ವಾರಕ್ಕೆ 2 ಗ್ಲಾಸ್ ಮೂಸಂಬಿ ಜ್ಯೂಸ್: ಈ ಕಾಯಿಲೆಗಳಿಂದ ಪರ್ಮನೆಂಟ್ ರಿಲೀಫ್… ನೀಡುತ್ತೆ ಹಲವಾರು ಪ್ರಯೋಜನ
ಮೋಸಂಬಿ ಜ್ಯೂಸ್’ನಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ ಮತ್ತು ಇತರ ಪೋಷಕಾಂಶಗಳು ತುಂಬಿರುತ್ತವೆ. ಇದೇ ಕಾರಣದಿಂದ ಇದನ್ನು ದೇಹಕ್ಕೆ ಬಹಳ ಅಗತ್ಯವಾದುದು ಎಂದು ಹೇಳಬಹುದು.
ಮಲಬದ್ಧತೆ: ಮೂಸಂಬಿಯಲ್ಲಿರುವ ಗುಣಗಳು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಒಂದುವೇಳೆ ಮಲಬದ್ಧತೆಯ ಸಮಸ್ಯೆ ಇದ್ದರೆ ಈ ಜ್ಯೂಸ್’ನ್ನು ಸೇವಿಸಬಹುದು.
ತೂಕ ಇಳಿಕೆ: ಮೂಸಂಬಿಯಲ್ಲಿ ಕ್ಯಾಲೋರಿಗಳು ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ತೂಕ ಇಳಿಸಿಕೊಳ್ಳಲು ಬಯಸಿದರೆ, ಮೂಸಂಬಿ ಜ್ಯೂಸ್ ಕುಡಿಯಬಹುದು.
ಕಣ್ಣುಗಳಿಗೆ ಪ್ರಯೋಜನಕಾರಿ: ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಮೂಸಂಬಿ ರಸದಲ್ಲಿ ಕಂಡುಬರುತ್ತವೆ, ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳಿಂದ ದೂರವಿರಬಹುದು.
ಮಧುಮೇಹ: ಮಧುಮೇಹ ಇರುವವರು ಮೂಸಂಬಿ ರಸವನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಗರ್ಭಾವಸ್ಥೆ: ಮೂಸಂಬಿ ರಸದಲ್ಲಿ ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಮೂಳೆಗಳ ಬೆಳವಣಿಗೆಗೆ ಸಹಕಾರಿ.
ನಿರ್ಜಲೀಕರಣ: ಮೂಸಂಬಿ ರಸವು ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದು ನಿಮ್ಮನ್ನು ತಾಜಾವಾಗಿರಿಸಲು ಸಹಾಯ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ: ಮೂಸಂಬಿಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಚರ್ಮದ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)