ಹಳೆಯ 5 ರೂ 10 ರೂ ನಾಣ್ಯಗಳಿದ್ದರೆ ನೀವೂ ಆಗಬಹುದು ಲಕ್ಷಾಧಿಪತಿ..!
ವೆಬ್‌ಸೈಟ್‌ಗಳ ಮೂಲಕ ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜನರು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಇಂತಹ ಹಳೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಳೆಯ ವಸ್ತುಗಳು, Antique ಶ್ರೇಣಿಯಲ್ಲಿ ಬರುವುದರಿಂದ ಇದು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಹೀಗಾಗಿ ಯಾರ ಬಳಿ ಹಳೆಯ ಮತ್ತು ಅಪರೂಪದ ನಾಣ್ಯಗಳಿರುತ್ತವೆಯೋ ಅವರು ಅವುಗಳನ್ನು ಮಾರಾಟ ಮಾಡಿ ಲಕ್ಷಾಂತರ ರುಪಾಯಿಗಳನ್ನು ಸಂಪಾದಿಸಬಹುದು.
5 ಮತ್ತು 10 ರೂ. ನಾಣ್ಯಗಳಲ್ಲಿ ವೈಷ್ಣೋದೇವಿಯ ಚಿತ್ರವಿದ್ದರೆ, ಆ ನಾಣ್ಯಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಈ ನಾನ್ಯಗಳನ್ನು 2002ರಲ್ಲಿ ಮುದ್ರಿಸಲಾಗಿತ್ತು. ಈಗ ನಾಣ್ಯಗಳಿಗೆ ವಿಪರೀತ ಬೇಡಿಕೆಯಿದೆ. ವೈಷ್ಣೋ ದೇವಿಗೆ ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ಸ್ಥಾನ ಇರುವುದರಿಂದ, ಅಂತಹ ನಾಣ್ಯಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಖರೀದಿಸಲಾಗುತ್ತಿದೆ.
ನೋಟುಗಳಲ್ಲಿರುವ ಸರಣಿ ಸಂಖ್ಯೆಗಳಿಗೂ ಬೇಡಿಕೆಯಿರುತ್ತದೆ. ಈ ಪೈಕಿ, '786' ಸಂಖ್ಯೆ ಮುಸ್ಲಿಂ ಸಮುದಾಯದಲ್ಲಿ ಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾವ ನೋಟಿನಲ್ಲಿ 786 ಸರಣಿ ಸಂಖ್ಯೆ ಇರುತ್ತದೆಯೋ ಆ ನೋಟುಗಳಿಗೂ ಭಾರೀ ಬೇಡಿಕೆಯಿದೆ. ನಿಮ್ಮ ಸರಣಿ ಸಂಖ್ಯೆಯ ನಾಣ್ಯಗಳು ಅಥವಾ ನೋಟುಗಳಿದ್ದರೆ, ಆನ್‌ಲೈನ್ ಹರಾಜಿನ ಮೂಲಕ ಮಾರಾಟ ಮಾಡುವ ಮೂಲಕ ಕಡಿಮೆ ಸಮಯದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು.
ಟ್ರ್ಯಾಕ್ಟರ್‌ನ ಚಿತ್ರವನ್ನು ಹೊಂದಿರುವ 5 ರೂಪಾಯಿಗಳ ನೋಟು ನಿಮ್ಮಲ್ಲಿದ್ದರೆ, ಅದರ ಬದಲಿಗೆ 30 ಸಾವಿರ ರೂಪಾಯಿಗಳನ್ನು ಗಳಿಸಬಹುದು. ಇನ್ನು ಈ ನೋಟಿನ ಸರಣಿ ಸಂಖ್ಯೆ 786 ಇದ್ದರೆ, ಅದಕ್ಕಾಗಿ ದೊಡ್ಡ ಬೆಲೆಯನ್ನು ಪಡೆಯಬಹುದು. ಇದಕ್ಕಾಗಿ ನೀವು ಬೇರೆ ಬೇರೆ ಸೈಟ್‌ಗಳಿಗೆ ಸರ್ಚ್ ಮಾಡಬೇಕಾಗುತ್ತದೆ.
Coinbazzar.com ಹೆಸರಿನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ನಾಣ್ಯಗಳು ಅಥವಾ ನೋಟುಗಳ ಬೆಲೆಯನ್ನು ಕಂಡುಹಿಡಿಯಬಹುದು. ಈ ಸೈಟಿನಲ್ಲಿ ಹಳೆಯ ಮತ್ತು ಅಪರೂಪದ ನೋಟುಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತದೆ. ಇದಲ್ಲದೆ, ಇನ್ನೂ ಅನೇಕ ಸೈಟ್‌ಗಳಿವೆ, ಅದರ ಮೂಲಕ ನೀವು ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡಬಹುದು. ಆದರೆ ನೆನಪಿರಲಿ, ನೊಟುಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಮೊದಲು ಎಲ್ಲಾ ನಿಯಮ ಷರತ್ತುಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಿ.