PPF Scheme : 150 ರೂಪಾಯಿಯನ್ನು 15 ಲಕ್ಷವನ್ನಾಗಿಸುವ ಅವಕಾಶ; ತಕ್ಷಣವೇ ಈ ಕೆಲಸ ಮಾಡಿ
ಈ ಯೋಜನೆಯ ಹೆಸರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್). ಇದರಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಮೇಲೆ ವಾರ್ಷಿಕ 7.1% ಬಡ್ಡಿದರ ಸಿಗಲಿದೆ. ಅಲ್ಲದೆ ಇದರಲ್ಲಿ ತೆರಿಗೆ ವಿನಾಯಿತಿ ಕೂಡಾ ಸಿಗಲಿದೆ. ಹಣದುಬ್ಬರ ಕೂಡಾ ಈ ಸ್ಕೀಂ ಮೇಲೆ ಪರಿಣಾಮ ಬೀರುವುದಿಲ್ಲ. ಇದರಲ್ಲಿ ನಿವ್ವಳ ಲಾಭ ಕೂಡಾ ಹೆಚ್ಚಾಗಿರುತ್ತದೆ.
ಇದಲ್ಲದೆ, ಹೂಡಿಕೆ ಮಾಡುವ ಜನರು 3 ಹಂತಗಳಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತಾರೆ. ಮೊದಲನೆಯದು - ಹೂಡಿಕೆಯ ಮೇಲಿನ ಕಡಿತದ ಲಾಭ. ಎರಡನೆಯದು- ಬಡ್ಡಿಗೆ ಯಾವುದೇ ತೆರಿಗೆ ಪಾವತಿಸಲಾಗುವುದಿಲ್ಲ. ಮತ್ತು ಮೂರನೆಯ ಮೆಚ್ಯುರಿಟಿ ಮೊತ್ತದ ಮೇಲೆ ಕೂಡಾ ತೆರಿಗೆ ವಿಧಿಸಲಾಗುವುದಿಲ್ಲ.
ನೀವು ಪಿಪಿಎಫ್ ಯೋಜನೆಯಲ್ಲಿ ಪ್ರತಿ ತಿಂಗಳು 4,500 ರೂ ಅಥವಾ ಪ್ರತಿದಿನ 150 ರೂಗಳನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ, ಮೆಚ್ಯುರಿಟಿ ವೇಳೆ, ಪ್ರಸ್ತುತ ಬಡ್ಡಿದರದ ಪ್ರಕಾರ, ನಿಮಗೆ 14 ಲಕ್ಷ 84 ಸಾವಿರ ರೂ. ಸಿಗಲಿದೆ. ಅಂದರೆ, ಒಟ್ಟು 8,21,250 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 15 ವರ್ಷಗಳ ನಂತರ ನಿಮಗೆ 14.84 ಲಕ್ಷ ರೂಪಾಯಿ ಸಿಗುತ್ತದೆ.
ಪಿಪಿಎಫ್ ಪ್ರತಿ ತಿಂಗಳ 5ನೇ ತಾರೀಕಿನಂದು ಅಕೌಂಟ್ ನಲ್ಲಿರುವ ಮೊತ್ತಕ್ಕೆ ಬಡ್ಡಿ ವಿಧಿಸುತ್ತದೆ. ಹಾಗಾಗಿ ಪ್ರತಿ ತಿಂಗಲು 5 ನೇ ತಾರೀಕಿನಂದು ಹೋಡುಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ. ನೆನಪಿಡಿ, ಹುಡಿಕೆ ಮಾಡುವಾಗ ದು ದಿನ ಹೆಚ್ಚಾದರೂ, ಇಡೀ 25 ದಿನಗಳಿಗೆ ಬಡ್ಡಿ ಸಿಗುವುದಿಲ್ಲ. ಪ್ರತಿ ತಿಂಗಳು ಈ ತಪ್ಪು ಮಾಡಿದರೆ, 365 ದಿನಗಳಲ್ಲಿ 300 ದಿನಗಳವರೆಗೆ ಬಡ್ಡಿ ಸೌಲಭ್ಯಗಳು ಲಭ್ಯವಿರುವುದಿಲ್ಲ.
ಈ ಯೋಜನೆಯಡಿ ಗರಿಷ್ಠ ಒಂದೂವರೆ ಲಕ್ಷ ರೂಪಾಯಿ ಮತ್ತು ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬಹುದು. ಸೆಕ್ಷನ್ 80 ಸಿ ಅಡಿಯಲ್ಲಿಡಿಡೆಕ್ಷನ್ ಲಾಭ ಸಿಗಲಿದೆ.
ಪಿಪಿಎಫ್ ಸರ್ಕಾರದ ಸುರಕ್ಷತೆಯಲ್ಲಿರುತ್ತದೆ. ಅಸಂಘಟಿತ ವಲಯ, ಸ್ವಂತ ವ್ಯವಹಾರ ಮಾಡುವ ಜನರ ನಿವೃತ್ತಿ ಜೀವನವನ್ನು ಸುರಕ್ಷಿತವಾಗಿಸುವುದು ಈ ಯೋಜನೆಯ ಉದ್ದೇಶ. ಪ್ರಸ್ತುತ, ಅದರ ಲಾಕ್-ಇನ್-ಅವಧಿಯನ್ನು ಕಡಿಮೆ ಮಾಡಲು ಮತ್ತು ನಿಗದಿತ ಅವಧಿಯಲ್ಲಿ ಹಣವನ್ನು ಹಿಂಪಡೆಯುವ ನಿರ್ಧಾರದ ಮೇಲೆ ವಿಚಾರ ವಿಮರ್ಶೆ ನಡೆಯುತ್ತಿದೆ.