ಪದೇ ಪದೇ ಈ ವಸ್ತುಗಳು ಚೆಲ್ಲುತ್ತಿದ್ದರೆ ಅದು ಸಂಕಷ್ಟ ಆಗಮನದ ಸಂಕೇತ
ಯಾವುದೇ ಪೂಜಾ ಸಾಮಗ್ರಿಗಳು ಅಥವಾ ಪೂಜೆಯ ಸಂಪೂರ್ಣ ತಟ್ಟೆಯು ನಿಮ್ಮ ಕೈಯಿಂದ ಪದೇ ಪದೇ ಬೀಳುತ್ತಿದ್ದರೆ, ಅದನ್ನು ಶುಭ ಸಂಕೇತ ಎಂದು ಕರೆಯಲಾಗುವುದಿಲ್ಲ. ಶಕುನ ಶಾಸ್ತ್ರದ ಪ್ರಕಾರ ಹೀಗಾದಾಗ ದೇವರ ಕೃಪೆ ನಿಮ್ಮ ಮೇಲಿಲ್ಲ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದಲ್ಲಿ ಉಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ದೋಷ ಮತ್ತು ಕುಂಡಲಿ ದೋಷಗಳಿಗೆ ಉಪ್ಪಿನ ಪರಿಹಾರಗಳನ್ನು ಸಹ ಸೂಚಿಸಲಾಗಿದೆ. ಉಪ್ಪು ಪದೇ ಪದೇ ಕೈ ತಪ್ಪಿ ಬೀಳುತ್ತಿದ್ದರೆ, ಅದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಂಕೇತವಾಗಿದೆ.
ಎಣ್ಣೆ ಶನಿಗೆ ಸಂಬಂಧಿಸಿದ ವಸ್ತುವಾಗಿದೆ, ನಿಮ್ಮ ಕೈಯಿಂದ ಎಣ್ಣೆಯು ಮತ್ತೆ ಮತ್ತೆ ಬೀಳುತ್ತಿದ್ದರೆ ಅದು ಒಳ್ಳೆಯ ಸಂಕೆತವಲ್ಲ. ಇದು ಜೀವನದಲ್ಲಿ ಬರುವ ಕೆಲವು ದೊಡ್ಡ ಸಮಸ್ಯೆಗಳ ಸೂಚನೆಯಾಗಿರುತ್ತದೆ.
ಆಹಾರದ ಪೋಲು ಮಾಡುವುದೆಂದರೆ ತಾಯಿ ಅನ್ನಪೂರ್ಣ ಮತ್ತು ಲಕ್ಷ್ಮೀ ಯನ್ನು ಕೆರಳಿಸುತ್ತದೆ. ಅನ್ನ ಬಡಿಸುವಾಗ ಪದೇ ಪದೇ ವ್ಯಕ್ತಿಯ ಕೈಯಿಂದ ಆಹಾರ ಬಿದ್ದರೆ, ಅದು ಬಡತನ ಎದುರಾಗುವ ಸಂಕೇತವಾಗಿದೆ.
ಹಸುವಿನ ಹಾಲನ್ನು ಮಕರಂದ ಎಂದು ಪರಿಗಣಿಸಲಾಗುತ್ತದೆ. ಪದೇ ಪದೇ ಯಾರ ಕೈಯಿಂದಲಾದರೂ ಹಾಲು ಚೆಲ್ಲುತ್ತಿದ್ದರೆ ಅದು ಒಳ್ಳೆಯ ಶಕುನವಲ್ಲ. ಇದಲ್ಲದೆ, . ಹಾಲನ್ನು ಮತ್ತೆ ಮತ್ತೆ ಕುದಿಸುವುದು ಕೂಡಾ ಒಳ್ಳೆಯದಲ್ಲ ಎನ್ನಲಾಗುತ್ತದೆ.
( ಸೂಚನೆ : ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)