ಯೂರಿಕ್ ಆಸಿಡ್ ರೋಗಿಗಳಿಗೆ ವಿಷದಂತೆ ಈ ತರಕಾರಿಗಳು! ತಪ್ಪಿಯೂ ತಿನ್ನಬಾರದು !
ಅಣಬೆಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ತರಕಾರಿಯಾಗಿದ್ದರೂ, ಗೌಟ್ ಮತ್ತು ಅಧಿಕ ಯೂರಿಕ್ ಆಸಿಡ್ ರೋಗಿಗಳಿಗೆ ಉಪಯುಕ್ತವಲ್ಲ. ಅಣಬೆ ಸೇವನೆಯಿಂದ ದೇಹದಲ್ಲಿ ಪ್ಯೂರಿನ್ ಮಟ್ಟ ಹೆಚ್ಚುತ್ತದೆ. ಇದು ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ.
ನಿಮ್ಮ ಯೂರಿಕ್ ಆಸಿಡ್ ಮಟ್ಟವು ಹೆಚ್ಚಿದ್ದರೆ ಪಾಲಕ್ ಅನ್ನು ಸಹ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೋಟೀನ್‌ನಿಂದಾಗಿ, ಗೌಟ್ ಸಮಸ್ಯೆಯು ಗಂಭೀರವಾಗಬಹುದು. ಇದು ದೇಹದಲ್ಲಿ ಊತವನ್ನು ಹೆಚ್ಚಿಸುತ್ತದೆ.
ಬ್ರೊಕೊಲಿ ಯೂರಿಕ್ ಆಸಿಡ್ ಮಟ್ಟವನ್ನು ಗಣನೀಯವಾಗಿ ಹೆಚ್ಚು ಮಾಡುತ್ತದೆ. ಬ್ರೊಕೊಲಿಯನ್ನು ತಿನ್ನುವುದರಿಂದ ಪ್ಯೂರಿನ್‌ಗಳನ್ನು ಜೀರ್ಣಿಸಿಕೊಳ್ಳುವಲ್ಲಿ ದೇಹಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ.ಈ ಕಾರಣದಿಂದಾಗಿ,ನೋವು ಮತ್ತು ಊತ ಹೆಚ್ಚಾಗುತ್ತದೆ.
ಬಟಾಣಿ ತಿನ್ನುವುದರಿಂದ ದೇಹದಲ್ಲಿ ಪ್ಯೂರಿನ್ ಮಟ್ಟ ಹೆಚ್ಚುತ್ತದೆ.ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಹೆಚ್ಚಿಸಬಹುದು.
ಹೂಕೋಸು ಸೇವನೆ ಕೂಡಾ ದೇಹದಲ್ಲಿ ಪ್ಯೂರಿನ್ ಮಟ್ಟವನ್ನು ಹೆಚ್ಚಿಸುತ್ತದೆ ಪ್ಯೂರಿನ್ ಕಾರಣದಿಂದಾಗಿ,ಹೆಚ್ಚಿನ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ. )