ಪಿತೃ ದೋಷವಿದ್ದರೆ ನಿಮ್ಮ ಜೀವನದಲ್ಲಿ ಈ ರೀತಿ ಆಗುತ್ತಿರುತ್ತದೆ; ಇವೇ ನೋಡಿ ಪಿತೃ ದೋಷದ ಲಕ್ಷಣಗಳು!
ಆಕಸ್ಮಿಕವಾಗಿ ಯಾವುದೋ ಒಂದು ಅಪಘಾತಕ್ಕೆ ಬಲಿಯಾಗುವುದು ಅಥವಾ ಹಠಾತ್ ಅನಾರೋಗ್ಯದಿಂದ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆದುಕೊಳ್ಳುವುದು ಪಿತೃ ದೋಷಕ್ಕೆ ಕಾರಣವೆಂದು ಹೇಳಲಾಗುತ್ತದೆ. ನಿಮಗೂ ಸಹ ಈ ರೀತಿ ಆಗುತ್ತಿದ್ದರೆ ನಿಮ್ಮ ಪೂರ್ವಜರ ಶಾಂತಿಗಾಗಿ ದಾನ ಮಾಡಬೇಕು ಮತ್ತು ಪಿತೃಗಳನ್ನು ಸ್ಮರಿಸಬೇಕು.
ಮನೆಯಲ್ಲಿ ಕಲಹದಂತಹ ಘಟನೆಗಳು ಸಾಮಾನ್ಯ, ಆದರೆ ಪಿತೃ ಪಕ್ಷಕ್ಕಿಂತ ಮೊದಲು ಪತಿ-ಪತ್ನಿ ಅಥವಾ ಕುಟುಂಬದ ಸದಸ್ಯರ ನಡುವೆ ವಿವಾದ ಹೆಚ್ಚಾದರೆ ಒಳ್ಳೆಯದಲ್ಲ. ಮನೆಯಲ್ಲಿನ ಕಲಹಗಳು, ವಿವಾದಗಳು ಪಿತೃ ದೋಷಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಪತಿ-ಪತ್ನಿಯ ನಡುವೆ ಮನಸ್ಥಾಪಗಳು ಉಂಟಾಗುವುದು, ಕಲಹಗಳು ಹೆಚ್ಚಾಗುವುದು ಪಿತೃ ದೋಷದ ಸಂಕೇತವಾಗಿರುತ್ತದೆ.
ಪಿತೃಪಕ್ಷದ ಮೊದಲು ಮನೆಯಲ್ಲಿ ಹಠಾತ್ ಅರಳಿ ಮರವು ಬೆಳೆದುಕೊಳ್ಳುವುದು ಮತ್ತು ತುಳಸಿ ಗಿಡ ಒಣಗಿ ಹೋಗುವುದು ಅಶುಭ ಸಂಕೇತ. ಈ ಘಟನೆಗಳು ಪೂರ್ವಜರ ಅಸಮಾಧಾನವನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ಇದು ಸಂಪತ್ತು, ಸಂತೋಷ, ಸಮೃದ್ಧಿ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗದಂತೆ ಕಾಳಜಿ ವಹಿಸಬೇಕು.
ಪಿತೃ ದೋಷವು ಸಂಪತ್ತಿನ ನಷ್ಟ ಮತ್ತು ಪ್ರಗತಿಯಲ್ಲಿ ಅಡಚಣೆ ಉಂಟುಮಾಡುತ್ತದೆ. ಎಲ್ಲಾ ಪ್ರಯತ್ನಗಳ ನಂತರವೂ ವ್ಯಕ್ತಿಯು ಬಯಸಿದ ಯಶಸ್ಸನ್ನು ಪಡೆಯುವುದಿಲ್ಲ. ಪಿತೃಗಳ ಅಸಮಾಧಾನವು ಅವನನ್ನು ಬಡತನಕ್ಕೆ ತಳ್ಳುತ್ತದೆ. ಇಡೀ ಕುಟುಂಬವೇ ಆರ್ಥಿಕ ಸಂಕಷ್ಟ ಮತ್ತು ಅಭಾವದಲ್ಲಿ ಬದುಕುತ್ತಿರುತ್ತದೆ.
ನೀವು ಪೂರ್ವಜರ ಶಾಂತಿ ಮತ್ತು ಪಿತೃ ದೋಷದಿಂದ ಮುಕ್ತಿ ಪಡೆಯಲು ಬಯಸಿದರೆ, ಪಿತೃ ಪಕ್ಷದಲ್ಲಿ ಬ್ರಾಹ್ಮಣರಿಗೆ ಆಹಾರ ನೀಡಬೇಕು. ಪಂಚಬಲಿ ಭೋಗವನ್ನು ಅರ್ಪಿಸಿ, ಅಗತ್ಯವಿರುವವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನೀವು ಪಿತೃ ದೋಷದಿಂದ ಮುಕ್ತಿ ಪಡೆಯುತ್ತೀರಿ.