Plants for Vastu: ಈ ಶಕ್ತಿಶಾಲಿ ಗಿಡಗಳನ್ನು ಮನೆಯಲ್ಲಿಟ್ಟರೆ ಅಧಿಕಾರ-ಸಂಪತ್ತು ಒಟ್ಟಿಗೆ ಒಲಿಯುತ್ತದೆ

Wed, 30 Nov 2022-9:59 am,

ಕ್ರಾಸ್ಸುಲಾ ಸಸ್ಯ: ನೀವು ಆರ್ಥಿಕ ಪರಿಸ್ಥಿತಿಯಲ್ಲಿ ತ್ವರಿತ ಪ್ರಗತಿಯನ್ನು ಕಾಣಬೇಕಾದರೆ ಮನೆಯಲ್ಲಿ ಕ್ರಾಸ್ಸುಲಾ ಸಸ್ಯ ಅಥವಾ ಜೇಡ್ ಮರವನ್ನು ನೆಡಿರಿ. ಮನೆಯ ಪ್ರವೇಶದ್ವಾರದ ಬಲಭಾಗದಲ್ಲಿ ಇಟ್ಟರೆ, ಕೆಲವೇ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ.

ಬಾಳೆಗಿಡ: ಮನೆಯಲ್ಲಿ ಬಾಳೆಗಿಡವನ್ನು ನೆಟ್ಟರೆ ತುಂಬಾ ಮಂಗಳಕರ ಎಂಬುದು ಹಿಂದೂ ಧರ್ಮದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಬಾಳೆ ಗಿಡ ನೆಟ್ಟ ಮನೆಯಲ್ಲಿ ಅದೃಷ್ಟ ತಾನಾಗಿಯೇ ಉದ್ಭವಿಸುತ್ತದೆ ಎಂಬ ಮಾತಿದೆ. ಭಗವಾನ್ ವಿಷ್ಣು ಮತ್ತು ಮಹಾಲಕ್ಷ್ಮೀ ಅನುಗ್ರಹದಿಂದ ಮನೆಯಲ್ಲಿ ಯಾವಾಗಲೂ ಸಂತೋಷ, ಸಮೃದ್ಧಿ ಇರುತ್ತದೆ.

ಶಮಿ ವೃಕ್ಷ: ಶನಿಯ ಆಶೀರ್ವಾದ ಪಡೆಯಲು ಮನೆಯಲ್ಲಿ ಶಮಿ ಗಿಡ ನೆಡುವುದು ಅಥವಾ ಶಮಿ ವೃಕ್ಷವನ್ನು ಪೂಜಿಸುವುದು, ಅದಕ್ಕೆ ನೀರನ್ನು ಅರ್ಪಿಸುವುದು ತುಂಬಾ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೊತೆಗೆ ಅಪಾರ ಸಂಪತ್ತು ಮತ್ತು ಪ್ರಗತಿ ಇರುತ್ತದೆ ಎಂದು ಹೇಳಲಾಗುತ್ತದೆ.

ಪಾರಿಜಾತ ವೃಕ್ಷ: ಹಿಂದೂ ಧರ್ಮಗ್ರಂಥಗಳಲ್ಲಿ ಪಾರಿಜಾತ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಪಾರಿಜಾತ ಹೂವುಗಳು ವಿಷ್ಣುವಿಗೆ ಬಹಳ ಪ್ರಿಯವಾಗಿದ್ದು, ಇದು ಮನೆಯಲ್ಲಿ ಸದಾ ಸುಖ, ನೆಮ್ಮದಿ ಇರುವಂತೆ ನೋಡಿಕೊಳ್ಳುತ್ತದೆ.

ಆಲದ ಮರ: ಆಲದ ಮರವನ್ನು ಪೂಜಿಸುವುದರಿಂದ ಅನೇಕ ದೇವತೆಗಳ ಆಶೀರ್ವಾದ ಸಿಗುತ್ತದೆ. ಬ್ರಹ್ಮ, ವಿಷ್ಣು, ಶಿವ ಮತ್ತು ಮಾತೆ ಲಕ್ಷ್ಮಿ ಆಲದ ಮರದಲ್ಲಿ ನೆಲೆಸಿರುತ್ತಾರೆ ಎಂಬುದು ನಂಬಿಕೆ. ಈ ಹಿನ್ನೆಲೆಯಲ್ಲಿ  ಈ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ದೀಪವನ್ನು ಬೆಳಗಿಸುವ ಮೂಲಕ ಪೂಜೆ ಮಾಡಿದರೆ ಒಳಿತಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link