ಕರಿಮೆಣಸನ್ನು ಹೀಗೆ ತಿಂದರೆ ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ ಹೈ ಬಿಪಿ!
ಕರಿಮೆಣಸಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಅಂಶಗಳಿವೆ.. ಇವು ದೇಹದ ಜೀವಕೋಶಗಳನ್ನು ರಕ್ಷಿಸುತ್ತವೆ.. ಅಲ್ಲದೇ ಈ ಕರಿಮೆಣಸಿನ ಸೇವನೆ ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಿ ಹೈ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ..
ಅಧಿಕ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಸಾಮಾನ್ಯವಾಗಿ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಗಳಿಂದ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಕರಿಮೆಣಸು ರಕ್ತದೊತ್ತಡವನ್ನು ನಿಯಂತ್ರಿಸಲು ಸುರಕ್ಷಿತ ಮತ್ತು ನೈಸರ್ಗಿಕ ಮಾರ್ಗವಾಗಿದೆ..
ಕರಿಮೆಣಸಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಿ.. ಸೋಡಿಯಂ ಸಮತೋಲನವನ್ನು ಕಾಪಾಡುತ್ತದೆ.. ಇದನ್ನು ಪ್ರತಿದಿನ ಬಳಸಿದರೆ, ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ..
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ, ಒಂದು ಲೋಟ ಬೆಚ್ಚಗಿನ ನೀರಿನಲ್ಲಿ 1 ರಿಂದ 2 ಪುಡಿಮಾಡಿದ ಕರಿಮೆಣಸುಗಳನ್ನು ಮಿಶ್ರಣ ಮಾಡಿ. ಆ ನೀರನ್ನು ಕುಡಿಯಿರಿ..
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಮೆಣಸು ಮತ್ತು ಬಿಸಿನೀರು ಸೇವಿಸುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.