ಕಾರ್ಪೊರೇಟ್ ವೃತ್ತಿ ತೊರೆದು 34 ಸಾವಿರ ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ತ್ರಿಮೂರ್ತಿಗಳು!

Sat, 04 Sep 2021-2:28 pm,

ವಾಸು, ಕಾರ್ತಿಕ್ ಮತ್ತು ಅಜಯ್ ಈ ಮೂವರು ಕೂಡ ಹಣಕಾಸು ಮತ್ತು ತಂತ್ರಜ್ಞಾನವನ್ನು ಸಂಪರ್ಕಿಸುವ ಕಲ್ಪನೆ ಹೊಳೆದ ತಕ್ಷಣವೇ ತಮ್ಮ ಯಶಸ್ವಿ ಕಾರ್ಪೊರೇಟ್ ವೃತ್ತಿಗೆ ಗುಡ್ ಬೈ ಹೇಳಿದರು. ಕಂಪ್ಯೂಟರ್ ಪ್ರೊಗ್ರಾಮ್‌ಗಳು, ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳನ್ನು ಸಕ್ರಿಯಗೊಳಿಸುವ ತಂತ್ರಜ್ಞಾನ ಆಧಾರಿತ ಸಂಸ್ಥೆಯಾದ ಬಿಲ್‌ಡೆಸ್ಕ್(Bill Desk)ಅನ್ನು ಈ ತ್ರಿಮೂರ್ತಿಗಳು ಹುಟ್ಟುಹಾಕಿದರು. ಈ ಮೂವರು ತಮ್ಮ ಉದ್ಯಮವನ್ನು ಆರಂಭಿಸಿದಾಗ ಭಾರತದಲ್ಲಿ 50 ಸಾವಿರಕ್ಕಿಂತ ಹೆಚ್ಚು ಇಂಟರ್ನೆಟ್ ಬಳಕೆದಾರರು ಇರಲಿಲ್ಲ. ಬಿಲ್‌ಡೆಸ್ಕ್ ಸಹ-ಸಂಸ್ಥಾಪಕ ಶ್ರೀನಿವಾಸು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ‘ನಾವು 2000ರಲ್ಲಿ ಬಿಲ್‌ಡೆಸ್ಕ್  ಕಂಪನಿ ಆರಂಭಿಸಿದಾಗ, ಹಣಕಾಸು ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಏನನ್ನಾದರೂ ಸಾಧಿಸಲು ಇದು ಒಂದು ಉತ್ತಮ ಅವಕಾಶವೆಂದು ಭಾವಿಸಿದ್ದೇವು’ ಎಂದು ಹೇಳಿಕೊಂಡಿದ್ದರು.     

ಕಂಪನಿ ಕಾರ್ಯಾಚರಣೆ ಪ್ರಾರಂಭಿಸಿದ 1 ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ, ಈ ತ್ರಿಮೂರ್ತಿಗಳ ಕಂಪನಿ ಬಿಲ್‌ಡೆಸ್ಕ್(Bill Desk) 2007ರ ವೇಳೆಗೆ ಭಾರೀ ಲಾಭ  ಗಳಿಸುತ್ತಿತ್ತು. ಕಂಪನಿಯಲ್ಲಿನ ಮೊದಲ ಹೂಡಿಕೆ 2001ರಲ್ಲಿ ಬಂದಿತು. ಕ್ಲಿಯರ್‌ಸ್ಟೋನ್ ವೆಂಚರ್ ಪಾರ್ಟ್ನರ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ 2006 ರಲ್ಲಿ 7.5 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದವು. 2015 ರಲ್ಲಿ ಈ ಮೂವರು 1 ಬಿಲಿಯನ್ ಡಾಲರ್ ಕಂಪನಿಯ ಮಾಲೀಕರಾದರು. 2021ರ ಆರ್ಥಿಕ ವರ್ಷದಲ್ಲಿ ಕಂಪನಿಯ ಒಟ್ಟು ಆದಾಯವು ಸುಮಾರು 1,800 ಕೋಟಿ ರೂ.ಗಳಷ್ಟಿತ್ತು (ಸುಮಾರು 253 ಮಿಲಿಯನ್ ಅಮೆರಿಕನ್ ಡಾಲರ್) ಬಿಲ್‌ಡೆಸ್ಕ್ ಭಾರತದ ಎಲ್ಲಾ ಬಿಲ್ಲಿಂಗ್ ವಹಿವಾಟುಗಳಲ್ಲಿ ಶೇ.60ರಷ್ಟು ಪಾಲುದಾರಿಕೆ ಹೊಂದಿದೆ.   

ದಕ್ಷಿಣ ಆಫ್ರಿಕಾದ ಟೆಕ್-ದೈತ್ಯ ನಾಸ್ಪರ್ಸ್ ಹೂಡಿಕೆ ಸಂಸ್ಥೆ ಪ್ರೊಸಸ್‌(Process), ಬಿಲ್‌ಡೆಸ್ಕ್ ಅನ್ನು ಖರೀದಿಸಿದೆ. ನಗದು ಒಪ್ಪಂದವನ್ನು 4.7 ಬಿಲಿಯನ್ ಅಮೆರಿಕನ್ ಡಾಲರ್ ಗೆ ವ್ಯವಹಾರ (ಸುಮಾರು 34,376 ಕೋಟಿ ರೂ.) ಮಾಡಲಾಗಿದೆ. ಅಜಯ್ ಕೌಶಲ್, ಕಾರ್ತಿಕ್ ಗಣಪತಿ ಮತ್ತು ಎಂ.ಎನ್. ಶ್ರೀನಿವಾಸು ಅವರು ಕಂಪನಿಯಲ್ಲಿ ಕಂಪನಿಯಲ್ಲಿ ಶೇ.31ರಷ್ಟು ಪಾಲು ಹೊಂದಿದ್ದಾರೆ. ಇದೀಗ ಕಂಪನಿ ಮಾರಾಟದಿಂದ ಪ್ರತಿಯೊಬ್ಬರಿಗೂ ತಲಾ 3,500 ಕೋಟಿ ರೂ. ಸಿಗಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link