IMDb Top Rated Web Series: ಇವೇ ನೋಡಿ ಅತಿಹಚ್ಚು ರೇಟಿಂಗ್ ಪಡೆದಿರುವ ಹಿಂದಿ ವೆಬ್ ಸಿರೀಸ್‌ಗಳು
ಇಂದು ನಾವು ನಿಮಗೆ IMDbಯ ಕೆಲವು ಉನ್ನತ ಶ್ರೇಣಿಯ ಹಿಂದಿ ಸರಣಿಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ನೀವು ಉತ್ತಮ ಕಥಾಹಂದರದ ಜೊತೆಗೆ ಅತ್ಯುತ್ತಮ ಕಂಟೆಟ್ ಇಷ್ಟಪಟ್ಟರೆ, OTTಯಲ್ಲಿ ವೀಕ್ಷಿಸಲು ಉತ್ತಮವಾದದ್ದನ್ನು ಹುಡುಕುತ್ತಿದ್ದರೆ ಈ ಉನ್ನತ ಶ್ರೇಣಿಯ ಹಿಂದಿ ವೆಬ್ ಸೀರೀಸ್‍ಗಳನ್ನು ವೀಕ್ಷಿಸಬಹುದು.
Scam 1992 ಹರ್ಷದ್ ಮೆಹ್ತಾ ಕಥೆಯನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದಾರೆ. ಈ ಸರಣಿಯು IMDbಯ ಅತಿಹೆಚ್ಚು ರೇಟಿಂಗ್ ಪಡೆದ ವೆಬ್ ಸಿರೀಸ್ ಆಗಿದೆ. ಪ್ರತೀಕ್ ಗಾಂಧಿ ಈ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ವೆಬ್ ಸಿರೀಸ್ ಉದ್ಯಮಿ ಹರ್ಷದ್ ಮೆಹ್ತಾ ಜೀವನಾಧಾರಿತ ಕಥೆಯ ಮೇಲೆ ನಿರ್ಮಿಸಲಾಗಿದೆ. ಇದನ್ನು ನೀವು ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು.
ನೀವು YouTubeನಲ್ಲಿ Aspirants ವೆಬ್ ಸಿರೀಸ್ ವೀಕ್ಷಿಸಬಹುದು. IAS ಆಕಾಂಕ್ಷಿಗಳ ತಯಾರಿ ಮತ್ತು ತರಬೇತಿಯ ಮೇಲೆ ಈ ಸರಣಿಯನ್ನು ನಿರ್ಮಿಸಲಾಗಿದೆ. ಈ ವೆಬ್ ಸಿರೀಸ್ ಕಥೆ ವಿಭಿನ್ನವಾಗಿದ್ದು, ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಸರಣಿಯ 2ನೇ ಸೀಸನ್‌ಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ಐಐಟಿಗಳ ಕೋಚಿಂಗ್ ವಿದ್ಯಾರ್ಥಿಗಳ ನಿಜ ಜೀವನ ಹೇಗಿರುತ್ತದೆ ಅನ್ನೋದನ್ನು ತೋರಿಸಿದ್ದಕ್ಕಾಗಿ Kota Factory ವೆಬ್ ಸಿರೀಸ್ ಪ್ರಪಂಚದಾದ್ಯಂತ ಪ್ರೇಕ್ಷಕರಿಗೆ ಇಷ್ಟವಾಗಿದೆ. IMDbಯು ಈ ಸರಣಿಗೆ 9.1 ರೇಟಿಂಗ್ ನೀಡಿದೆ. ನಟ ಜಿತೇಂದ್ರ ಕುಮಾರ್ ಈ ಸರಣಿಯಲ್ಲಿ ಜೀತು ಭಯ್ಯಾ ಪಾತ್ರದ ಮೂಲಕ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ನೀವು ಈ ಸರಣಿಯನ್ನು Netflix ನಲ್ಲಿ ವೀಕ್ಷಿಸಬಹುದು.
ಜಿತೇಂದ್ರ ಕುಮಾರ್, ನೀನಾ ಗುಪ್ತಾ ಮತ್ತು ರಘುವೀರ್ ಯಾದವ್ ಅವರಂತಹ ಪ್ರಸಿದ್ಧ ತಾರೆಗಳು ನಟಿಸಿರುವ ಈ ಅಮೆಜಾನ್ ಸರಣಿಯು IMDbನಿಂದ 8.9 ರೇಟಿಂಗ್ ಪಡೆದಿದೆ. ಈ ಸರಣಿಯ 2ನೇ ಭಾಗ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Rocket Boys ಸೋನಿ ಲಿವ್ ವೆಬ್ ಸರಣಿಯು ದೇಶದ ಭವಿಷ್ಯವನ್ನು ಬದಲಿಸಿದ ಇಬ್ಬರು ಹುಡುಗರ ಕಥೆಯನ್ನು ಆಧರಿಸಿದೆ. ಜಿಮ್ ಸರ್ಭ್, ಇಶ್ವಾಕ್ ಸಿಂಗ್, ರೆಜಿನಾ ಕಸ್ಸಂದ್ರ, ಸಬಾ ಆಜಾದ್, ದಿಬ್ಯೇಂದು ಭಟ್ಟಾಚಾರ್ಯ, ರಜಿತ್ ಕಪೂರ್, ನಮಿತ್ ದಾಸ್ ಮತ್ತು ಅರ್ಜುನ್ ರಾಧಾಕೃಷ್ಣನ್ ಅವರು ಈ ವೆಬ್ ಸರಣಿಯಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಈ ವೆಬ್ ಸಿರೀಸ್ ಅನ್ನು ನೋಡಲೇಬೇಕಾದ ಪಟ್ಟಿಯಲ್ಲೂ ಸೇರಿಸಲಾಗಿದೆ.