ಮಾವಿನ ಹಣ್ಣನ್ನು ಹೀಗೆ ತಿಂದರೆ ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸಿಕೊಳ್ಳಬಹುದು! ಸೀಸನ್ ಮುಗಿಯೋದ್ರಲ್ಲಿ ಸ್ಲಿಮ್ ಆಗಿ
ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಆಹಾರದ ಬದಲಾವಣೆ ಮತ್ತು ವ್ಯಾಯಾಮ. ದೈನಂದಿನ ಆಹಾರದಲ್ಲಿ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇರಿಸುವುದು ಉತ್ತಮ.
ಅಂದಹಾಗೆ ಮಾವಿನ ಹಣ್ಣು ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆಯೇ.. ಏಕೆಂದರೆ ಮಾವಿನ ಹಣ್ಣನ್ನು ಸರಿಯಾದ ವಿಧಾನದಲ್ಲಿ ತಿಂದರೆ ಒಂದೇ ತಿಂಗಳಲ್ಲಿ ಕೆಜಿಗಟ್ಟಲೆ ತೂಕ ಇಳಿಕೆ ಮಾಡಬಹುದು.
ಎಲ್ಲಾ ಹಣ್ಣುಗಳು ಫೈಬರ್ ಹೊಂದಿರುತ್ತವೆ ಮತ್ತು ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸುವುದರಿಂದ ಅನೇಕ ಅಧ್ಯಯನಗಳ ಪ್ರಕಾರ ತೂಕ ಇಳಿಕೆ ಮಾಡಬಹುದು. ಮಾವು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಫೋಲೇಟ್, ವಿಟಮಿನ್ ಎ, ಸಿ, ಇ, ಬಿ5, ಕೆ ಮತ್ತು ಬಿ6, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಸೇರಿದಂತೆ ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಮಾವಿನ ಹಣ್ಣುಗಳು ಇತರ ಅನೇಕ ಹಣ್ಣುಗಳಿಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ ಎಂಬುದು ನಿಜ. ಆದರೆ ಮಾವಿನಹಣ್ಣು ದೇಹಕ್ಕೆ ಕೊಬ್ಬನ್ನು ನೀಡುತ್ತದೆ ಎಂದು ಇದರ ಅರ್ಥವಲ್ಲ. ಮಾವಿನ ಹಣ್ಣನ್ನು ಸರಿಯಾದ ವಿಧಾನದಲ್ಲಿ ತಿಂದರೆ ಇಷ್ಟವಾದ ಈ ಹಣ್ಣು ತೂಕ ಇಳಿಕೆಗೂ ಸಹಾಯ ಮಾಡಬಲ್ಲದು.
ಮಾವಿನಹಣ್ಣಿನಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಮತ್ತು ಫೈಟೊಕೆಮಿಕಲ್‌ಗಳು ಕೊಬ್ಬಿನ ಕೋಶಗಳು ಮತ್ತು ಕೊಬ್ಬು-ಸಂಬಂಧಿತ ಜೀನ್’ಗಳನ್ನು ನಿಗ್ರಹಿಸುತ್ತದೆ, ಈ ಮೂಲಕ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ.
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಮಾವಿನ ಹಣ್ಣನ್ನು ಮಿತವಾಗಿ ತಿನ್ನುವುದರಿಂದ ದೇಹದ ಕೊಬ್ಬು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಮಾವಿನಹಣ್ಣಿನ ಅತಿಯಾದ ಸೇವನೆಯು ತೂಕ ಹೆಚ್ಚಳಕ್ಕೆ ದಾರಿಯಾಗಬಹುದು ಎಚ್ಚರವಿರಲಿ. ಅಂದರೆ ದಿನಕ್ಕೆ ಒಂದು ಮಾವಿನಹಣ್ಣು ತಿಂದರೆ ತೂಕ ಇಳಿಕೆಯಾಗುತ್ತದೆ.
ಮಾವಿನ ಹಣ್ಣನ್ನು ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದ ಜೊತೆಗೆ ತಿನ್ನಬೇಕು. ಇದು ದೇಹಕ್ಕೆ ಅನಗತ್ಯ ಗ್ಲೂಕೋಸ್ ಪೂರೈಕೆಗೆ ಕಾರಣವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.