Shraddha: ಶ್ರಾದ್ಧ ಕಾರ್ಯ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

Sun, 18 Aug 2024-7:10 am,

ಪಿತೃ ಕೋಪ ಅಥವಾ ಪಿತೃ ಶಾಪ ಎನ್ನುವುದು ಅತ್ಯಂತ ಕೆಟ್ಟದ್ದು. ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತಾನ, ವಿವಾಹ ಭಾಗ್ಯ, ಸಮೃದ್ಧಿ ನೆಲೆಸಿರಬೇಕಾದರೆ ಶ್ರಾದ್ಧ ಕಾರ್ಯಗಳನ್ನು ಕಾಲಾನುಸಾರವಾಗಿ ಮಾಡುತ್ತಾ ಬರಬೇಕು. ಇಲ್ಲದೇ ಹೋದರೆ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ.

ಶ್ರದ್ಧೆಯಿಂದ ಮಾಡುವುದನ್ನೇ ಶ್ರಾದ್ಧ ಎನ್ನುತ್ತಾರೆ. ಹೀಗಾಗಿ ಶ್ರಾದ್ಧ ಮಾಡುವಾಗ ನಾವು ಸಂಪೂರ್ಣವಾಗಿ ಮಡಿಯಲ್ಲಿದ್ದು ಶ್ರದ್ಧೆಯಿಂದ ಮಾಡುವುದು ಅಗತ್ಯವೆಂದು ಹೇಳಲಾಗಿದೆ.  

ಪಿತೃ ಪಕ್ಷದಲ್ಲಿ ಶ್ರಾದ್ಧ ಕಾಲ ಮಾಡಲು ಶ್ರೇಷ್ಠ ಸಮಯವಾಗಿದೆ. ನಮ್ಮ ಗತಿಸಿದ ಹಿರಿಯರಿಗೆ ನೀರಿನಲ್ಲಿ ಪಿಂಡ ಬಿಡುವುದು, ಕಾಗೆಗೆ ನೀಡುವುದು, ಗೋವಿಗೆ ನೀಡುವ ಮೂಲಕ ಅವರಿಗೆ ವರ್ಷಕ್ಕೊಮ್ಮೆಯಾದರೂ ಆಹಾರ ತಲುಪುವಂತೆ ಮಾಡಿದರೆ ನಮ್ಮ ಕುಟುಂಬವೂ ನೆಮ್ಮದಿಯಾಗಿರುವುದು.

ತಾಮಸ ಆಹಾರಗಳನ್ನು ಸೇವಿಸದೇ ಹಿಂದಿನ ದಿನದಿಂದಲೇ ಸಾತ್ವಿಕ ಆಹಾರ, ಬ್ರಹ್ಮಚರ್ಯ ಪಾಲಿಸಿ ವ್ರತ ಮಾಡಿ ಪಿತೃಗಳ ಕಾರ್ಯ ಮಾಡುವುದರಿಂದ ನಮ್ಮ ವಂಶಕ್ಕೇ ಸಮೃದ್ಧಿ ಸಿಗುವುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link