Vastu Shastra: ಈ ವಸ್ತುಗಳನ್ನು ಬೇರೆಯವರಿಂದ ಕಸಿದುಕೊಂಡರೆ ದುರಾದೃಷ್ಟ ನಿಮ್ಮ ಬೆನ್ನೇರುತ್ತದೆ ಎಚ್ಚರ
ರಾತ್ರಿ ಮಲಗುವ ಸಂದರ್ಭದಲ್ಲಿ ನೀವು ನಿಮ್ಮ ಹಾಸಿಗೆಯನ್ನು ಮಾತ್ರ ಬಳಸಬೇಕು. ಇತರರ ಹಾಸಿಗೆಯ ಮೇಲೆ ಮಲಗುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಜತೆಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇನ್ನು ಬೇರೊಬ್ಬರ ವಾಚ್ ಗಳನ್ನು ಧರಿಸುವುದು ಕೂಡ ಒಳ್ಳೆಯದಲ್ಲ. ಗಡಿಯಾರವನ್ನು ಜೀವನದ ಸ್ಥಿತಿಗೆ ಹೋಲಿಸಲಾಗುತ್ತದೆ. ಒಂದು ವೇಳೆ ಬೇರೆಯವರ ಕೈಗಡಿಯಾದ ಧರಿಸಿದರೆ ಅಥವಾ ಕಸಿದುಕೊಂಡರೆ, ಅವರಲ್ಲಿರುವ ಸಮಸ್ಯೆಗಳು ನಿಮಗೆ ತೊಂದರೆಯನ್ನು ನೀಡಬಹುದು.
ಅನೇಕ ಜನರಿಗೆ ಬೇರೆಯವರಿಂದ ಪೆನ್ ಅಥವಾ ಪೆನ್ಸಿಲ್ ಕೇಳುವ ಅಭ್ಯಾಸವಿರುತ್ತದೆ. ಅಥವಾ ಇನ್ನೂ ಕೆಲವರು ಇಂತಹ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಅಶುಭ ಲಕ್ಷಣ. ಜೊತೆಗೆ ಆರ್ಥಿಕ ಸಮಸ್ಯೆ ಕೂಡ ಬರಬಹುದು.
ಅನೇಕ ಜನರಿಗೆ ಬೇರೆಯವರ ಬಟ್ಟೆಗಳನ್ನು ಧರಿಸುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ಆ ವ್ಯಕ್ತಿಯ ದುರದೃಷ್ಟವು ನಿಮಗೆ ಬರಬಹುದು. ಹೀಗಾಗಿ ತಪ್ಪಾಗಿಯೂ ಸಹ ಇನ್ನೊಬ್ಬರ ಬಟ್ಟೆಗಳನ್ನು ಧರಿಸಬೇಡಿ.