Food: ಊಟವಾದ ಬಳಿಕ ಈ ರೀತಿ ಮಾಡಿದ್ರೆ ಆರೋಗ್ಯಕ್ಕೆ ಕಂಟಕ ಖಂಡಿತ!

Fri, 16 Sep 2022-4:52 pm,

ಸಿಗರೇಟ್ ಸೇದಬಾರದು: ಕೆಲ ಜನರಿಗೆ ಊಟವಾದ ತಕ್ಷಣ ಸಿಗರೇಟ್ ಸೇದುವ ಚಟವಿರುತ್ತದೆ. ಆದರೆ ಹೀಗೆ ಮಾಡಿದರೆ, ರಕ್ತದಲ್ಲಿ ಆಮ್ಲಜನಕದ ಜತೆ ಸಿಗರೇಟಿನಲ್ಲಿರುವ ನಿಕೋಟಿನ್ ಅಂಶ ಸೇರಿಕೊಳ್ಳುತ್ತದೆ. ಇದು ಕಾನ್ಸರ್ ರೋಗಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ನಿಮಗೆ ತಿಳಿದಿರಲಿ ಸಿಗರೇಟಿನಲ್ಲಿ ಸುಮಾರು 60 ರೀತಿಯ ಕ್ಯಾನ್ಸರ್ ಕಾರಕ ಅಂಶಗಳಿವೆ.

ಇನ್ನೂ ಕೆಲವರಿಗೆ ಊಟವಾದ ಬಳಿಕ ಹಣ್ಣುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಈ ತಪ್ಪನ್ನು ಇನ್ನುಮುಂದೆ ಮಾಡಲೇಬೇಡಿ. ಊಟದ ಜೊತೆ ಹಣ್ಣುಗಳನ್ನು ತಿಂದರೆ, ಪೌಷ್ಟಿಕಾಂಶಗಳು ದೇಹಕ್ಕೆ ಸೇರುವುದು ಕಷ್ಟವಾಗುತ್ತದೆ.

ಕೆಲವು ಪ್ರದೇಶಗಳಲ್ಲಿ ಊಟವಾದ ಬಳಿಕ ಟೀ-ಕಾಫಿ ಸೇವನೆ ಮಾಡುವುದು ರೂಢಿಯಾಗಿರುತ್ತದೆ. ಕಾಫಿಯಲ್ಲಿರುವ ಟ್ಯಾನಿನ್ ಎಂಬ ರಾಸಾಯನಿಕ ಅಂಶ ನಾವು ಸೇವಿಸಿರುವ ಆಹಾರದ ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ. ಹೀಗಾಗಿ ಕಾಫಿ=ಟೀ ಸೇವಿಸಲು ಊಟವಾದ ಬಳಿಕ ಗಂಟೆ ಸಮಯವನ್ನಾದ್ರೂ ಕೊಡಿ.

ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಹೇಳುವುದುಂಟು ಊಟವಾದ ಬಳಿಕ ಸ್ನಾನ ಮಾಡಬಾರದು ಎಂದು. ಹೌದು ಇದಕ್ಕೆ ಬಲವಾದ ಕಾರಣವಿದೆ. ನಮ್ಮ ದೇಹದಲ್ಲಿನ ಜೀರ್ಣಕ್ರಿಯೆ ಮೇಲೆ ಈ ಪ್ರಕ್ರಿಯೆಯು ಅತೀವ ಪ್ರಭಾವ ಉಂಟು ಮಾಡುತ್ತದೆ.

ಊಟ ಆದ ಕೂಡಲೇ ವಾಕಿಂಗ್ ಹೋಗೋದು ಸಹ ಕೆಟ್ಟ ಅಭ್ಯಾಸ. ಈ ರೀತಿ ಮಾಡಿದರೆ ಅಜೀರ್ಣ ಆಗೋದು ಖಂಡಿತ. ಊಟವಾಗಿ 30 ನಿಮಿಷದ ಬಳಿಕ ವಾಕ್ ಗೆ ಹೋದರೆ ಒಳ್ಳೆಯದು.

ಕೆಲವರಿಗೆ ಊಟವಾದ ತಕ್ಷಣ ಮಲಗುವ ಅಭ್ಯಾಸವಿರುತ್ತದೆ, ಹೀಗೆ ಮಾಡಿದರೆ ಜೀರ್ಣಕಾರಿ ರಸಗಳು ಅನ್ನನಾಳದೊಳಗೆ ವಾಪಾಸ್ ಹರಿದು, ಎದೆಯುರಿಯಂತಹ ಸಮಸ್ಯೆ ಕಂಡುಬರಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link