Surya Grahan: ಸೂರ್ಯ ಗ್ರಹಣದಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಹೊಳೆಯುತ್ತೇ ಅದೃಷ್ಟ
2023ರಲ್ಲಿ ಎರಡು ಸೂರ್ಯಗ್ರಹಣಗಳಿವೆ. ಅದರಲ್ಲಿ ಮೊದಲನೇ ಸೂರ್ಯ ಗ್ರಹಣ ಈಗಾಗಲೇ ಮುಗಿದೆ. ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣವು 2023ರ ಅಕ್ಟೋಬರ್ 14ರಂದು ರಾತ್ರಿ 8.34 ಕ್ಕೆ ಪ್ರಾರಂಭವಾಗಿ 2.25 ಕ್ಕೆ ಕೊನೆಗೊಳ್ಳಲಿದೆ. ಈ ಸೂರ್ಯಗ್ರಹಣ ಭರತದಲ್ಲಿ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಸೂರ್ಯ ಗ್ರಹಣದ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅವುಗಳೆಂದರೆ...
ಸೂರ್ಯಗ್ರಹಣದ ನಂತರ ಸ್ನಾನ ಮಾಡಿ ಶುಭ್ರವಾದ ಬಗ್ಗೆ ಧರಿಸಿ ಧ್ಯಾನ ಮಾಡಿ. ಬಳಿಕ, ಸೂರ್ಯ ದೇವರ ಪೂಜೆ ಮಾಡಿ, ಸೂರ್ಯ ಮಂತ್ರ ಪಠಿಸುವುದು ಒಳ್ಳೆಯದು. ಅದರಲ್ಲೂ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಇದರಿಂದ ನೀವು ನಿಮ್ಮ ವೃತ್ತಿ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ.
ಸೂರ್ಯ ದೇವರ ಪೂಜೆ ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದ ಬಳಿಕ ಶ್ರೀ ಸೂರ್ಯ ಅಷ್ಟಕಂ ಪಠಿಸಿ. ಇದರಿಂದ ನಿಮ್ಮ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ. ಗ್ರಹ ದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಸೂರ್ಯ ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ, ಸೂರ್ಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಗೋಧಿ, ಬೆಲ್ಲ, ಕೆಂಪು ಬಟ್ಟೆ ಹೀಗೆ ನಿಮ್ಮ ಕೈಲಾದದ್ದನ್ನು ಅಗತ್ಯವಿದ್ದವರಿಗೆ ದಾನ ಮಾಡಿ. ಇದರಿಂದ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
ಸ್ನಾನ, ಮಂತ್ರ ಪಠಣೆ, ದಾನದ ಬಳಿಕ ಸೂರ್ಯನಿಗೆ ಮೀಸಲಾದ ಸೂರ್ಯಕಾಂತಿ ಸಸ್ಯವನ್ನು ನೆಡಿ. ಇದರಿಂದ ಸೂರ್ಯ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.