iPhone 15 ಖರೀದಿಸುವ ಮುನ್ನ ಈ ವಿಷಯ ನೆನಪಿನಲ್ಲಿಡಿ, ಇಲ್ಲದಿದ್ರೆ ನಿಮಗೆ ದೊಡ್ಡ ಲಾಸ್ ಗ್ಯಾರಂಟಿ!

Sun, 17 Sep 2023-10:08 pm,

ನೀವು ಐಫೋನ್ 15 ಖರೀದಿಸುತ್ತಿದ್ದರೆ ಅದರ ಚಾರ್ಜರ್ ಅನ್ನು ಕಂಪನಿಯಿಂದಲೇ ಖರೀದಿಸಬೇಕು. ಇಲ್ಲದಿದ್ದರೆ ನಕಲಿ ಚಾರ್ಜರ್ ನಿಮ್ಮ ಐಫೋನ್‍ಅನ್ನು ಹಾನಿಗೊಳಿಸುತ್ತದೆ.

ಐಫೋನ್ 15ರ ಹಿಂಭಾಗದ ಫಲಕವು ಗಾಜಿನಿಂದ ಮಾಡಲ್ಪಟ್ಟಿದೆ. ಇದು ನೆಲದ ಮೇಲೆ ಬಿದ್ದರೆ ಛಿದ್ರವಾಗಬಹುದು. ಹೀಗಾಗಿ ನೀವು ಇದಕ್ಕೆ ಬಲವಾದ ಸಿಲಿಕೋನ್ ಕೇಸ್ ಖರೀದಿಸಬೇಕು. ಇದರಿಂದ ಫೋನ್‍ಗೆ ಸಂಪೂರ್ಣ ರಕ್ಷಣೆ ದೊರೆಯುತ್ತದೆ.

ನಿಮ್ಮ ಫೋನ್ ಅನ್ನು ದೀರ್ಘಕಾಲದವರೆಗೆ ಹಾನಿಯಾಗದಂತೆ ಇರಿಸಲು ಬಯಸಿದ್ರೆ, ಅದರ ಕ್ಯಾಮೆರಾ ಲೆನ್ಸ್‌ಗೆ ಲೆನ್ಸ್ ಪ್ರೊಟೆಕ್ಟರ್ ಅನ್ನು ಕಂಪನಿಯಿಂದಲೇ ಪಡೆಯಬೇಕು. ಇದು ಕ್ಯಾಮೆರಾ ಲೆನ್ಸ್‌ನಲ್ಲಿ ಗೀರುಗಳನ್ನು ತಡೆಯುತ್ತದೆ ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.

ಐಫೋನ್ 15ರ ಕ್ಯಾಮೆರಾ ತುಂಬಾ ಶಕ್ತಿಯುತವಾಗಿದೆ. ನೀವು ಫೋಟೋಗ್ರಫಿಯನ್ನು ಇಷ್ಟಪಡುತ್ತಿದ್ದರೆ ಫೋನ್ ಖರೀದಿಸುವಾಗ ನೀವು ಕಂಪನಿಯ ಟೆಂಪರ್ಡ್ ಗ್ಲಾಸ್ ಬಳಸಬೇಕು. ಫೋಟೊಗ್ರಫಿ ಮಾಡುವಾಗ ಫೋನ್ ಬಿದ್ದರೆ ಅದು ಡಿಸ್‌ಪ್ಲೇಗೆ ಹಾನಿ ಮಾಡುತ್ತದೆ.ಇದನ್ನು ಗಮನದಲ್ಲಿಟ್ಟುಕೊಂಡು ನೀವು ಯಾವಾಗಲೂ ಆಪಲ್‌ನ ಟೆಂಪರ್ಡ್ ಗ್ಲಾಸ್ ಅನ್ನೇ ಬಳಸಬೇಕು.

ನೀವು iPhone 15 ಖರೀದಿಸಬೇಕಾದ್ರೆ ಸ್ಟೋರೇಜ್ ಬಗ್ಗೆ ಹೆಚ್ಚು ಗಮನಹರಿಸಬೇಕು. ನೀವು ಹೆಚ್ಚು ಸ್ಟೋರೇಜ್ ಹೊಂದಿರುವ 128 GB ಮತ್ತು 256 GB ರೂಪಾಂತರವನ್ನೇ ಖರೀದಿಸಬೇಕು. ದೀರ್ಘಕಾಲದವರೆಗೆ ಐಫೋನ್ ಬಳಸಲು ಮತ್ತು ಸಾಕಷ್ಟು ಫೋಟೋಗ್ರಫಿ, ವಿಡಿಯೋ ತೆಗೆಯಲು ಇದು ನೆರವಾಗುತ್ತದೆ. ಹೀಗಾಗಿ ಕಡಿಮೆ ಸ್ಟೋರೇಜ್ ಹೊಂದಿರುವ ಫೋನ್ ಖರೀದಿಸುವುದು ನಿಮಗೆ ಸೂಕ್ತವಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link