ಈ ಎರಡು ರಾಶಿಯವರು ಮದುವೆಯಾದರೆ ಸಾಕ್ಷಾತ್ ಶಿವ-ಪಾರ್ವತಿಯೇ ವಿವಾಹವಾದಂತೆ! ಭೂಲೋಕದಲ್ಲಿ ದೈವಿಕ ಪ್ರೀತಿಯೇ ಸಾಕಾರಗೊಂಡ ಲೆಕ್ಕ
ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಭೂಲೋಕದಲ್ಲಿ ನಡೆಯುವ ಪ್ರತಿಯೊಂದು ಮದುವೆಯನ್ನೂ ಸಹ ದೇವರು ಮೊದಲೇ ನಿರ್ಣಯಿಸಿರುತ್ತಾನೆ ಎಂಬುದು ಅನೇಕ ನಂಬಿಕೆ.
ಹಿಂದೂ ಧರ್ಮದಲ್ಲಿ ಮದುವೆ ಸಂದರ್ಭದಲ್ಲಿ ಜಾತಕ ನೋಡುವ ಪದ್ಧತಿ ಇದೆ. ಜೋಡಿಗಳ ಜಾತಕ ಕೂಡಿದರೆ ಮಾತ್ರ ಮದುವೆ ಮಾತುಕತೆ ಮುಂದುವರೆಸಲಾಗುತ್ತದೆ. ಒಂದು ವೇಳೆ ದೋಷಗಳು ಕಂಡುಬಂದರೆ ಅದಕ್ಕೆ ತಕ್ಕದಾದ ಪರಿಹಾರಗಳನ್ನು ಮಾಡಿ, ಮದುವೆ ಕಾರ್ಯ ನಡೆಸಲಾಗುತ್ತದೆ.
ಶಾಸ್ತ್ರಗಳ ಪ್ರಕಾರ ಕೆಲವೊಂದು ರಾಶಿಗಳು ವಿವಾಹವಾದರೆ ಸಾಕ್ಷಾತ್ ಶಿವ-ಪಾರ್ವತಿಯೇ ವಿವಾಹವಾದ ಲೆಕ್ಕ ಎಂದು ಹೇಳಲಾಗುತ್ತದೆ. ಅಂತಹ ಅಪೂರ್ವ ಗುಣಲಕ್ಷಣಗಳನ್ನು ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ:
ಮೇಷ ಮತ್ತು ವೃಶ್ಚಿಕ: ಈ ಎರಡು ರಾಶಿಗಳು ವಿವಾಹವಾದರೆ ಶಿವ ಪಾರ್ವತಿ ಮದುವೆಯಾದಂತೆ ಎಂದು ಜೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕೆ ಕಾರಣ ಶಿವನ ಉಗ್ರ ಶಕ್ತಿ (ಮೇಷ) ಮತ್ತು ಪಾರ್ವತಿಯ ಶಾಂತ ಗುಣ (ವೃಶ್ಚಿಕ). ಈ ಎರಡು ಭಾವನೆಗಳು ಒಂದಾದರೆ ಒಳ್ಳೆಯದು. ಎಷ್ಟೇ ಉಗ್ರ ಸ್ವಭಾವವಿದ್ದರೂ ಅದನ್ನು ಶಾಂತಗುಣದ ಮೂಲಕ ತಣ್ಣಗಾಗಿಸಬಹುದು ಎಂಬುದು ಇದರ ಅರ್ಥ.
ವೃಷಭ ಮತ್ತು ಕರ್ಕಾಟಕ: ಪಾರ್ವತಿಯ ತಾಳ್ಮೆ ಮತ್ತು ಶಿವನ ಸ್ಥಿರತೆಯನ್ನು ಪ್ರತಿಬಿಂಬಿಸುವ ರಾಶಿಗಳಿವು. ವೃಷಭ ರಾಶಿಯು ವಿಶ್ವಾಸವನ್ನು ಸೂಚಿಸಿದರೆ, ಕರ್ಕಾಟಕ ಭಾವನಾತ್ಮಕ ಅಂಶವನ್ನು ಬಿಂಬಿಸುತ್ತದೆ. ಇವೆರಡು ರಾಶಿಗಳು ಒಂದಾದರೆ ನಿರಂತರ ಪ್ರೀತಿ ಮತ್ತು ತಿಳುವಳಿಕೆಗೆ ಕೊರತೆಯೇ ಇರುವುದಿಲ್ಲ.
ಮಿಥುನ ಮತ್ತು ಧನು ರಾಶಿ: ಈ ಎರಡು ರಾಶಿಗಳು ಶಿವನ ನಿಶ್ಚಲತೆ ಮತ್ತು ಪಾರ್ವತಿಯ ಶಾಂತತೆಯನ್ನು ತೊಡಗಿಸಿಕೊಂಡಿರುತ್ತದೆ. ಈ ಎರಡು ರಾಶಿಗಳ ಬಂಧವು ಕ್ರಿಯಾತ್ಮಕ ಮತ್ತು ಜ್ಞಾನದಾಯಕವಾಗಿರುತ್ತದೆ.
ಕನ್ಯಾ ರಾಶಿ ಮತ್ತು ಮಕರ: ಈ ಎರಡು ರಾಶಿಗಳು ದೈವಿಕ ಜೋಡಿಯ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಭಾಗವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಇವು ಜವಾಬ್ದಾರಿ ಮತ್ತು ಮಹತ್ವಾಕಾಂಕ್ಷೆಯ ಮೇಲೆ ಗಮನವನ್ನು ತರುತ್ತವೆ. ಶಿವ ಮತ್ತು ಪಾರ್ವತಿಯ ನಡುವಿನ ಸ್ಥಿರ ಮತ್ತು ಉದ್ದೇಶಪೂರ್ವಕ ಸಂಪರ್ಕದಂತೆಯೇ ಈ ಎರಡು ರಾಶಿಯವರು ಬಾಳುತ್ತಾರೆ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.