Immortal Jellyfish: ಈ ನಿಗೂಢ ಜೀವಿಗೆ ಸಾವೇ ಇಲ್ಲ ಎಂದರೆ ನೀವು ನಂಬುತ್ತೀರಾ!

Tue, 16 Mar 2021-7:11 pm,

1. ಅಮರ ಜೆಲ್ಲಿ ಮೀನು- ಈ ಜೀವದ ಹಸರು ಟುರ್ರಿತಾಪ್ಸಿಸ್ ಧೋರ್ಹ್ನಿ Turritopsis Dohrnii). ಇದು ಜೆಲ್ಲಿ ಮೀನುಗಳ ಒಂದು ಪ್ರಜಾತಿಯಾಗಿದೆ. ಇದನ್ನು Immortal Jellyfish ಎಂದೂ ಕೂಡ ಕರೆಯುತ್ತಾರೆ.  ಗಾತ್ರದಲ್ಲಿ ಇದು ತುಂಬಾ ಚಿಕ್ಕದಾಗಿರುತ್ತದೆ. ಸಂಪೂರ್ಣ ವಿಕಸಿತಗೊಂಡ ಈ ಜೀವದ ಶರೀರದ ಡಯಾಮೀಟರ್ 4.5 mm ಇರುತ್ತದೆ. ಇವುಗಳ ಉದ್ದ ಹಾಗೂ ಅಗಲ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. 

2. ಟುರ್ರಿತಾಪ್ಸಿಸ್ ಧೋರ್ಹ್ನಿ  - ಟುರ್ರಿತಾಪ್ಸಿಸ್ ಧೋರ್ಹ್ನಿ ಗೆ ಯೌವನಾವಸ್ಥೆಯಲ್ಲಿ 8 ಟೆನ್ಟ್ಯಾಕಲ್ ಗಳನ್ನು ಹೊಂದಿರುತ್ತದೆ. ಲೈಂಗಿಕವಾಗಿ ಇದು ಪ್ರಭುದ್ಧವಾದ ಬಳಿಕ ಇದಕ್ಕೆ 80-90 ಟೆನ್ಟ್ಯಾಕಲ್ ಗಳನ್ನು ಹೊಂದುತ್ತದೆ. ಆದರೆ, ಈ ಜೀವ ಸಮುದ್ರದ ತಳಮಟ್ಟದಲ್ಲಿಯೇ ಇರುತ್ತದೆ. ಈ ಜೆಲ್ಲಿ ಫಿಶ್ ನ ಇತರ ಪ್ರಜಾತಿಗಳು ವಿಶ್ವದ ಇತರೆ ಸಾಗರಗಳಲ್ಲಿ ಕಂಡುಬರುತ್ತವೆ.

3. ಇಡೀ ವಿಶ್ವಾದ್ಯಂತ ಇವುಗಳ ಸಾಮ್ರಾಜ್ಯ - ಟುರ್ರಿತಾಪ್ಸಿಸ್ ಧೋರ್ಹ್ನಿ ಮೊದಲು ಪ್ರಶಾಂತ ಮಹಾಸಾಗರದಲ್ಲಿ ಹುಟ್ಟಿಕೊಂಡಿದೆ. ಆದರೆ, ಪ್ರಸ್ತುತ ಇದು ವಿಶ್ವದ ಬಹುತೇಕ ಸಾಗರಗಳಲ್ಲಿ ಕಂಡುಬರುತ್ತದೆ. ವಿಶ್ವಾದ್ಯಂತ ಈ ಪ್ರಜಾತಿ ಹೇಗೆ ಹರಡಿತು ಎಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ. ಏಕೆಂದರೆ ಇದು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತದೆ ಮತ್ತು ಅಷ್ಟೇ ಪಾರದರ್ಶಕ ಕೂಡ ಆಗಿರುತ್ತದೆ. ಈ ಕುರಿತು ಹೇಳುವ  Smithian Tropical Marine Institute Scientist Dr. Maria Migilletta ಇದು ಕ್ರಮೇಣವಾಗಿ ಇಡೀ ವಿಶ್ವಾದ್ಯಂತ ತನ್ನ ಸಾಮ್ರಾಜ್ಯ ಪಸರಿಸಿದೆ ಎನ್ನುತ್ತಾರೆ.

4. ಅಮರ ಜೀವಿಯ ಚಿಕ್ಕ ಲೈಫ್ ಸೈಕಲ್ - ಟುರ್ರಿತಾಪ್ಸಿಸ್ ಧೋರ್ಹ್ನಿ ಸಮುದ್ರದಲ್ಲಿ ವಾಪಾಸ್ ತನ್ನ ರೂಪವನ್ನು ಹೊಸ ರೂಪಕ್ಕೆ ಬದಲಾಯಿಸುತ್ತದೆ. ಹೀಗಾಗಿ ಇದಕ್ಕೆ ವಯಸ್ಸಿಲ್ಲ ಎನ್ನಲಾಗುತ್ತದೆ. ಆದರೆ, ಇದು ತುಂಬಾ ಚಿಕ್ಕದಾದ ಲೈಫ್ ಸೈಕಲ್ ಹೊಂದಿರುತ್ತದೆ. ಸಮುದ್ರದ ತಾಪಮಾನ 20 ರಿಂದ 22 ಡಿಗ್ರಿಗೆ ಏರಿದಾಗ ಇವು 25 ರಿಂದ 30 ದಿನಗಳಲ್ಲಿ ಪ್ರಭುದ್ಧಗೊಂಡು ಮತ್ತೆ ಮಗುವಾಗುತ್ತದೆ. ಒಂದು ವೇಳೆ ಸಮುದ್ರದ ತಾಪಮಾನ 14 ರಿಂದ 25 ಡಿಗ್ರಿ ಮಧ್ಯ ಇದ್ದರೆ ಇವು 18 ರಿಂದ 22 ದಿನಗಳಲ್ಲಿ ಲೈಂಗಿಕವಾಗಿ ಪ್ರಭುದ್ಧತೆಯನ್ನು ಹೊಂದುತ್ತವೆ ಮತ್ತು ಪುನಃ ಮಗುವಾಗುತ್ತವೆ.

5. ಜೆಲ್ಲಿ ಫಿಶ್ ವಯಸ್ಸು ನಿರ್ಧಿಷ್ಟವಾಗಿರುತ್ತದೆ - ಬಹುತೆಕ್ ಜೆಲ್ಲಿ ಫಿಶ್ ಗಳ ವಯಸ್ಸು ಕೆಲವೇ ಗಂಟೆಗಳದ್ದಾಗಿರುತ್ತದೆ. ಆದರೆ, ಕೆಲ ಜೆಲ್ಲಿ ಫಿಶ್ ಗಳು ವಯಸ್ಸು ಒಂದು ತಿಂಗಳವರೆಗೆ ಇರುತ್ತದೆ.  ಆದರೆ, ಟುರ್ರಿತಾಪ್ಸಿಸ್ ಧೋರ್ಹ್ನಿ ಪ್ರಜಾತಿ ಅಮರ ಪ್ರಾಪ್ತಿಯಾಗಿರುತ್ತದೆ. ಇದು ಪ್ರಭುದ್ದಾವಸ್ಥೆ (Medusae) ತಲುಪಿದ ಬಳಿಕ ಮತ್ತೆ ಮಗುವಾಗುತ್ತದೆ  (Polyp). ಇದರ ಶರೀರದಲ್ಲಿ ವಿಶೇಷ ರೀತಿಯ ಕೋಶಗಳಿರುತ್ತವೆ.  

6. ಈ ರೀತಿ ರೂಪಾಂತರಗೊಳ್ಳುತ್ತದೆ - ಶೇ. 20 ರಿಂದ ಶೇ.40 ರಷ್ಟು ಪ್ರಭುದ್ಧವಾದ ಈ ಮೀನು ನೇರವಾಗಿ ಪಾಲಿಪ್ ಆಗಿ ರೂಪಾಂತರಗೊಳ್ಳುತ್ತವೆ. ಮಧ್ಯದಲ್ಲಿ ಅವುಗಳಿಗೆ ಸ್ಟೇಲಾನ್ಸ್ ಆಗುವ ಅವಶ್ಯಕತೆ ಬೀಳುವುದಿಲ್ಲ. ಈ ಸಂಪೂರ್ಣ ಪ್ರಕ್ರಿಯೆ ಎರಡೇ ದಿನಗಳಲ್ಲಿ ನಡೆಯುತ್ತದೆ ಎಂದು ನಿಮಗೆ ಹೇಳಿದರೆ, ನೀವೂ ಆಶ್ಚರ್ಯಚಕಿತರಾಗುವಿರಿ. ಪಾಲಿಪ್ ಪುನಃ ಅಭಿವೃದ್ಧಿಗೊಳ್ಳುತ್ತವೆ. ಇದಲ್ಲದೆ ಸ್ಟೇಲಾನ್ಸ್, ಬ್ರ್ಯಾಂಚೆಸ್, ಆರ್ಗನ್ಸ್, ಟೆಂಟ್ಯಾಕಲ್ಸ್ ಕಾಣಿಸಿಕೊಳ್ಳುತ್ತವೆ. ಇಲ್ಲಿ ವಿಶೇಷತೆ ಎಂದರೆ ಈ ಅವಧಿಯಲ್ಲಿ ಅವುಗಳ ಪ್ರವೃತ್ತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ ಹಾಗೂ ಅವುಗಳಿಗೆ ಯಾವುದೇ ರೀತಿಯ ಹಾನಿ ಕೂಡ ಆಗುವುದಿಲ್ಲ.

7. ಟೆಂಟ್ಯಾಕಲ್ಸ್ ಗಳಿಂದ ಬೇಟೆ - ಟುರ್ರಿತಾಪ್ಸಿಸ್ ಧೋರ್ಹ್ನಿ ಒಂದು ಮಾಂಸಾಹಾರಿ ಜಿಲ್ಲಿ ಫಿಶ್ ಆಗಿದೆ. ಇದು ಜುಪ್ಲೈಂಕಟಾನ್ಸ್  (Zooplankton) ಸೇವಿಸುತ್ತವೆ. ಮೀನುಗಳ ತತ್ತಿ ಹಾಗೂ ಸಣ್ಣ ಮೊಲಸ್ಕ್ ಗಳು ಇವುಗಳ ಇಷ್ಟದ ಆಹಾರ. ಈ ಮೀನಿನ ಮತ್ತೊಂದು ವಿಚಿತ್ರ ಸಂಗತಿ ಎಂದರೆ ಇವು ಆಹಾರ ಸೇವನೆ ಹಾಗೂ ಮಲ ವಿಸರ್ಜನೆ ಬಾಯಿಯಿಂದಲೇ ಮಾಡುತ್ತವಂತೆ. ತನ್ನ ಟೆಂಟ್ಯಾಕಲ್ಸ್ ಗಳಿಂದ ಇವು ಬೇಟೆಯಾಡುತ್ತವೆ. ಉಳಿದ ಜೆಲ್ಲಿ ಫಿಶ್ ಗಳು ಈ ಜೀವಿಗಳನ್ನು ತಿನ್ನುತ್ತವೆ. ಈಜಾಡಲು ಕೂಡ ಇವು ಟೆಂಟ್ಯಾಕಲ್ಸ್ ಗಳ ಬಳಕೆಯನ್ನೇ ಮಾಡುತ್ತವೆ. 

8. ಜೆಲ್ಲಿ ಫಿಶ್ ಗಳನ್ನು ಕ್ಯಾಪ್ಟಿವಿಟಿಯಲ್ಲಿಡುವುದು ಕಷ್ಟ- ಈ ಜೆಲ್ಲಿ ಫಿಶ್ ಗಳು ತುಂಬಾ ಸಾಮಾನ್ಯ ಜೈವಿಕ ಸಂರಚನೆಯನ್ನು ಹೊಂದಿರುತ್ತವೆ. ಹೀಗಾಗಿ ಹಲವು ಬಾರಿ ಬೇರೆ ಜೀವಗಳು ಇವುಗಳನ್ನು ತಿಂದುಹಾಕುತ್ತವೆ. ಇವುಗಳ ಶರೀರ ಶೇ.5 ರಷ್ಟು ಶರೀರ ಹಾಗೂ ಉಳಿದೆಲ್ಲ ಭಾಗ ನೀರಿನಿಂದ ಕೂಡಿರುತ್ತದೆ. ಇವುಗಳನ್ನು ಕ್ಯಾಪ್ಟಿವಿಟಿಯಲ್ಲಿಡುವುದು ತುಂಬಾ ಕಷ್ಟ. ಅಂದರೆ ಇವುಗಳನ್ನು ಸಮುದ್ರದ ಹೊರಗೆ ಬೇರೆ ನೀರಿನಲ್ಲಿ ಹಿಡುದು ಇಡುವುದು ಕಷ್ಟ. ಜಪಾನ್ ನಲ್ಲಿರುವ ಕ್ಯೋಟೋ ಯುನಿವರ್ಸಿಟಿಯ ಪ್ರಾಧ್ಯಾಪಕರೊಬ್ಬರು ಈ ಮೀನನ್ನು ಕೆಲ ಸಮಯದವರೆಗೆ ಸಮುದ್ರದಿಂದ ಹೊರ ನೀರಿನಲ್ಲಿ ಹಿಡಿದಿಟ್ಟು ಹರಸಾಹಸ ಮಾಡಿದ್ದರು. ಶಿನ್ ಕುಬೋತಾ ಹೆಸರಿನ ಈ ವಿಜ್ಞಾನಿ ಈ ಮೀನನ್ನು ಕೆಲ ಸಮಯದವರೆಗೆ ಸಮುದ್ರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿದ್ದರು. ಎರಡು ವರ್ಷಗಳವರೆಗೆ ಅವರು ಈ ಜೀವವನ್ನು ಸಾಕಿದ್ದರು. ಈ ಅವಧಿಯಲ್ಲಿ 11 ಬಾರಿ ಈ ಜೀವ ತನ್ನನ್ನು ತಾನು ಮಗುವಾಗಿಸಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link