2022ರಲ್ಲಿ ಜನ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ಖಾದ್ಯಗಳು ಇವು .!
2022 ರಲ್ಲಿ, ಇಡೀ ದೇಶದಲ್ಲಿ ಶೀತ ಮತ್ತು ಕೆಮ್ಮು ಮತ್ತು ದೌರ್ಬಲ್ಯವನ್ನು ಹೋಗಲಾಡಿಸುವ ಸಲುವಾಗಿ ಕಾಲ್ ಸೂಪ್ ಸೇವಿಸಲಾಗಿದೆ. ಈ ವರ್ಷ ಕಾಲ್ ಸೂಪ್ ಬಗ್ಗೆ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ.
ಊಟದ ತಟ್ಟೆಯಲ್ಲಿ ಉಪ್ಪಿನಕಾಯಿ ಇದ್ದರೆ ಅದರ ಆನಂದವೇ ಬೇರೆ. ಕಳೆದ ವರ್ಷ, ಜನರು ಈ ರುಚಿಕರವಾದ ಮಸಾಲೆ ಉಪ್ಪಿನಕಾಯಿ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಸರ್ಚ್ ಮಾಡಿದ್ದಾರೆ.
ದಕ್ಷಿಣ ಭಾರತದ ಅಡುಗೆಯ ಹುಳಿ-ಸಿಹಿ-ಮಸಾಲೆಯ ರುಚಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇಷ್ಟವಾಗುತ್ತದೆ. ಇಡ್ಲಿ, ದೋಸೆ, ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನ ರುಚಿಗೆ ಮಾರು ಹೋಗದವರೇ ಇಲ್ಲ. ಈ ತಿಂಡಿಗಳ ಬಗ್ಗೆ ಗೂಗಲ್ ನಲ್ಲಿ ಸಾಕಷ್ಟು ಸರ್ಚ್ ಮಾಡಲಾಗಿದೆ.
ರಾಜಸ್ಥಾನಿ ಶೈಲಿಯಲ್ಲಿ ತಯಾರಿಸಿದ ಆಹಾರದ ರುಚಿಗೂ ಬಹಳ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕಾಗಿಯೇ ಜನ ದೇಶ ಮಾತ್ರ ವಿದೇಶದಲ್ಲಿಯೂ ರಾಜಸ್ಥಾನಿ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುತ್ತಾರೆ. ಆದರೆ, 2022 ರಲ್ಲಿ, ರಾಜಸ್ಥಾನಿ ಮ ಕಡಿ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಹುಡುಕಾಟ ನಡೆದಿದೆ.