Car Price Hiked: ಈ ಕಾರುಗಳನ್ನು ಖರೀದಿಸಬೇಕಾದರೆ ಇನ್ನು ಪಾವತಿಸಬೇಕು ಅಧಿಕ ಬೆಲೆ
ಹೋಂಡಾ ಕಾರ್ ಇಂಡಿಯಾ ತನ್ನ ಹಲವು ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಆಗಸ್ಟ್ 2 ರಿಂದ ಈ ಕಾರುಗಳು ದುಬಾರಿಯಾಗಿವೆ. ಹೋಂಡಾ ಬೆಲೆಗಳನ್ನು ಹೆಚ್ಚಿಸಿರುವ ಕಾರುಗಳಲ್ಲಿ ಪೆಟ್ರೋಲ್ ರೂಪಾಂತರಗಳಾದ Amaze, Jazz, WR-V City ಸೇರಿವೆ. ಅವುಗಳ ಬೆಲೆಯನ್ನು ರೂ 9000 ರಿಂದ ರೂ 16,000ದವರೆಗೆ ಹೆಚ್ಚಿಸಲಾಗಿದೆ. ಕೆಲವು ಡೀಸೆಲ್ ವೆರಿಯೇಂಟ್ ಗಳ ಬೆಲೆಯನ್ನು 80,000 ದಿಂದ ರೂ .1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಟಾಟಾ ಮೋಟಾರ್ಸ್ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ತನ್ನ ಪ್ರಮುಖ ಮಾದರಿಗಳ ಬೆಲೆಗಳನ್ನು ಆಗಸ್ಟ್ 3 ರಿಂದ 0.8 ಶೇಕಡಾ ಹೆಚ್ಚಿಸಿದೆ. ಆದರೆ ಆಗಸ್ಟ್ 31ರವರೆಗೆ ಬುಕಿಂಗ್ ಮಾಡಲಾಗುವ 'ನ್ಯೂ ಫಾರೆವರ್' ಮಾದರಿಯ ಕಾರುಗಳ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಹೇಳಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮುಂತಾದ ಮಾದರಿಗಳು ಟಾಟಾ ಮೋಟಾರ್ಸ್ ಪೋರ್ಟ್ಫೋಲಿಯೊದಲ್ಲಿ ಬರುತ್ತವೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಕಾರುಗಳ ಬೆಲೆಯನ್ನು ಕೂಡ ಹೆಚ್ಚಿಸಿದೆ. ಆಗಸ್ಟ್ 1 ರಿಂದ, ಕಂಪನಿಯು ಟೊಯೋಟಾ ಇನ್ನೋವಾ ಕ್ರಿಸ್ಟಾದ ಬೆಲೆಯನ್ನು 2 ಪ್ರತಿಶತದಷ್ಟು ಹೆಚ್ಚಿಸಿದೆ.
ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಜುಲೈನಲ್ಲಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ತನ್ನ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಮತ್ತು ಇತರ ಮಾದರಿಗಳ ಸಿಎನ್‌ಜಿ ರೂಪಾಂತರಗಳ ಬೆಲೆಯನ್ನು 15,000 ರೂಗಳವರೆಗೆ ಹೆಚ್ಚಿಸಿತ್ತು.