Tulsi Water Benefits: ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದರೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನ
ತುಳಸಿ: ಆಯುರ್ವೇದದಲ್ಲಿ ಪ್ರಮುಖ ಔಷಧೀಯ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ತುಳಸಿ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ತುಳಸಿ ದಳ: ಸಾಮಾನ್ಯ ಕೆಮ್ಮು, ನೆಗಡಿ ಸಂದರ್ಭದಲ್ಲಿ ಒಂದೆರಡು ತುಳಸಿ ದಳವನ್ನು ಜಗಿದು ತಿನ್ನುವುದರಿಂದ ಶೀಘ್ರದಲ್ಲೇ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ತುಳಸಿ ನೀರು: ಆಯುರ್ವೇದ ತಜ್ಞರ ಪ್ರಕಾರ, ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ನಿತ್ಯ ತುಳಸಿ ನೀರಿನ ಸೇವನೆಯಿಂದ ಆರೋಗ್ಯಕ್ಕೆ ಸಿಗುವ 5 ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯೋಣ...
ರೋಗನಿರೋಧಕ ಶಕ್ತಿ: ಮುಂಜಾನೆ ತುಳಸಿ ನೀರನ್ನು ಕುಡಿಯುವುದರಿಂದ ಇದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಶೀತ ಮತ್ತು ಕೆಮ್ಮು: ಚಳಿಗಾಲದಲ್ಲಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಶೀತಕ್ಕೆ ಸಂಬಂಧಿಸಿದ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ, ತುಳಸಿ ನೀರಿನ ಸೇವನೆಯು ನಿಮ್ಮನ್ನು ಶೀತ, ಕೆಮ್ಮಿನಿಂದ ದೂರ ಇರಿಸುತ್ತದೆ.
ಅಸಿಡಿಟಿ: ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆ ಹೊಂದಿರುವವರಿಗೆ ಹಾಗೂ ಉದರ ಸಂಬಂಧಿತ ಸಾಮಾನ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತುಳಸಿ ನೀರು ದಿವ್ಯೌಷಧವಾಗಿದೆ.
ಚರ್ಮದ ಸಮಸ್ಯೆಗಳು: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಇದು ನಿಮ್ಮನ್ನು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಅದರಲ್ಲೂ, ಮುಖದ ಮೇಲಿನ ಮೊಡವೆಗಳನ್ನು ನಿವಾರಿಸುವಲ್ಲಿ ಇದು ಅತ್ಯುತ್ತಮ ಟಾನಿಕ್ ನಂತೆ ಕಾರ್ಯನಿರ್ವಹಿಸುತ್ತದೆ.
ಮಧುಮೆಹಿಗಳಿಗೆ ಪ್ರಯೋಜನಕಾರಿ: ಪ್ರತಿದಿನ ಮುಂಜಾನೆ ತುಳಸಿ ನೀರನ್ನು ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಮಂಡಿ ನೋವು: ನಿತ್ಯ ಮುಂಜಾನೆ ತುಳಸಿ ನೀರನ್ನು ಕುಡಿಯುವುದರಿಂದ ಇದು ಮೊಣಕಾಲಿನ ನೋವನ್ನು ಕೆಲವೇ ದಿನಗಳಲ್ಲಿ ಉಪಶಮನ ಮಾಡುತ್ತದೆ.
ಒತ್ತಡ ನಿವಾರಣೆ: ಆಯುರ್ವೇದ ತಜ್ಞರ ಪ್ರಕಾರ, ಪ್ರತಿ ದಿನ ತುಳಸಿ ನೀರನ್ನು ಕುಡಿಯುವುದರಿಂದ ನೀವು ಒತ್ತಡವನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.