ಈ ಪ್ರಾಣಿಗೆ ಪ್ರತಿದಿನ ಅನ್ನ ನೀಡಿದರೆ ರಾಜರಂತ ಬದುಕಿನ ಜೊತೆ ಸಂತೋಷ-ಐಶ್ವರ್ಯ ನೀಡಿ ಸದಾ ಹರಸುತ್ತಾನೆ ಶನಿದೇವ
ಒಳ್ಳೆಯ ಕೆಲಸ ಮಾಡುವ, ನ್ಯಾಯವನ್ನು ಪ್ರೀತಿಸುವ ಮತ್ತು ಬಡವರ ಸೇವೆ ಮಾಡುವ ಜನರ ಮೇಲೆ ಶನಿದೇವನ ಅನುಗ್ರಹ ಯಾವಾಗಲೂ ಇರುತ್ತದೆ. ಒಂದು ವೇಳೆ ಶನಿ ಕೃಪೆ ವ್ಯಕ್ತಿಯ ಮೇಲೆ ಬಿತ್ತು ಎಂದಾದರೆ, ಆತ ಬಡವನಾಗಿದ್ದರೂ ರಾಜನಂತಾಗಲು ಕ್ಷಣ ಬೇಕಿಲ್ಲ.
ಇನ್ನು ಶನಿದೇವರಿಗೆ ನಾಯಿ ಎಂದರೆ ಬಲುಪ್ರಿಯ. ಭೈರವನ (ನಾಯಿ) ಸೇವೆ ಮಾಡುವ ಜನರ ಮೇಲೆ ಶನಿ ದೇವನು ಎಂದೆಂದೂ ತನ್ನ ಆಶೀರ್ವಾದವನ್ನು ಇರಿಸುತ್ತಾನೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಜನರು ಮನೆಯಲ್ಲಿ ನಾಯಿಯನ್ನು ಅಂದರೆ ಭೈರವನನ್ನು ಸಾಕುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೆ ಭೈರವನ ಜೊತೆ ವಿಶೇಷ ಸಂಬಂಧವಿದೆ.
ಯಾರು ಪ್ರತಿದಿನ ಕಪ್ಪು ನಾಯಿಗೆ ಆಹಾರ ನೀಡುತ್ತಾರೆಯೋ.. ಯಾರು ಎಂದೂ ಸಹ ನಾಯಿಗೆ ಹಿಂಸೆ ಮಾಡುವುದಿಲ್ಲವೋ.. ಅವರಿಗೆ ಶನಿದೇವನ ಬೆಂಬಲವಿರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಜನರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಹಗಲಿರುಳು ಪ್ರಗತಿ ಸಾಧಿಸುತ್ತಲೇ ಇರುತ್ತಾರೆ.
ಇನ್ನು ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕುವುದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶ ಕಡಿಮೆಯಾಗುತ್ತದೆ. ಕಪ್ಪು ನಾಯಿಯು ಕುಟುಂಬದ ಎಲ್ಲ ಸದಸ್ಯರನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕಪ್ಪು ನಾಯಿ ಶನಿ ಮತ್ತು ಕೇತು ಎರಡೂ ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. )