ಈ ಎಣ್ಣೆಯಲ್ಲಿ ಕರ್ಪೂರ ಬೆರೆಸಿ ಹಚ್ಚಿದರೆ 20 ನಿಮಿಷದಲ್ಲಿ ಬುಡದಿಂದಲೇ ಪರ್ಮನೆಂಟ್ ಆಗಿ ಕಪ್ಪುಬಣ್ಣಕ್ಕೆ ತಿರುಗುವುದು ಬಿಳಿಕೂದಲು
ಆರೋಗ್ಯಕರ ಮತ್ತು ದಷ್ಟಪುಷ್ಟವಾದ ಕಪ್ಪು ಕೂದಲು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಹೀಗೊಂದು ವೇಳೆ ಇಚ್ಛೆಯಿದ್ದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಫಲ ಸಿಕ್ಕಿಲ್ಲ ಎಂದಾದರೆ ಈ ಪರಿಹಾರವನ್ನು ಅನುಸರಿಸಬಹುದು.
ಕರ್ಪೂರ ಎಣ್ಣೆ. ಇದನ್ನು ಕೂದಲಿಗೆ ಹಚ್ಚುವುದರಿಂದ ದಷ್ಟಪುಷ್ಟವಾದ ಕೋಮಲ ಕೂದಲು ನಿಮ್ಮದಾಗುತ್ತದೆ. ಈ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ನೆತ್ತಿಯ ಚರ್ಮದಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ಹೀಗಾಗಿ ಇದು ಕೂದಲಿನ ಬೆಳವಣಿಗೆಯ ಜೊತೆಗೆ ಬಿಳಿ ಕೂದಲಿನ ಸಮಸ್ಯೆಗೂ ಅಂದುಕೊಂಡದಕ್ಕಿಂತ ವೇಗವಾಗಿ ಪರಿಹಾರ ಸಿಗುತ್ತದೆ.
ಕರ್ಪೂರವು ಆರ್ಧ್ರಕ ಗುಣಗಳನ್ನು ಹೊಂದಿದ್ದು, ಕೂದಲಿನ ಮೇಲೆ ಹಚ್ಚಿದರೆ ಅದು ಶುಷ್ಕತೆಯನ್ನು ತೆಗೆದುಹಾಕುತ್ತದೆ. ಜೊತೆಗೆ ಕರ್ಪೂರವು ಆಂಟಿ-ಡ್ಯಾಂಡ್ರಫ್ ಅಂಶವಾಗಿದ್ದು, ಅದರ ಆಂಟಿ-ಫಂಗಲ್ ಗುಣವು ಉರಿಯೂತವನ್ನು ಕಡಿಮೆ ಮಾಡುತ್ತದೆ. ತೇವಾಂಶವನ್ನು ಒದಗಿಸುವ ಮೂಲಕ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಮಾಲಿನ್ಯದಿಂದಾಗಿ ನೆತ್ತಿಯ ಮೇಲೆ ತುರಿಕೆ ಮತ್ತು ಸುಡುವ ಸಂವೇದನೆ ಇದ್ದರೆ, ಕರ್ಪೂರದ ಎಣ್ಣೆಯನ್ನು ಬಳಸಿ. ಇದು ನೈಸರ್ಗಿಕ ನೋವು ನಿವಾರಕ ಗುಣಗಳನ್ನು ಹೊಂದಿದ್ದು, ಯಾವುದೇ ರೀತಿಯ ಸೋಂಕಿನಿಂದ ಉಂಟಾಗುವ ತುರಿಕೆ ಮತ್ತು ಸುಡುವಿಕೆಯನ್ನು ಕಡಿಮೆ ಮಾಡುತ್ತದೆ.
ಕೂದಲು ಹೆಚ್ಚು ಉದುರುತ್ತಿದ್ದರೆ ಕರ್ಪೂರ ಎಣ್ಣೆಯನ್ನು ಹಚ್ಚಿ. ಇದು ಕೂದಲನ್ನು ಬಲಪಡಿಸುವುದಲ್ಲದೆ, ಕೂದಲಿನ ಕಿರುಚೀಲಗಳು ಬಲಗೊಳ್ಳುವಂತೆ ಮಾಡುತ್ತದೆ. ಇನ್ನು ಬಿಳಿ ಕೂದಲಿನ ಸಮಸ್ಯೆಗೆ ಸಹ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ನೈಸರ್ಗಿಕವಾಗಿ ಕಪ್ಪಾಗಿಡಲು ಸಹಾಯ ಮಾಡುತ್ತದೆ.
ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿ. 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಶಾಂಪೂ ಬಳಸಿ ತೊಳೆಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.