ್ವಲ್ಪ ಬೆಚ್ಚಗಿನ ನೀರಿನಿಂದ ತೇವಗೊಳಿಸಿ. ಅದನ್ನು ಸ್ವಚ್ಛಗೊಳಿಸಬಹುದು.
ಒಂದು ಸಣ್ಣ ಹತ್ತಿ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ರಬ್ಬರ್ ಆಲ್ಕೋಹಾಲ್ ಹನಿಗಳನ್ನು ಸೇರಿಸಿ ಅದರಿಂದ ಕವರ್ ಅನ್ನು ಚೆನ್ನಾಗಿ ಕ್ಲೀನ್ ಮಾಡಿ. ಇದರಿಂದ ಫೋನ್ ಕವರ್ ಬಣ್ಣ ಬದಲಾಗುತ್ತದೆ.
ಪ್ರತಿಯೊಬ್ಬರ ಮನೆಯಲ್ಲೂ ಟೂತ್ ಪೇಸ್ಟ್ ಇದ್ದೇ ಇರುತ್ತದೆ. ನೀವು ಮೃದುವಾದ ಹಲ್ಲುಜ್ಜುವ ಬ್ರಷ್‌ನಿಂದ ಕವರ್‌ಗೆ ಟೂತ್‌ಪೇಸ್ಟ್ ಅನ್ನು ಅನ್ವಯಿಸಿ ಸ್ವಲ್ಪ ಕ್ಲೀನ್ ಮಾಡಿ ಬಳಿಕ ಶುದ್ದ ನೀರಿನಿಂದ ವಾಶ್ ಮಾಡಿದರೆ ಸ್ಮಾರ್ಟ್‌ಫೋನ್ ಕವರ್ ಮೊದಲಿನಂತೆ ಫಳ ಫಳ ಹೊಳೆಯುತ್ತದೆ.
ಮೃದುವಾದ ಬಟ್ಟೆಯ ಮೇಲೆ ನೇಲ್ ಪಾಲಿಶ್ ರಿಮೂವರ್ ಲಿಕ್ವಿಡ್ ಹಾಕಿ ಇದರಿಂದ ಕವರ್ ಸ್ವಚ್ಛಗೊಳಿಸಿ. ನಂತರ ಶುದ್ಧ ನೀರಿನಿಂದ ತೊಳೆದರೆ ಕವರ್ ಮೊದಲಿನ ಬಣ್ಣಕ್ಕೆ ಮರಳುತ್ತದೆ.
ಇದಲ್ಲದೆ, ಪ್ರತಿ ಅಡುಗೆ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಪಾತ್ರೆ ತೊಳೆಯುವ ಸೋಪ್, ಇಲ್ಲವೇ ಲಿಕ್ವಿಡ್ ಬಳಸಿ ಕವರ್ ಸ್ವಚ್ಛಗೊಳಿಸುವುದರಿಂದಲೂ ಸ್ಮಾರ್ಟ್‌ಫೋನ್ ಕವರ್ ಹೊಸದರಂತಾಗುತ್ತದೆ.